ಚೀನಾದಿಂದ 50 ಸಶಸ್ತ್ರ ಡ್ರೋನ್ ಗಳನ್ನು ಖರೀದಿಸಿದ ಪಾಕಿಸ್ತಾನ: ವರದಿ
ಚೀನಾ ತನ್ನ ಮಿತ್ರರಾಷ್ಟ್ರ ಪಾಕಿಸ್ತಾನಕ್ಕೆ 50 ಸಶಸ್ತ್ರ ವಿಂಗ್ ಲೂಂಗ್ ಡ್ರೋನ್ ಗಳನ್ನು ಮಾರಾಟ ಮಾಡಿದೆ. ಈ ಮೂಲಕ ಭಾರತದ ಮತ್ತೊಂದು ಶತ್ರುದೇಶದೊಂದಿಗಿನ ತನ್ನ ಮಿಲಿಟರಿ ಚಟುವಟಿಕೆಯನ್ನು ವಿಸ್ತರಿಸಿದೆ.
ಬೀಜಿಂಗ್: ಚೀನಾ ತನ್ನ ಮಿತ್ರರಾಷ್ಟ್ರ ಪಾಕಿಸ್ತಾನಕ್ಕೆ 50 ಸಶಸ್ತ್ರ ವಿಂಗ್ ಲೂಂಗ್ ಡ್ರೋನ್ ಗಳನ್ನು ಮಾರಾಟ ಮಾಡಿದೆ. ಈ ಮೂಲಕ ಭಾರತದ ಮತ್ತೊಂದು ಶತ್ರುದೇಶದೊಂದಿಗಿನ ತನ್ನ ಮಿಲಿಟರಿ ಚಟುವಟಿಕೆಯನ್ನು ವಿಸ್ತರಿಸಿದ್ದು ಇದು ಭಾರತವು ಅಧಿಕ ಎತ್ತರದ ಪ್ರದೇಶಗಳಲ್ಲಿ ಅತ್ಯಾಧುನಿಕ ಸೇನಾ ಶಸ್ತ್ರಗಳಿಗೆ ಪ್ರತಿಕ್ರುಯೆ ನೀಡುವಷ್ಟು ಸಮರ್ಥ ಸಾಧನಗಳನ್ನು ಹೊಂದಿಲ್ಲದ ಕಾರಣದಿಂದ ಭಾರತಕ್ಕೆ ಎಚ್ಚರಿಕೆಯ ಗಂಟೆಯಾಗಿದೆ.
ಆಫ್ರಿಕಾ ಹಾಗೂ ಏಷ್ಯಾದ ಯುದ್ಧಭೂಮಿಗಳಲ್ಲಿ ವಿಂಗ್ ಲೂಂಗ್ ಡ್ರೋನ್ ಗಳು ಬಹು ಯಶಸ್ವಿಯಾಗಿದ್ದವು.
ಇನ್ನು ಚೀನಾ ಮಾದ್ಯಮಗಳು ಹೇಳಿದಂತೆ ಭಾರತದ ಎತ್ತರದ ಗಡಿಗಳು ಹೆಚ್ಚಿನ ಸಂಖ್ಯೆಯ ಸಶಸ್ತ್ರ ಡ್ರೋನ್‌ಗಳ ದಾಳಿಯನ್ನು ನಿಭಾಯಿಸಲು ಸಾಧ್ಯವಾಗುವುದಿಲ್ಲ
ಆದರೆ ಭಾರತೀಯ ಮಿಲಿಟರಿ ಅಧಿಕಾರಿಗಳು ಸಶಸ್ತ್ರ ಡ್ರೋನ್‌ಗಳು ಗಾಳಿಯ ಪ್ರಬಲತೆ ಹೆಚ್ಚಾಗಿರುವ ಪ್ರದೇಶಗಳಲ್ಲಿ ಹೆಚ್ಚು ಯಶಸ್ವಿಯಾಗಿದೆ ಎಂದು ಗಮನಸೆಳೆದಿದ್ದಾರೆ.
ಶತ್ರುಗಳ ಸಾಂಪ್ರದಾಯಿಕ ರಕ್ಷಾಕವಚವನ್ನು ನಾಶಮಾಡುವ ಮೂಲಕ ಶಸ್ತ್ರಸಜ್ಜಿತ ಚೀನೀ ಮತ್ತು ಟರ್ಕಿಶ್ ಡ್ರೋನ್‌ಗಳು ಲಿಬಿಯಾ, ಸಿರಿಯಾ ಮತ್ತು ಅಜೆರ್ಬೈಜಾನ್ ಸಂಘರ್ಷಗಳಲ್ಲಿ ನಿರ್ಣಾಯಕ ಪಾತ್ರ ವಹಿಸಿವೆ ಎಂದು ಚೀನಾ ಮಾದ್ಯಮಗಳು ವಾದಿಸಿದೆ.
ಇನ್ನು ನಮ್ಮ ಗಡಿಯಲ್ಲಿನ ವಾಯು ಪ್ರದೇಶವನ್ನು ರಾಡಾರ್‌ಗಳು ಬಹಳ ಸೂಕ್ಷ್ಮವಾಗಿ ಗಮನಿಸುತ್ತಿದ್ದು ಸೈನಿಕರು ವೈರಿಗಳೊಡನೆ ತೀವ್ರವಾಗಿ ಸ್ಪರ್ಧಿಸಲು ತಯಾರಿದ್ದಾರೆ ಎಂದು ಭಾರತದ ಮಾಜಿ ವಾಯುಪಡೆಯ ಮುಖ್ಯಸ್ಥರು ಹೇಳಿದ್ದಾರೆ.