ಭಾರತೀಯರಿರುವ ಹಡಗಿಗೆ ನಿರ್ಬಂಧ ಹೇರಿದ ಜಪಾನ್ 
ವಿದೇಶ

ಕರೊನಾ ವೈರಸ್ ಭೀತಿ: ಭಾರತೀಯರಿರುವ ಹಡಗಿಗೆ ನಿರ್ಬಂಧ ಹೇರಿದ ಜಪಾನ್!

ಇಡೀ ಜಗತ್ತನ್ನು ಬೆಚ್ಚಿ ಬೀಳಿಸಿರುವ ಮಾರಕ ಕರೋನಾ ವೈರಸ್ ಭೀತಿಯಿಂದಾಗಿ 138 ಮಂದಿ ಭಾರತೀಯರಿರುವ ಐಶಾರಾಮಿ ಹಡಗನ್ನು ಜಪಾನ್ ನಿರ್ಬಂಧಿಸಿದೆ.

ಟೋಕಿಯೋ: ಇಡೀ ಜಗತ್ತನ್ನು ಬೆಚ್ಚಿ ಬೀಳಿಸಿರುವ ಮಾರಕ ಕರೋನಾ ವೈರಸ್ ಭೀತಿಯಿಂದಾಗಿ 138 ಮಂದಿ ಭಾರತೀಯರಿರುವ ಐಶಾರಾಮಿ ಹಡಗನ್ನು ಜಪಾನ್ ನಿರ್ಬಂಧಿಸಿದೆ.

ವೈರಸ್‌ ಭೀತಿಯಿಂದಾಗಿ ಡೈಮಂಡ್‌ ಪ್ರಿಸ್ಸೆಸ್‌ ಹಡಗು ಜಪಾನ್‌ನಿಂದ ಏಕಾಏಕಿ ನಿರ್ಬಂಧಿಸಲಾಗಿದ್ದು, ಅದರಲ್ಲಿ ಸುಮಾರು 138 ಮಂದಿ ಭಾರತೀಯರು ಪ್ರಯಾಣಿಸುತ್ತಿದ್ದರು ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಜಪಾನ್ ನ ಯೊಕೊಹಾಮಾ ಕರಾವಳಿಯಲ್ಲಿರುವ ಡೈಮಂಡ್‌ ಪ್ರಿನ್ಸೆಸ್‌ ಹಡಗಿನಲ್ಲಿ ಕರೊನಾ ವೈರಸ್‌ ಸೋಂಕಿತರ ಸಂಖ್ಯೆ 61ಕ್ಕೆ ಏರಿದೆ ಎಂದು ಜಪಾನ್‌ ಆರೋಗ್ಯ ಸಚಿವಾಲಯ ಈ ಹಿಂದೆ ಖಚಿತ ಪಡಿಸಿತ್ತು. ಅದರಲ್ಲಿ ಜಪಾನ್‌ನ 28, ಅಮೆರಿಕದ 11, ಕೆನಡಾದ 7, ಚೀನಾದ 3 ಹಾಗೂ ಇಂಗ್ಲೆಂಡ್‌, ನ್ಯೂಜಿಲೆಂಡ್‌, ತೈವಾನ್‌, ಅರ್ಜೆಂಟೀನಾ ಮತ್ತು ಫಿಲಿಪೈನ್ಸ್‌ನ ತಲಾ ಒಬ್ಬರು ಸೋಂಕಿತರು ಎಂದು ಅಧಿಕಾರಿಗಳು ಹೇಳಿದ್ದರು. 

ಮಿಯಾಮಿ ಮೂಲದ ಕಾರ್ನಿವಲ್‌ ಒಡೆತನದ ಡೈಮಂಡ್‌ ಪ್ರಿನ್ಸೆಸ್‌ನಿಂದ ಹಾಂಗ್‌ ಕಾಂಗ್‌ನಲ್ಲಿ ಇಳಿದ ವ್ಯಕ್ತಿಯೊಬ್ಬರಿಗೆ ಸೋಂಕು ಇರುವುದು ದೃಢಪಟ್ಟಿತ್ತು. ಹೀಗಾಗಿ ಸೋಮವಾರ ಯೊಕೊಹಾಮಾಕ್ಕೆ ಆಗಮಿಸಿದ ಹಡಗನ್ನು ಎರಡು ವಾರ ಕಾಲ ತಡೆಹಿಡಿಯಲಾಗಿತ್ತು. ಸುಮಾರು 3,700 ಪ್ರಯಾಣಿಕರು ಪ್ರಯಾಣಿಸಬಹುದಾದ ಸಾಮರ್ಥ್ಯದ ಈ ಹಡಗಿನಲ್ಲಿ, 1,100 ಸಿಬ್ಬಂದಿ ಮತ್ತು 2670 ಪ್ರಯಾಣಿಕರು ಇರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ. 

ಇದೇ ವಿಚಾರವಾಗಿ ಟ್ವೀಟ್ ಮಾಡಿರುವ ಕೇಂದ್ರ ವಿದೇಶಾಂಗ ಸಚಿವ ಜೈಶಂಕರ್‌ ಅವರು, ಹಡಗಿನಲ್ಲಿರುವ ಭಾರತೀಯರಲ್ಲಿ ಯಾರೊಬ್ಬರಿಗೂ ವೈರಸ್‌ ಸೋಂಕು ಇರುವುದು ದೃಢಪಟ್ಟಿಲ್ಲ ಎಂದು ಹೇಳಿದ್ದಾರೆ. 'ಕರೊನಾ ವೈರಸ್‌ ಕಾರಣದಿಂದಾಗಿ ಜಪಾನ್‌ನಿಂದ ಹೊರಗುಳಿದಿರುವ ಡೈಮಂಡ್‌ ಪ್ರಿನ್ಸೆಸ್‌ ಹಡಗಿನಲ್ಲಿ ಅನೇಕ ಭಾರತೀಯ ಸಿಬ್ಬಂದಿ ಹಾಗೂ ಭಾರತೀಯ ಪ್ರಯಾಣಿಕರು ಇದ್ದಾರೆ. ಜಪಾನ್‌ನಲ್ಲಿರುವ ನಮ್ಮ ರಾಯಭಾರ ಕಚೇರಿ ನೀಡಿರುವ ಇತ್ತೀಚಿನ ಮಾಹಿತಿ ಪ್ರಕಾರ ಭಾರತೀಯರಲ್ಲಿ ಯಾರೊಬ್ಬರಿಗೂ ಸೋಂಕು ಇರುವುದು ದೃಢಪಟ್ಟಿಲ್ಲ. ಈ ಬೆಳವಣಿಗೆಯ ಕುರಿತು ನಿಕಟ ಸಂಪರ್ಕದಲ್ಲಿದ್ದೇವೆ’ ಎಂದು ಟ್ವೀಟ್ ಮಾಡಿದ್ದಾರೆ.

ಇದಕ್ಕೂ ಮೊದಲು ರಾಜ್ಯಸಭೆಗೆ ಮಾಹಿತಿ ನೀಡಿದ್ದ ವಿದೇಶಾಂಗ ಸಚಿವರು, ಅಂದಾಜು 80 ಭಾರತೀಯ ವಿದ್ಯಾರ್ಥಿಗಳು ಕರೊನಾ ಪೀಡಿತ ಪ್ರದೇಶವಾದ ಚೀನಾದ ವುಹಾನ್‌ನಲ್ಲಿ ವಾಸಿಸುತ್ತಿದ್ದಾರೆ. ಅವರಲ್ಲಿ 70 ಮಂದಿ ಸ್ಥಳಾಂತರಿಸುವ ಕಾರ್ಯಾಚರಣೆ ವೇಳೆ ಹಿಂದೆ ಸರಿದಿದ್ದಾರೆ ಎಂದು ತಿಳಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್ ಮಾಡಿ ಟ್ರ್ಯಾಪ್​ ಮಾಡಲು ಯತ್ನ': ಡಿ ಕೆ ಶಿವಕುಮಾರ್ ಸ್ಫೋಟಕ ಆರೋಪ; Video

ಶಾಸಕರ ಲೆಟರ್‌ಹೆಡ್'ನಲ್ಲೇ 'ಸತ್ತಿದ್ದಾರೆ' ಎಂದು ಅರ್ಜಿ: ಯತ್ನಾಳ್ ಸೇರಿ ಮೂವರ ವಿರುದ್ಧ FIR ದಾಖಲು

'Evil Dead': ನಟ ನಾನಾ ಪಾಟೇಕರ್ ಸಾವು, #MeToo ಆರೋಪ ಮಾಡಿದ್ದ ನಟಿ ತನುಶ್ರೀ ದತ್ತಾ ಹೇಳಿದ್ದೇನು? ವಿಚಿತ್ರ ಪೋಸ್ಟ್!

ಇದ್ದಕ್ಕಿದ್ದಂತೆ ಬಾಯ್ತೆರೆದ ರಸ್ತೆ, ಕಾರು ಆಪೋಷನ, ಕೂದಲೆಳೆ ಅಂತರದಲ್ಲಿ ಚಾಲಕ ಬಚಾವ್-Video

'SIR' ವಿರುದ್ಧ ಭಾರೀ ಪ್ರತಿಭಟನೆ: ಜ್ಞಾನೇಶ್ ಕುಮಾರ್ Z+ ಭದ್ರತೆ ಮತ್ತಷ್ಟು ಹೆಚ್ಚಿಸಿದ ಕೇಂದ್ರ ಸರ್ಕಾರ!