ಸಂಗ್ರಹ ಚಿತ್ರ 
ವಿದೇಶ

ಚೀನಾದಿಂದ ಕೋವಿಡ್-19 ಸಾವಿನ ಸಂಖ್ಯೆ ಪರಿಷ್ಕರಣೆ: ಎಲ್ಲ ದೇಶಗಳೂ ಈ ಸಮಸ್ಯೆ ಎದುರಿಸುತ್ತಿವೆ ಎಂದ WHO

ಚೀನಾ ಸರ್ಕಾರ ದಿಢೀರನೇ ತನ್ನ ದೇಶದಲ್ಲಾದ ಕೊರೋನಾ ವೈರಸ್ ಸಾವಿನ ಸಂಖ್ಯೆ ಪರಿಷ್ಕರಿಸಿದ ಬೆನ್ನಲ್ಲೇ ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ವಿಶ್ವ ಆರೋಗ್ಯ ಸಂಸ್ಥೆ ಎಲ್ಲ ದೇಶಗಳೂ ಈ ಸಮಸ್ಯೆ ಎದುರಿಸುತ್ತಿವೆ ಎಂದು ಹೇಳಿದೆ.

ವಾಷಿಂಗ್ಟನ್: ಚೀನಾ ಸರ್ಕಾರ ದಿಢೀರನೇ ತನ್ನ ದೇಶದಲ್ಲಾದ ಕೊರೋನಾ ವೈರಸ್ ಸಾವಿನ ಸಂಖ್ಯೆ ಪರಿಷ್ಕರಿಸಿದ ಬೆನ್ನಲ್ಲೇ ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ವಿಶ್ವ ಆರೋಗ್ಯ ಸಂಸ್ಥೆ ಎಲ್ಲ ದೇಶಗಳೂ ಈ ಸಮಸ್ಯೆ ಎದುರಿಸುತ್ತಿವೆ ಎಂದು ಹೇಳಿದೆ.

ನಿನ್ನೆಯಷ್ಟೇ ಕೊರೋನಾ ವೈರಸ್ ಮೂಲ ಸ್ಥಾನ ಚೀನಾದ ಹುಬೈ ಪ್ರಾಂತ್ಯದ ವುಹಾನ್ ನಲ್ಲಿ ಕೊರೋನಾ ವೈರಸ್ ನಿಂದ ಸಾವಿಗೀಡಾದವರ ಸಂಖ್ಯೆಯನ್ನು ಪರಿಷ್ಕರಿಸಲಾಗಿತ್ತು. ವುಹಾನ್ ಆಡಳಿತ ವೈರಸ್ ಸೋಂಕಿತರ ಸಾವಿನ ಪ್ರಮಾಣದಲ್ಲಿ ಶೇ.50ರಷ್ಟು ಏರಿಕೆ ಮಾಡಿತ್ತು.  ಸಾವನ್ನಪ್ಪಿದವರ ಪಟ್ಟಿಗೆ ಸರಿ ಸುಮಾರು 1,290 ಸೋಂಕಿತರನ್ನು ಸೇರಿಸಿತ್ತು. ಇದು ವಿಶ್ವಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಚೀನಾ ತನ್ನ ದೇಶದಲ್ಲಿನ ಸಾವಿನ ಸಂಖ್ಯೆಯನ್ನು ಮರೆಮಾಚುತ್ತಿದೆ ಎಂಬ ಊಹಾಪೋಹಗಳಿಗೆ ಎಡೆ ಮಾಡಿಕೊಟ್ಟಿದೆ.

ಇದೇ ವಿಚಾರವಾಗಿ ಇಂದು ಪ್ರತಿಕ್ರಿಯೆ ನೀಡಿರುವ ವಿಶ್ವ ಆರೋಗ್ಯ ಸಂಸ್ಥೆ ಈ ಸಮಸ್ಯೆ ವಿಶ್ವದ ಎಲ್ಲ ದೇಶಗಳನ್ನೂ ಕಾಡುತ್ತಿದೆ. ಸಾಂಕ್ರಾಮಿಕ ಪಿಡುಗಿನ ಸಂದರ್ಭದಲ್ಲಿ ಪ್ರತೀಯೊಂದು ಪ್ರಾಂತ್ಯಗಳ ಪ್ರತೀಯೊಂದು ಸಾವನ್ನೂ ಲೆಕ್ಕ ಹಾಕುವುದು ಮತ್ತು ಸ್ಪಷ್ಟನೆ ಪಡೆಯುವುದು ಕಷ್ಟದಕೆಲಸ.  ಕೊರೋನಾ ವೈರಸ್ ಸರ್ಕಾರಗಳಿಗೆ ದಿನಕ್ಕೊಂದು ಹೊಸ ತಲೆನೋವು ಸಷ್ಟಿ ಮಾಡುತ್ತಿದೆ. ಎಲ್ಲ ಸಾವುಗಳೂ ಕೊರೋನಾದಿಂದಲೇ ಸಂಭವಿಸಿದೆಯೇ ಎಂಬುದುನ್ನು ಪರಿಶೀಲಿಸಬೇಕು. ಈ ಪ್ರಕ್ರಿಯೆಯಲ್ಲಿ ನಿಖರ ಸಂಖ್ಯೆ ನೀಡಲು ಸಾಧ್ಯವಿಲ್ಲ. ಕೊರೋನಾ ಪೀಡಿತ ಎಲ್ಲ ದೇಶಗಳಲ್ಲೂ ಈ  ಸಮಸ್ಯೆ ಸಾಮಾನ್ಯವಾಗಿದೆ. ಕೆಲ ರೋಗಿಗಳು ಮನೆಯಲ್ಲೇ ಸಾವನ್ನಪ್ಪಿದ್ದಾರೆ. ಕೆಲ ರೋಗಿಗಳ ಸಾವನ್ನು ಅವರ ಕುಟುಂಬಸ್ಥರು ಮುಚ್ಚಿಟ್ಟಿರುತ್ತಾರೆ. ಇಂತಹ ಸಂದರ್ಭಗಳಲ್ಲಿ ನಿಖರ ಮಾಹಿತಿ ಅಸಾಧ್ಯ ಎಂದು ವಿಶ್ವ ಆರೋಗ್ಯ ಸಂಸ್ಥೆ ತಾಂತ್ರಿಕ ವಿಭಾಗದ ಮುಖ್ಯಸ್ಥರಾದ ಮರಿಯಾ ವ್ಯಾನ್  ಕೆರ್ಖೋವೆ ಹೇಳಿದ್ದಾರೆ. 

ಇನ್ನು ವುಹಾನ್ ನಲ್ಲಿ ಕೊರೋನಾ ವೈರಸ್ ನಿಂದ ಸಾವಿಗೀಡಾದವರ ಸಂಖ್ಯೆಯನ್ನು ಪರಿಷ್ಕರಿಸಲಾಗಿತ್ತು. ವುಹಾನ್ ಆಡಳಿತ ವೈರಸ್ ಸೋಂಕಿತರ ಸಾವಿನ ಪ್ರಮಾಣದಲ್ಲಿ ಶೇ.50ರಷ್ಟು ಏರಿಕೆ ಮಾಡಿತ್ತು. ಸಾವನ್ನಪ್ಪಿದವರ ಪಟ್ಟಿಗೆ ಸರಿ ಸುಮಾರು 1,290 ಸೋಂಕಿತರನ್ನು ಸೇರಿಸಿತ್ತು.   ಅಲ್ಲದೆ ಸೋಂಕಿತರ ಸಂಖ್ಯೆ ಕೂಡ 3,869ಕ್ಕೆ ಏರಿಕೆ ಮಾಡಿತ್ತು. ಆ ಮೂಲಕ ಹುಬೈ ಪ್ರಾಂತ್ಯದಲ್ಲಿ ಸೋಂಕಿತರ ಸಂಖ್ಯೆ 50,333 ಏರಿಕೆಯಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಇಂದಿರಾ ಗಾಂಧಿ ಕೂಡ ಹೀಗೆ ಮಾಡಿರಲಿಲ್ಲ': ದೆಹಲಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯುವ ಮುನ್ನ ಅಭಿಜಿತ್ ದೀಪ್ಕೆ; ವಿಡಿಯೋ ಹಂಚಿಕೊಂಡ CJP

Delhi CJP Protest: ಅಭಿಜೀತ್ ದೀಪ್ಕೆ, ಸೌರವ್ ದಾಸ್, ಆಶುತೋಷ್ ರಂಕಾ,ಯೂಟ್ಯೂಬರ್ ಧ್ರುವ್ ರಾಠಿ ಸೇರಿ 200ಕ್ಕೂ ಹೆಚ್ಚು ಮಂದಿ ಪೊಲೀಸ್ ವಶಕ್ಕೆ; Video

CJP ಪ್ರತಿಭಟನೆ: ದೆಹಲಿ ಪೊಲೀಸರ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಕೆ!

ಸ್ಟಾರ್‌ಲಿಂಕ್ ವಿವಾದ: ಭಾರತ ವಸಾಹತಲ್ಲ- Elon Musk ಗೆ ಕಮಲ್ ಹಾಸನ್ ತಿರುಗೇಟು

'ರಾಹುಲ್ ಗಾಂಧಿ ಅವರೇ, ನಿಮ್ಮ ಉದ್ದೇಶಗಳು ಎಂದಿಗೂ ಈಡೇರಲ್ಲ': ವಿಪಕ್ಷದವರದ್ದು 'ನಗರ ನಕ್ಸಲ್' ಮನಸ್ಥಿತಿ; ನಿತಿನ್ ನಬಿನ್