ಜಿನಿವಾ: ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆ ವಿಶ್ವಾದ್ಯಂತ 1.71 ಕೋಟಿ ಮೀರಿದೆ. ಈ ಕಾಯಿಲೆಯಿಂದ 669,235 ಕ್ಕೂ ಹೆಚ್ಚು ಸಾವುಗಳು ದಾಖಲಾಗಿವೆ ಎಂದು ವಲ್ಡೋಮೀಟರ್ ಡೇಟಾ ವರದಿಗಳು ತಿಳಿಸಿವೆ.
ವಲ್ಡೋಮೀಟರ್ ಡೇಟಾ ವರದಿಗಳ ಪ್ರಕಾರ, ಕಳೆದ 24 ಗಂಟೆಗಳಲ್ಲಿ 284,042 ಹೊಸ ಸೋಂಕುಗಳು ಮತ್ತು 5,274 ಕರೋನವೈರಸ್ ಸಂಬಂಧಿತ ಸಾವುನೋವುಗಳು ವಿಶ್ವದಾದ್ಯಂತ ದಾಖಲಾಗಿವೆ ಎಂದು ತಿಳಿದುಬಂದಿದೆ.
ವಿಶ್ವದ ಅತೀ ಹೆಚ್ಚು ಸೋಂಕಿತರನ್ನು ಹೊಂದಿ ಟಾಪ್ 10 ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿರುವ ಅಮೆರಿಕಾದಲ್ಲಿ ಈ ವರೆಗೂ ಬರೋಬ್ಬರಿ 4,568,037 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, 153,840 ಮಂದಿ ಬಲಿಯಾಗಿದ್ದಾರೆ.
ಎರಡನೇ ಸ್ಥಾನದಲ್ಲಿರುವ ಬ್ರೆಜಿಲ್ ನಲ್ಲಿ ಸೋಂಕಿತರ ಸಂಖ್ಯೆ 2,555,518ಕ್ಕೆ ಏರಿಕೆಯಾಗಿದ್ದು, 90,188 ಮಂದಿ ಸಾವನ್ನಪ್ಪಿದ್ದಾರೆ. ಇನ್ನು ಮೂರನೇ ಸ್ಥಾನದಲ್ಲಿರುವ ಭಾರತದಲ್ಲಿ ಈ ವರೆಗೂ 1,584,384 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, 35,003 ಮಂದಿ ಬಲಿಯಾಗಿದ್ದಾರೆ.