ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ವಿದೇಶ

ಕೊರೋನಾ ವೈರಸ್ ಗೆ ಯುವಕರೂ ಬಲಿಯಾಗುತ್ತಿದ್ದಾರೆ: ತೀವ್ರ ಕಳವಳ ವ್ಯಕ್ತಪಡಿಸಿದ ವಿಶ್ವ ಆರೋಗ್ಯ ಸಂಸ್ಥೆ

ಜಗತ್ತಿನ 213ಕ್ಕೂ ಹೆಚ್ಚು ದೇಶಗಳಲ್ಲಿ ಮರಣ ಮೃದಂಗ ಭಾರಿಸುತ್ತಿರುವ ಕೊರೋನಾ ವೈರಸ್ ಗೆ ಯುವಕರೂ ಕೂಡ ಬಲಿಯಾಗುತ್ತಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತೀವ್ರ ಕಳವಳ ವ್ಯಕ್ತಪಡಿಸಿದೆ.

ವಿಶ್ವ ಆರೋಗ್ಯ ಸಂಸ್ಥೆ-ಟೆಡ್ರೊಸ್ ಅಧಾನೊಮ್
Srinivasa Murthy VN
Updated On : 31 Jul 2020, 3:27 pm

ವಾಷಿಂಗ್ಟನ್: ಜಗತ್ತಿನ 213ಕ್ಕೂ ಹೆಚ್ಚು ದೇಶಗಳಲ್ಲಿ ಮರಣ ಮೃದಂಗ ಭಾರಿಸುತ್ತಿರುವ ಕೊರೋನಾ ವೈರಸ್ ಗೆ ಯುವಕರೂ ಕೂಡ ಬಲಿಯಾಗುತ್ತಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತೀವ್ರ ಕಳವಳ ವ್ಯಕ್ತಪಡಿಸಿದೆ.

ಕೋವಿಡ್-19 ಜಾಗತಿಕ ನಿರ್ವಹಣೆ ಕುರಿತಂತೆ ಮಾತನಾಡಿರುವ ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಅವರು, 'ವಿಶ್ವದಾದ್ಯಂತ ಯುವ ಜನರೂ ಸಹ ಮಾರಣಾಂತಿಕ ಕೊರೋನಾ ವೈರಸ್‌ಗೆ ತುತ್ತಾಗಿ ಬಲಿಯಾಗುತ್ತಿದ್ದಾರೆ. ಭವಿಷ್ಯದಲ್ಲೂ ಯುವಕರು ಈ ಸೋಂಕಿಗೆ ಬಲಿಯಾಗಬಹುದು ಎಂದು ಎಚ್ಚರಿಕೆ ನೀಡಿದ್ದಾರೆ. 

'ಪ್ರಸ್ತುತ ವಿಶ್ವದಾದ್ಯಂತ  17.3 ಮಿಲಿಯನ್ ಜನರಿಗೆ ಕೊರೋನಾ ಸೋಂಕು ತಗುಲಿದೆ. ಈ ಪೈಕಿ ಅನೇಕ ದೇಶಗಳಲ್ಲಿ ಯುವಕರಿಗೂ ಸೋಂಕು ತಗುಲಿರುವುದು ಮತ್ತು ಯುವಕರ ಮೃತ್ಯುವಿಗೆ  ಕೊರೋನಾ ಕಾರಣವಾಗುತ್ತಿದೆ. ಹೀಗಾಗಿ ಯುವಕರೂ ಸಹ ಎಲ್ಲರಂತೆ ತಮ್ಮನ್ನು ತಾವು ರಕ್ಷಿಸಿಕೊಳ್ಳಿ. ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಿ. ನಾವು ಈ ಹಿಂದೆ ಅನುಸರಿಸುತ್ತಿದ್ದ ನಮ್ಮ ಕಾರ್ಯ ವಿಧಾನವನ್ನು ಬದಲಿಸಿಕೊಳ್ಳಬೇಕಿದೆ. ಕೊರೋನಾ ವೈರಸ್ ಬಂದಾಕ್ಷಣ ಜೀವನ ಇಲ್ಲಿಗೆ ಮುಕ್ತಾಯವಾಗುವುದಿಲ್ಲ. ನಾವು ವೈರಸ್ ನೊಂದಿಗೆ ಸೆಣಸಿ ಬದುಕುವುದನ್ನು ರೂಢಿಸಿಕೊಳ್ಳಬೇಕು ಎಂದು ಅಧಾನೊಮ್ ಕಳವಳ ವ್ಯಕ್ತಪಡಿಸಿದ್ದಾರೆ.

Advertisement

Advertisement

ಈ ಹಿಂದೆ ಕೊರೋನಾವನ್ನು ಸೋಲಿಸಲು ಸಾಮೂದಾಯಿಕ ರೋಗ ನಿರೋಧಕ ಶಕ್ತಿಯಿಂದ ಮಾತ್ರ ಸಾಧ್ಯ. ಹೆಚ್ಚು ಯುವಕರಿಗೆ ಸೋಂಕು ತಗುಲಬೇಕು, ಯುವಕರಲ್ಲಿರುವ ರೋಗ ನಿರೋಧಕ ಶಕ್ತಿಯಿಂದ ಮಾತ್ರ ಕೊರೋನಾವನ್ನು ಓಡಿಸಲು ಸಾಧ್ಯ ಎನ್ನಲಾಗಿತ್ತು. ಆದರೆ ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಹೊರಹಾಕಿರುವ ಮಾಹಿತಿ ಆಘಾತಕ್ಕೆ ಕಾರಣವಾಗಿದೆ. 

ವಿಶ್ವದಾದ್ಯಂತ ಕೋವಿಡ್-19 ಜಾಗತಿಕ ತುರ್ತುಸ್ಥಿತಿ ಘೋಷಿಸಿ 6 ತಿಂಗಳಾಗಿದೆ. ಈ ನಡುವೆ 17.3 ಮಿಲಿಯನ್ ಜನ ಈ ಸೋಕಿಗೆ ತುತ್ತಾಗಿದ್ದು, ಎಲ್ಲಾ ದೇಶಗಳು ಕೋವಿಡ್ ಲಸಿಕೆ ಪ್ರಯೋಗಕ್ಕೆ ಮುಂದಾಗಿವೆ. 

Related Article

ಕೊರೋನಾ ವೈರಸ್ ಸೋಂಕಿನ ಪ್ರಮಾಣ ದೊಡ್ಡವರಿಗಿಂತ ಮಕ್ಕಳಲ್ಲೇ 100ಪಟ್ಟು ಅಧಿಕ: ಸ್ಫೋಟಕ ಮಾಹಿತಿ

ಒಂದೇ ಡೋಸ್: ಕೋತಿಗೆ ತಗುಲಿದ್ದ ಕೋವಿಡ್ ಸೋಂಕು ನಿವಾರಿಸಿದ ಜೆ&ಜೆ ಸಂಸ್ಥೆಯ ಲಸಿಕೆ!

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement