ವಿದೇಶ

ಕಮಲಾ ಹ್ಯಾರಿಸ್ ಗಿಂತಲೂ ನನಗೆ ಹೆಚ್ಚು ಭಾರತೀಯರ ಬೆಂಬಲವಿದೆ: ಡೊನಾಲ್ಡ್ ಟ್ರಂಪ್

Shilpa D

ವಾಷಿಂಗ್ಟನ್: ಅಮೆರಿಕ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದಿಂದ ಸ್ಪರ್ಧಿಸುತ್ತಿರುವ ಬಿಡೆನ್ ಒಂದು ವೇಳೆ ಅಧ್ಯಕ್ಷರಾಗಿ ದೇಶದ ಅಧಿಕಾರ ಹಿಡಿದರೆ ಅಮೆರಿಕದಲ್ಲಿ ಯಾರೊಬ್ಬರೂ ನೆಮ್ಮದಿ, ಸುರಕ್ಷಿತರಾಗಿರಲು ಸಾಧ್ಯವಿಲ್ಲ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಒಂದು ವೇಳೆ ಬಿಡೆನ್ ಅಧ್ಯಕ್ಷರಾದರೆ ತಕ್ಷಣವೇ ಅಮೆರಿಕದಲ್ಲಿನ ಪ್ರತಿ ಪೊಲೀಸ್ ಇಲಾಖೆಯನ್ನೂ ದುರ್ಬಲಗೊಳಿಸುವ ಕಾನೂನನ್ನು ಜಾರಿಗೆ ತರುತ್ತಾರೆ. ಬಹುಶಃ ಕಮಲಾ ಹ್ಯಾರಿಸ್ ಇನ್ನೂ ಕಳಪೆ ಕೆಲಸಗಳನ್ನು ಮಾಡಬಹುದು ಎಂದರು. ಕಮಲಾಗೆ ಭಾರತದ ಪರಂಪರೆಯಿದೆ. ಆದರೆ ಆಕೆಗಿಂತಲೂ ಹೆಚ್ಚಿನ ಭಾರತೀಯರ ಬೆಂಬಲ ನನಗಿದೆ ಎಂದು ನ್ಯೂಯಾರ್ಕ್ ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಹೇಳಿದರು. 

ಕಮಲಾ ಹ್ಯಾರಿಸ್ ಪೊಲೀಸರೆಡೆಗೆ ಹಗೆತನದ ಭಾವ ಹೊಂದಿದ್ದಾರೆ ಎಂದು ಕಿಡಿಕಾರಿದ ಟ್ರಂಪ್, ಪೊಲೀಸರ ವಿರುದ್ಧದ ಎಡಪಂಥೀಯ ಸಮರದಲ್ಲಿ ಕಮಲಾ ಮತ್ತು ಜೋ ಬಿಡೆನ್ ನಡುವಿನಲ್ಲಿ ನಿಂತಿದ್ದಾರೆ ಎಂದು ಹೇಳಿದರು.ಬಿಡೆನ್ ಅಧಿಕಾರಕ್ಕೆ ಬಂದರೆ ಅಮೆರಿಕದಲ್ಲಿ ಯಾರೊಬ್ಬರೂ ಸುರಕ್ಷಿತರಾಗಿರಲು ಸಾಧ್ಯವೇ ಇಲ್ಲ ಪ್ರತಿ ಹಂತದಲ್ಲೂ ದಾಳಿ ಮಾಡಿದರು.

SCROLL FOR NEXT