ವಿದೇಶ

ಚೀನಾದಲ್ಲಿ ಕೊರೋನಾ ವೈರಸ್: ಸಾರ್ಸ್ ಸಾಂಕ್ರಾಮಿಕ ರೋಗವನ್ನು ಮೀರಿದ ಸಾವಿನ ಸಂಖ್ಯೆ,ಹೊಸ ಪ್ರಕರಣಗಳಲ್ಲಿ ಇಳಿಕೆ 

Nagaraja AB

ಬೀಜಿಂಗ್ : ಚೀನಾದಲ್ಲಿ ಕೊರೋನಾ ವೈರಸ್ ನಿಂದ ಮೃತಪಟ್ಟವರ ಸಂಖ್ಯೆ ಭಾನುವಾರ 89 ರಿಂದ 811 ಕ್ಕೆ ಏರಿಕೆಯಾಗಿದೆ. ಇದು 2002-2003ರ ಸಾರ್ಸ್  ಸಾಂಕ್ರಾಮಿಕ ರೋಗದಲ್ಲಿ ಮೃತಪಟ್ಟವರ ಸಂಖ್ಯೆಯನ್ನು ಮೀರಿಸಿದೆ. ಆದರೆ, ಕಡಿಮೆ ಹೊಸ ಪ್ರಕರಣಗಳು ವರದಿಯಾಗಿವೆ. ಇತರ ರಾಷ್ಟ್ರಗಳಲ್ಲಿ  ರೋಗವನ್ನು ತಡೆಯುವ ಪ್ರಯತ್ನಗಳನ್ನು ಹೆಚ್ಚಿಸಿದ್ದರಿಂದ ಅದರ ಹರಡುವಿಕೆ ನಿಧಾನವಾಗಿದೆ.

ಕಳೆದ 24 ಗಂಟೆಗಳಲ್ಲಿ ಸುಮಾರು 2,656 ಹೊಸ ವೈರಸ್ ಪ್ರಕರಣಗಳು ವರದಿಯಾಗಿವೆ, ಅವುಗಳಲ್ಲಿ ಹೆಚ್ಚಿನವು ಕೇಂದ್ರ ಪ್ರಾಂತ್ಯದ ಹುಬೈನಿಂದ ವರದಿಯಾಗಿವೆ. ಡಿಸೆಂಬರ್ ತಿಂಗಳಲ್ಲಿ ಇಲ್ಲಿಯೇ ಮೊದಲ ವ್ಯಕ್ತಿ ಅನಾರೋಗ್ಯಕ್ಕೆ ಒಳಗಾಗಿದ್ದರು. ಕಳೆದ 24 ಗಂಟೆಗಳಲ್ಲಿ ಶೇ, 20 ರಷ್ಟು ಹೊಸ ಪ್ರಕರಣಗಳಲ್ಲಿ ಇಳಿಕೆಯಾಗಿದೆ 

ವಿವಿಧ ಪ್ರದೇಶಗಳ ಜಂಟಿ ನಿಯಂತ್ರಣ ಕಾರ್ಯವಿಧಾನ ಮತ್ತು ಕಟ್ಟುನಿಟ್ಟಾದ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ರಾಷ್ಟ್ರೀಯ ಆರೋಗ್ಯ ಆಯೋಗದ ವಕ್ತಾರ ಮಿ ಫೆಂಗ್ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಜಪಾನ್, ದಕ್ಷಿಣ ಕೊರಿಯಾ, ವಿಯಟ್ನಾಂ, ಮಲೇಷ್ಯಾ, ಯುಕೆ ಮತ್ತು ಸ್ಪೇನ್ ನಲ್ಲಿ ಭಾನುವಾರ ಕೂಡಾ ಹೊಸ ಪ್ರಕರಣಗಳು ವರದಿಯಾಗಿವೆ.  ಚೀನಾದ ಹೊರಗಡೆ 360 ಕ್ಕೂ ಹೆಚ್ಚು ಕೇಸ್ ಗಳು ದೃಢಪಟ್ಟಿವೆ.

ಈ ತಿಂಗಳಲ್ಲಿ ತ್ವರಿತಗತಿಯಲ್ಲಿ ಕಾರ್ಯನಿರ್ವಹಿಸಿದರೆ ಕೊರೋನಾ ವೈರಸ್ ರೋಗ ಹರಡುವಿಕೆಯನ್ನು ಗಣನೀಯ ಪ್ರಮಾಣದಲ್ಲಿ ಕಡಿಮೆ ಮಾಡಬಹುದು ಎಂದು ಕೊಲಂಬಿಯಾ ವಿಶ್ವವಿದ್ಯಾಲಯದ ಸೋಂಕು ಮತ್ತು ರೋಗನಿರೋಧಕ ಶಕ್ತಿ ವಿಭಾಗದ ನಿರ್ದೇಶಕ ಡಾ. ಇಯಾನ್ ಲಿಪಿಕಿನ್ ಹೇಳಿದ್ದಾರೆ. ಸಾರ್ಸ್ ರೋಗ ಉಂಟಾದ ಸಂದರ್ಭದಲ್ಲಿ ಅವರು ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಚೀನಾದ ಆಡಳಿತ ಸಂಸ್ಥೆಗಳಿಗೆ ನೆರವು ನೀಡಿದ್ದರು.

ಬೇಸಿಗೆ ಹವಾಮಾಣ ವೈರಾಣು ಹರಡುವಿಕೆಯನ್ನು ಇಳಿಕೆ ಮಾಡಲಾಗಿದೆ ಎಂದು ಲಿಪಿಕಿನ್ ಹೇಳಿದ್ದಾರೆ ಆದಾಗ್ಯೂ. ಹೊಸ ವರ್ಷದ ರಜೆ ಬಳಿಕ ಕೆಲಸ ಹಿಂದಿರುಗುವವರಲ್ಲಿ ಹೊಸದಾಗಿ ಈ ರೋಗ ಕಂಡುಬಂದರೆ, ವೈರಾಣು ಹರಡುವಿಕೆ ಕ್ರಮವನ್ನು ಇನ್ನಷ್ಟು ವಿಸ್ತರಿಸಬೇಕಾಗುತ್ತದೆ. ಅಲ್ಲದೇ ನಾವು ತೊಂದರೆಯಲ್ಲಿದ್ದೇವೆ ಎಂದು ಭಾವಿಸಬೇಕಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ವುಹಾನ್ ನಗರದಲ್ಲಿ 11 ಮಿಲಿಯನ್ ಜನರಲ್ಲಿ  ಈ ಸೋಂಕು ಹರಡಿರುವ ಶಂಕೆ ಇದ್ದು, ಕಳೆದ ವಾರ 15000 ಬೆಡ್ ಸಾಮರ್ಥ್ಯದ  ಆಸ್ಪತ್ರೆ ನಿರ್ಮಿಸಲಾಗಿತ್ತು. ಈಗ  1 ಸಾವಿರ ಹಾಸಿಗೆ ಸಾಮರ್ಥ್ಯದ ಮತ್ತೊಂದು ಆಸ್ಪತ್ರೆ ತೆರೆಯಲು ಘೋಷಿಸಲಾಗಿದೆ. 

ಭಾನುವಾರ  ವುಹಾನ್ ನಿಂದ 800ಕ್ಕೂ ಹೆಚ್ಚು ಅಮೆರಿಕಾದ ಜನರನ್ನು ಸ್ಥಳಾಂತರಿಸಲಾಗಿದೆ. 200ಕ್ಕೂ ಹೆಚ್ಚು ಬ್ರಿಟನ್ ಹಾಗೂ 95ಕ್ಕೂ ಹೆಚ್ಚಿನ ಸಂಖ್ಯೆಯ ಯುರೋಪಿಯನ್, ಬ್ರೆಜಿಲಿಯನ್,  ಜನರನ್ನು ಸ್ಥಳಾಂತರ ಮಾಡಲಾಗಿದೆ. 

SCROLL FOR NEXT