ವಿದೇಶ

ಖುರೇಷಿ ನಂತರ ಪಾಕಿಸ್ತಾನ ಆರೋಗ್ಯ ಸಚಿವರಿಗೂ ಕೊರೋನಾ ಸೋಂಕು

Shilpa D

ಲಾಹೋರ್: ಪಾಕಿಸ್ತಾನ ಆರೋಗ್ಯ ಸಚಿವ ಜಾಫರ್ ಮಿರ್ಜಾ ಅವರಿಗೆ ಕೊರೋನಾ ದೃಢಪಟ್ಟಿದೆ, ವಿದೇಶಾಂಗ ಸಚಿವ ಮೊಹಮದ್ ಖುರೇಶಿ ನಂತರ  ಆರೋಗ್ಯ ಸಚಿವರಿಗೂ ಕೊರೋನಾ ತಗುಲಿದೆ.

ನನಗೆ ಕೊರೋನಾ ಸೋಂಕು ತಗುಲಿದೆ, ವೈದ್ಯರ ಸಲಹೆ ಮೇರೆಗೆ ನಾನು ಐಸೋಲೇಷನ್ ನಲ್ಲಿದ್ದೇನೆ, ನನಗಾಗಿ ಪ್ರಾರ್ಥಿಸಿ, ನನ್ನ ಸಂಪುಟ ಸಹೋದ್ಯೋಗಿಗಳು ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.

ಇನ್ನೂ ಕೊರೋನಾ ಪಾಸಿಟಿವ್ ಎಂದು ತಿಳಿದ ಮೇಲೆ ಖುರೇಷಿ ಹೋಮ್ ಕ್ವಾರಂಟೈನ್ ನಲ್ಲಿರುವುದಾಗಿ ತಿಳಿಸಿದ್ದಾರೆ.

SCROLL FOR NEXT