ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ವಿದೇಶ

ಆಗಸದಲ್ಲಿ ವಿಮಾನಗಳ ಮುಖಾಮುಖಿ ಢಿಕ್ಕಿ; ಅಮೆರಿಕದ ಜನಪ್ರತಿನಿಧಿ ಸೇರಿ 7 ಮಂದಿ ದುರ್ಮರಣ

ಆಗಸದಲ್ಲೇ ವಿಮಾನಗಳ ಮುಖಾಮುಖಿ ಢಿಕ್ಕಿ ಹೊಡೆದ ಪರಿಣಾಮ ಅಮೆರಿಕದ ಜನಪ್ರತಿನಿಧಿ ಸೇರಿದಂತೆ 7 ಮಂದಿ ದುರ್ಮರಣಕ್ಕೀಡಾದ ಘಟನೆ ಅಮೆರಿಕದ ಅಲಾಸ್ಕದಲ್ಲಿ ನಡೆದಿದೆ.

ಸಾಂದರ್ಭಿಕ ಚಿತ್ರ
Srinivasa Murthy VN
Updated On : 1 Aug 2020, 2:35 pm

ಅಲಾಸ್ಕ: ಆಗಸದಲ್ಲೇ ವಿಮಾನಗಳ ಮುಖಾಮುಖಿ ಢಿಕ್ಕಿ ಹೊಡೆದ ಪರಿಣಾಮ ಅಮೆರಿಕದ ಜನಪ್ರತಿನಿಧಿ ಸೇರಿದಂತೆ 7 ಮಂದಿ ದುರ್ಮರಣಕ್ಕೀಡಾದ ಘಟನೆ ಅಮೆರಿಕದ ಅಲಾಸ್ಕದಲ್ಲಿ ನಡೆದಿದೆ.

ಅಲಾಸ್ಕದ ಸೊಲ್ಡೋಟ್ನಾ ವಿಮಾನ ನಿಲ್ದಾಣದ ಬಳಿ ಈ ಅಪಘಾತ ಸಂಭವಿಸಿದ್ದು, ಇಂದು ಮುಂಜಾನೆ ವಿಮಾನಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಅಲಾಸ್ಕದ ಜನ ಪ್ರತಿನಿಧಿ ಗೆರಿ ಕ್ನಪ್ ಅಪಘಾತದಲ್ಲಿ ಮೃತಪಟ್ಟವರ ಪೈಕಿ ಓರ್ವರಾಗಿದ್ದಾರೆ.  ಈ ಭೀಕರ ಅಪಘಾತದಲ್ಲಿ ಯಾರೂ ಬದುಕುಳಿದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಮೂಲಗಳ ಪ್ರಕಾರ ಜನ ಪ್ರತಿನಿಧಿ ಗೆರಿ ಕ್ನಪ್ ಅವರು ವಿಮಾನವೊಂದನ್ನು ಚಲಾಯಿಸುತ್ತಿದ್ದರು ಮತ್ತು ವಿಮಾನದಲ್ಲಿ ಇವರು ಏಕಾಂಗಿಯಾಗಿದ್ದರು. ಮತ್ತೊಂದು ವಿಮಾನದಲ್ಲಿ ನಾಲ್ಕು ಜನ ಪ್ರವಾಸಿಗರು, ಓರ್ವ ಗೈಡ್ ಹಾಗೂ ವಿಮಾನದ ಪೈಲಟ್ ಇದ್ದರು. ಅಪಘಾತದ ಬಳಿಕ ಎಲ್ಲರೂ ಮೃತಪಟ್ಟಿದ್ದಾರೆ ಎನ್ನಲಾಗಿದೆ. 

Advertisement

Advertisement

ವಿಮಾನಗಳು ಡಿಕ್ಕಿ ಹೊಡೆದ ನಂತರ ಅದರ ಭಾಗಗಳು ಅಲಾಸ್ಕಾ ಹೆದ್ದಾರಿಯ ಮೇಲೆ ಬಿದ್ದಿದ್ದವು. ಈ ವೇಳೆ ಸ್ಥಳೀಯರು ವಿಮಾನದೊಳಗಿದ್ದವರನ್ನು ಹೊರಗೆ ಎಳೆದಿದ್ದು, ಈ ವೇಳೆ ಗಂಭೀರವಾಗಿದ್ದ ಓರ್ವ ಪ್ರಯಾಣಿಕನನ್ನು ಆಸ್ಪತ್ರೆಗೆ ಸೇರಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಅದು ಸಫಲವಾಗಲಿಲ್ಲ. ಆತ ಕೂಡ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.  ಅಪಘಾತ ಸಂಭವಿಸಲು ಕಾರಣವೇನು ಎಂದು ತಿಳಿದುಬಂದಿಲ್ಲ 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments