ವಿದೇಶ

ಕೆನಡಾದ ಡಬಲ್ ಗೇಮ್: ಒಂದೆಡೆ ರೈತರಿಗೆ ಬೆಂಬಲ; ಮತ್ತೊಂದೆಡೆ ಕನಿಷ್ಟ ಬೆಂಬಲ ಬೆಲೆಗೆ ಡಬ್ಲ್ಯೂಟಿಒದಲ್ಲಿ ವಿರೋಧ!

Srinivas Rao BV

ನವದೆಹಲಿ: ಭಾರತದಲ್ಲಿ ರೈತರು ಪ್ರತಿಭಟನೆ ಮಾಡುತ್ತಿರುವುದನ್ನು ಬೆಂಬಲಿಸಿರುವ ಕೆನಡಾ, ಆ ರೈತರು ಯಾವುದಕ್ಕಾಗಿ ಬೇಡಿಕೆ ಇಡುತ್ತಿದ್ದಾರೋ ಅದನ್ನೇ ವಿರೋಧಿಸುವಂತಹ ನಿಲುವನ್ನು ಜಾಗತಿಕ ವೇದಿಕೆಯಲ್ಲಿ ಸ್ಪಷ್ಟವಾಗಿ ತಳೆದಿದೆ. 

ಒಂದೆಡೆ ಭಾರತಕ್ಕೆ ಉಪದೇಶ ಮಾಡುತ್ತಾ, ರೈತರ ಶಾಂತಿಯುತ ಪ್ರತಿಭಟನೆಯನ್ನು ಬೆಂಬಲಿಸ್ತೀವಿ ಅಂತೆಲ್ಲಾ ಹೇಳುತ್ತಿರುವ ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೋ ಈಗ ಡಬ್ಲ್ಯೂಟಿಒ (ವರ್ಲ್ಡ್ ಟ್ರೇಡ್ ಆರ್ಗನೈಸೇಷನ್) ನಲ್ಲಿ ಕನಿಷ್ಟ ಬೆಂಬಲ ಬೆಲೆ ಸೇರಿದಂತೆ ಡಬ್ಲ್ಯೂಟಿಒದಲ್ಲಿ ರೈತರ ಹಿತಾಸಕ್ತಿಗೆ ವಿರುದ್ಧವಾಗಿ ಭಾರತದ ನೀತಿಗಳನ್ನು ಟೀಕಿಸುತ್ತಾ ಬಂದಿದೆ.

ಭಾರತ ಕೆನಡಾದ ದ್ವಿಮುಖ ನೀತಿಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದು, ಕೆನಡಾ ಭಾರತದಲ್ಲಿನ ರೈತರ ಪ್ರತಿಭಟನೆಯನ್ನು ಕೇವಲ ರಾಜಕೀಯ ಕಾರಣಗಳಿಗಾಗಿ ಮಾತ್ರ ಬಳಸಿಕೊಳ್ಳುತ್ತಿದೆ ಎಂದು ಅಸಮಾಧಾನ ತೋರಿದೆ.

ಒಂದೆಡೆ ಭಾರತದ ರೈತರ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸುತ್ತಿರುವ ಕೆನಡಾ, ಡಬ್ಲ್ಯುಟಿಒ ನ್ನಲ್ಲಿ ಭಾರತ ತನ್ನ ರೈತರಿಗೆ ಕೃಷಿ ಸಂಬಂಧಿತ ಬೆಂಬಲ ನೀತಿಗಳನ್ನು ತೀವ್ರವಾಗಿ ಟೀಕಿಸುತ್ತಿದೆ.

ಭಾರತವೂ ಸೇರಿದಂತೆ ಅಭಿವೃದ್ಧಿಶೀಲ ರಾಷ್ಟ್ರಗಳು ಡಬ್ಲ್ಯುಟಿಒದ ಅಗ್ರಿಮೆಂಟ್ ಆನ್ ಅಗ್ರಿಕಲ್ಚರ್ (ಎಒಎ) ನಲ್ಲಿ ಸುಧಾರಣೆ ತರಲು ಒತ್ತಾಯಿಸುತ್ತಿವೆ. 164 ರಾಷ್ಟ್ರಗಳ ಪೈಕಿ 32 ರಾಷ್ಟ್ರಗಳಿಗೆ ಮಾತ್ರವಷ್ಟೇ ಸಿಗುತ್ತಿರುವ ಎಫ್ ಬಿಟಿಟಿ-ಎಎಂಎಸ್ ಸಬ್ಸಿಡಿಗಳನ್ನು ತೆಗೆದುಹಾಕುವ ಬೇಡಿಕೆಯೂ ಈ ಸುಧಾರಣೆಗಳ ಪೈಕಿ ಒಂದಾಗಿದೆ, ಎಒಎ ನಲ್ಲಿ ಈಗಿರುವ ಅಸಮತೋಲನವನ್ನು ಸರಿದೂಗಿಸಲು ಡಬ್ಲ್ಯುಟಿಒ ಸದಸ್ಯ ರಾಷ್ಟ್ರಗಳು ಒಮ್ಮತಕ್ಕೆ ಬರಲು ಈವರೆಗೂ ಸಾಧ್ಯವಾಗಿಲ್ಲ.  

ಜಾಗತಿಕ ಮಟ್ಟದಲ್ಲಿ ವ್ಯಾಪಾರ ವಹಿವಾಟುಗಳಿಗೆ ಪರಿಣಾಮ ಬೀರುವ ದೇಶೀಯವಾಗಿ ಕೃಷಿಗೆ ಸಂಬಂಧಿಸಿದ ನೀತಿಗಳನ್ನು ಅಮೆರಿಕ, ಕೆನಡಾ, ಯುರೋಪಿಯನ್ ಯೂನಿಯನ್ ಸೇರಿದಂತೆ ಅನೇಕ ರಾಷ್ಟ್ರಗಳು ವಿರೋಧಿಸುತ್ತಿದ್ದು, ಚೀನಾ, ಭಾರತ, ಇಂಡೋನೇಷ್ಯಾ ಸೇರಿದಂತೆ ಅನೇಕ ರಾಷ್ಟ್ರಗಳನ್ನು ದೂಷಿಸುತ್ತಿವೆ. 

SCROLL FOR NEXT