ಸಂಗ್ರಹ ಚಿತ್ರ 
ವಿದೇಶ

ಕರೋನ ವೈರಸ್ ಮಹಾಮಾರಿಗೆ ಆಸ್ಪತ್ರೆ ಮಾಲೀಕನೇ ಬಲಿ!

ಚೀನಾದ ವುಹಾನ್ ನಗರದಲ್ಲಿ ಕರೋನ ವೈರಸ್ ಮಹಾಮಾರಿ ವಿಶ್ವದಾದ್ಯಂತ ಬಹಳ ಸುದ್ದಿ ಮಾಡಿದೆ.

ಬೀಜಿಂಗ್: ಚೀನಾದ ವುಹಾನ್ ನಗರದಲ್ಲಿ ಕರೋನ ವೈರಸ್ ಮಹಾಮಾರಿ ವಿಶ್ವದಾದ್ಯಂತ ಬಹಳ ಸುದ್ದಿ ಮಾಡಿದೆ. 

ಈಗ ಅದರ ಹೆಸರು ಕೇಳಿದರೆ ಜನ ಬೆಚ್ಚಿಬೀಳುತ್ತಾರೆ. ಮಾರುದ್ದ ಓಡುತ್ತಾರೆ, ಅಲ್ಲಿ ನಿರಂತರ ಮರಣಗಂಟೆ, ಮರಣ  ಮೃದಂಗ ಬಾರಿಸುತ್ತಲೇ ಇದೆ. ಸಾವಿನ  ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಈಗ ನಗರದ ಆಸ್ಪತ್ರೆಯೊಂದರ ನಿರ್ದೇಶಕರೇ  ಕೊರೋನಾ ಸೋಂಕಿಗೆ  ಬಲಿಯಾಗಿದ್ದಾರೆ.
 
ದೇಶಾದ್ಯಂತ ಹರಡಿರುವ ಕೊರೋನಾ ವೈರಸ್  ಇದೇ  ಮೊದಲ ಬಾರಿಗೆ ವೈದ್ಯಕೀಯ ಕ್ಷೇತ್ರದ ಪ್ರಮುಖರು ಬಲಿಯಾಗಿದ್ದಾರೆ ಎಂದು ಚೀನಾ ಸರಕಾರಿ ಮಾಧ್ಯಮಗಳು ವರದಿ ಮಾಡಿವೆ.

ಕಳೆದ ವರ್ಷಾಂತ್ಯದಲ್ಲಿ ವುಹಾನ್ ನಗರದಲ್ಲಿ ಪತ್ತೆಯಾಗಿದೆ ಎನ್ನಲಾದ ಕೊರೋನಾ ವೈರಸ್ ಸೋಂಕು  ಚೀನಾದಲ್ಲಿ  72 ಸಾವಿರ ಜನರಿಗೆ ಜನರಿಗೆ ತಗಲಿದ್ದು, ಈವರೆಗೆ ಸುಮಾರು ಎರಡು ಸಾವಿರ ಜನರನ್ನೂ ಬಲಿತೆಗೆದುಕೊಂಡಿದೆ. 

ವುಹಾನ್ನಲ್ಲಿರುವ ವುಚಾಂಗ್ ಆಸ್ಪತ್ರೆಯ ನಿರ್ದೇಶಕರಾದ ಲಿಯು ಝಿಮಿಂಗ್ ಮಂಗಳವಾರ ಬೆಳಗ್ಗೆ ಮೃತಪಟ್ಟಿದ್ದಾರೆ. ಝಿಮಿಂಗ್ರನ್ನು ಬದುಕಿಸಿಕೊಳ್ಳಲು ನಡೆಸಿದ ಎಲ್ಲ ಪ್ರಯತ್ನಗಳು ವಿಫಲವಾಗಿವೆ ಎಂದೂ ಸರಕಾರಿ ಪ್ರಸಾರ ಸಂಸ್ಥೆ ಸಹ  ವರದಿ ಮಾಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಇಂಧನ ಸ್ಥಾವರಗಳ ಮೇಲಿನ ದಾಳಿಯನ್ನು ನಿಲ್ಲಿಸಲು ರಷ್ಯಾ-ಉಕ್ರೇನ್ ಒಪ್ಪಿಕೊಂಡಿವೆ: ಟ್ರಂಪ್ ಘೋಷಣೆ

ಕೊನೆಯ ಓವರ್‌ನಲ್ಲಿ ಭಾರತಕ್ಕೆ ವಿಂಡೀಸ್ ವಿರುದ್ಧ ರೋಚಕ ಜಯ: T20 ಸರಣಿಯಲ್ಲಿ 2-1 ಮುನ್ನಡೆ!

'We're Sorry': ಅಭಿಜಿತ್ ದೀಪ್ಕೆಗೆ ಅಜ್ಜಿಯ ಸಾವಿನ ಬಗ್ಗೆ ತಿಳಿಸಿದ್ದ ಮಹಿಳಾ ಪೊಲೀಸ್; ಹೇಗಿತ್ತು CJP ನಾಯಕನ ಪ್ರತಿಕ್ರಿಯೆ...: ವಿಡಿಯೋ ವೈರಲ್!

'ಮತದಾನದ ಹಕ್ಕನ್ನೇ ಕಸಿದರೆ ಯಾವ ಪಕ್ಷವೂ ಸುರಕ್ಷಿತವಾಗಿರಲ್ಲ': SIR ವಿರುದ್ಧ ದೇಶಾದ್ಯಂತ ಹೋರಾಟಕ್ಕೆ CJP ಕರೆ

ಸ್ಟಿಂಗ್‌ ಆಪರೇಷನ್ ಆರೋಪ: ಶಾಂಗ್ರೀಲಾ ಹೋಟೆಲ್‌ನಲ್ಲಿ ಯಾರ ಜೊತೆ ಕುಳಿತಿದ್ರಿ; ಸಿಎಂ ಶಿವಕುಮಾರ್ ವಿರುದ್ಧ HDK ಹೊಸ ಬಾಂಬ್