ವಿದೇಶ

ಅಮೆರಿಕದಲ್ಲಿ 47 ಲಕ್ಷ ದಾಟಿದ ಕೊರೋನ ಸೋಂಕಿತರ ಸಂಖ್ಯೆ

Srinivasamurthy VN

ವಾಷಿಂಗ್ಟನ್: ಅಮೆರಿಕದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 47 ಲಕ್ಷ ಗಡಿ ದಾಟಿದ್ದು, 1,56,764 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ.

ಅಮೆರಿಕದಲ್ಲಿ ಶುಕ್ರವಾರ ಕೊರೋನ ಸೋಂಕು ಪ್ರಕರಣಗಳ ಸಂಖ್ಯೆ 47 ಲಕ್ಷ ದಾಟಿದೆ ಎಂದು ಜಾನ್ಸ್ ಹಾಪ್‌ಕಿನ್ಸ್ ವಿಶ್ವವಿದ್ಯಾಲಯದ ಸೆಂಟರ್ ಫಾರ್ ಸಿಸ್ಟಮ್ಸ್ ಸೈನ್ಸ್ ಅಂಡ್ ಎಂಜಿನಿಯರಿಂಗ್ (ಸಿಎಸ್‌ಎಸ್‌ಇ) ತಿಳಿಸಿದೆ. ಅಮೆರಿಕದಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 4,706,180 ಕ್ಕೆ ಏರಿಕೆಯಾಗಿದ್ದು, 1,56,764 ಮಂದಿ ಸಾವನ್ನಪ್ಪಿದ್ದಾರೆ. ಅಂತೆಯೇ 23,28,445 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ ಎಂದು ಸಿಎಸ್‌ಎಸ್‌ಇ ತಿಳಿಸಿದೆ.

ಕ್ಯಾಲಿಫೋರ್ನಿಯಾ ದೇಶದಲ್ಲಿ 500,057 ಪ್ರಕರಣ ವರದಿಯಾಗಿ ಹೆಚ್ಚು ಬಾದಿತ ರಾಜ್ಯವಾಗಿದೆ ನಂತರ ಫ್ಲೋರಿಡಾದಲ್ಲಿ 470,386 ಪ್ರಕರಣಗಳು, ಟೆಕ್ಸಾಸ್ 435,956, ನ್ಯೂಯಾರ್ಕ್ 415,014, ಜಾರ್ಜಿಯಾ 186,352, ನ್ಯೂಜೆರ್ಸಿ 181,660, ಇಲಿನಾಯ್ಸ್ 180,115, ಅರಿಜೋನಾ 174,010 ಮತ್ತು ಉತ್ತರ ಕೆರೊಲಿನಾದಲ್ಲಿ 122,298 ಪ್ರಕರಣಗಳು ದಾಖಲಾಗಿವೆ.

32,689 ಸಾವುನೋವುಗಳೊಂದಿಗೆ ನ್ಯೂಯಾರ್ಕ್ ಅತಿ ಹೆಚ್ಚು ಹಾನಿಗೊಳಗಾದ ರಾಜ್ಯವಾಗಿದೆ, ನಂತರ ನ್ಯೂಜೆರ್ಸಿಯಲ್ಲಿ 15,819, ಸಾವುನೋವುಗಳು, ಕ್ಯಾಲಿಫೋರ್ನಿಯಾ 9,160 ಮತ್ತು ಮ್ಯಾಸಚೂಸೆಟ್ಸ್ 8,609. ಸಾವುನೋವು ವರದಿಯಾಗಿದೆ. ಅಮೆರಿಕದ ನಂತರ ಬ್ರೆಜಿಲ್ ವಿಶ್ವದ ಎರಡನೇ ಅತಿ ಹೆಚ್ಚುಸೋಂಕು ಹೊಂದಿದ ದೇಶವಾಗಿದೆ . ಇಲ್ಲಿಯವರೆಗೆ, ಬ್ರೆಜಿಲ್ 92,475 ಸಾವುಗಳು ಮತ್ತು 2,662,485 ಸೋಂಕು ಪ್ರಕರಣಗಳನ್ನು ದೃಡಟ್ಟಿದೆ. 

SCROLL FOR NEXT