ಕೊರೋನಾಗೆ ಅಮೆರಿಕಾ ಕಂಗಾಲು: 24 ಗಂಟೆಗಳಲ್ಲಿ 1,738 ಮಂದಿಯನ್ನು ಬಲಿ ಪಡೆದ ಮಹಾಮಾರಿ
ರಾಷ್ಟ್ರದಲ್ಲಿ ಕೊರೋನಾ ಮೆರೆಯುತ್ತಿರುವ ಅಟ್ಟಹಾಸವನ್ನು ಹುಟ್ಟುಹಾಕುವಲ್ಲಿ ಅಮೆರಿಕಾ ಹರಸಾಹಸಪಡುತ್ತಿರುವ ನಡುವಲ್ಲೇ ಮಹಾಮಾರಿ ವೈರಸ್ 24 ಗಂಟೆಗಳಲ್ಲಿ 1,738 ಮಂದಿಯನ್ನು ಬಲಿಪಡೆದುಕೊಂಡಿದೆ.
ವಾಷಿಂಗ್ಟನ್: ರಾಷ್ಟ್ರದಲ್ಲಿ ಕೊರೋನಾ ಮೆರೆಯುತ್ತಿರುವ ಅಟ್ಟಹಾಸವನ್ನು ಹುಟ್ಟುಹಾಕುವಲ್ಲಿ ಅಮೆರಿಕಾ ಹರಸಾಹಸಪಡುತ್ತಿರುವ ನಡುವಲ್ಲೇ ಮಹಾಮಾರಿ ವೈರಸ್ 24 ಗಂಟೆಗಳಲ್ಲಿ 1,738 ಮಂದಿಯನ್ನು ಬಲಿಪಡೆದುಕೊಂಡಿದೆ.
ಅಮೆರಿಕಾದಲ್ಲಿ ಕೊರೋನಾ ಅಟ್ಟಹಾಸ ಮೆರೆಯುತ್ತಿದೆ. ಅಮೆರಿಕಾದಲ್ಲಿ ಪ್ರತೀನಿತ್ಯ ಸಾವಿರಕ್ಕೂ ಹೆಚ್ಚು ಜನರು ಸಾವನ್ನಪ್ಪುತ್ತಲೇ ಇದ್ದು, ಈ ವರೆಗೂ 47,750 ಮಂದಿ ಸಾವನ್ನಪ್ಪಿದ್ದಾರೆ. ಅಲ್ಲದೆ, 8,52,703 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ.
ಇನ್ನು ಸೋಂಕಿಕೊಳಗಾಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ 8,52,703 ಮಂದಿಯ ಪೈಕಿ 77,210 ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.
ಈ ನಡುವೆ ಕೊರೋನಾ ನಿಗ್ರಹಕ್ಕೆ ಸದ್ಯದ ಮಟ್ಟಿಗೆ ರಾಮಬಾಣ ಎಂದೇ ಪರಿಗಣಿಸಿ, ಭಾರತದಿಂದ ಭಾರೀ ಪ್ರಮಾಣದಲ್ಲಿ ಆಮದು ಮಾಡಿಕೊಂಡಿದ್ದ ಮಲೇರಿಯಾ ಮಾತ್ರೆ ಹೈಡ್ರಾಕ್ಸಿಕ್ಲೋರೋಕ್ವಿನ್, ಅಮೆರಿಕಾಕ್ಕೆ ಕೈಕೊಟ್ಟಿದೆ ಎಂದು ಹೇಳಲಾಗುತ್ತಿದೆ. ಮಾತ್ರೆಗಳನ್ನು ಬಳಸಿದ ಹೊರತಾಗಿಯೂ ಹೆಚ್ಚಿನ ಪ್ರಮಾಣದಲ್ಲಿ ಜನರು ವೈರಸ್'ಗೆ ಬಲಿಯಾಗುತ್ತಿದ್ದಾರೆಂದು ಹೇಳಲಾಗುತ್ತಿದೆ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.