ಸಂಗ್ರಹ ಚಿತ್ರ 
ವಿದೇಶ

ಖಾಯಂ ಅಲ್ಲದ ಸದಸ್ಯ ದೇಶಗಳ ಆಯ್ಕೆಗೆ ಚುನಾವಣೆ: ಭದ್ರತಾ ಮಂಡಳಿ ಸೇರುವ ಭಾರತದ ಕನಸು ನನಸಿಗೆ ಒಂದೇ ಹೆಜ್ಜೆ ಬಾಕಿ!

ದಶಕಗಳಿಂದಲೂ ಮರೀಚಿಕೆಯಾಗಿದ್ದ ವಿಶ್ವ ಸಂಸ್ಥೆಯ ಭದ್ರತಾ ಮಂಡಳಿ ಸೇರುವ ಭಾರತದ ಕನಸು ನನಸಾಗುವ ಮತ್ತೊಂದು ಅಪೂರ್ವ ಅವಕಾಶ ಒದಗಿ ಬಂದಿದ್ದು, 2021–22ನೇ ಸಾಲಿನ ಖಾಯಂ ಅಲ್ಲದ ಸದಸ್ಯ ದೇಶಗಳ ಆಯ್ಕೆಗೆ ಚುನಾವಣೆ ಘೋಷಣೆಯಾಗಿದೆ.

ವಾಷಿಂಗ್ಟನ್: ದಶಕಗಳಿಂದಲೂ ಮರೀಚಿಕೆಯಾಗಿದ್ದ ವಿಶ್ವ ಸಂಸ್ಥೆಯ ಭದ್ರತಾ ಮಂಡಳಿ ಸೇರುವ ಭಾರತದ ಕನಸು ನನಸಾಗುವ ಮತ್ತೊಂದು ಅಪೂರ್ವ ಅವಕಾಶ ಒದಗಿ ಬಂದಿದ್ದು, 2021–22ನೇ ಸಾಲಿನ ಖಾಯಂ ಅಲ್ಲದ ಸದಸ್ಯ ದೇಶಗಳ ಆಯ್ಕೆಗೆ ಚುನಾವಣೆ ಘೋಷಣೆಯಾಗಿದೆ.

ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ಇದೇ ಬುಧವಾರ ಚುನಾವಣೆ ನಡೆಯಲಿದ್ದು, ಈ ಚುನಾವಣೆಯಲ್ಲಿ ಭಾರತ ಸುಲಭವಾಗಿ ಆಯ್ಕೆಯಾಗುವ ನಿರೀಕ್ಷೆಯಿದೆ. 2021–22ನೇ ಸಾಲಿನ ಖಾಯಂ ಅಲ್ಲದ ಸದಸ್ಯ ರಾಷ್ಟ್ರವಾಗಿ ಬಲಿಷ್ಠ ಭದ್ರತಾ ಮಂಡಳಿಯನ್ನು ಭಾರತ ಸೇರುವ ವಿಶ್ವಾಸವಿದೆ. 75ನೇ ಅಧಿವೇಶನದ ಅಧ್ಯಕ್ಷ, ಭದ್ರತಾ ಮಂಡಳಿಯ ಐದು ಖಾಯಂ ಅಲ್ಲದ ಸದಸ್ಯ ದೇಶಗಳು ಹಾಗೂ ಆರ್ಥಿಕ–ಸಾಮಾಜಿಕ ಮಂಡಳಿಯ ಸದಸ್ಯ ಹುದ್ದೆಗೆ 193 ಸದಸ್ಯ ರಾಷ್ಟ್ರಗಳ ವಿಶ್ವಸಂಸ್ಥೆಯ ಸಾಮಾನ್ಯಸಭೆಯು ಚುನಾವಣೆ ನಡೆಸಲಿದೆ. ಕೋವಿಡ್-19 ಕಾರಣದಿಂದ ಮತದಾನಕ್ಕೆ ವಿಶೇಷ ವ್ಯವಸ್ಥೆ ಕಲ್ಪಿಸಲಾಗಿದೆ. 

ಏಷ್ಯಾ–ಪೆಸಿಫಿಕ್ ಭಾಗದಿಂದ ಭಾರತ ಸ್ಪರ್ಧಿಸುತ್ತಿದ್ದು, ಈ ಭಾಗದಿಂದ ಚುನಾವಣಾ ಸ್ಪರ್ಧಾ ಕಣದಲ್ಲಿರುವ ಏಕೈಕ ದೇಶವಾಗಿದೆ. ಭಾರತದ ಉಮೇದುವಾರಿಕೆಯನ್ನು 55 ಸದಸ್ಯ ದೇಶಗಳ ಏಷ್ಯಾ–ಪೆಸಿಫಿಕ್ ಗುಂಪು ಅನುಮೋದಿಸಿದೆ. ಚೀನಾ, ಪಾಕಿಸ್ತಾನ ಕೂಡ ಭಾರತದ ಆಯ್ಕೆಗೆ ಬೆಂಬಲ ಸೂಚಿಸಿರುವುದು ಭಾರತದ ಗೆಲುವನ್ನು ಸುಲಭ ಮಾಡಿದೆ.  ಉಳಿದಂತೆ ಒಟ್ಟು ಆಫ್ರಿಕಾ ಹಾಗೂ ಏಷ್ಯಾ–ಪೆಸಿಫಿಕ್ ಭಾಗದಿಂದ ಗಿಜ್ಬೌಟಿ, ಹಾಗೂ ಕೀನ್ಯಾ ಸ್ಪರ್ಧೆಯಲ್ಲಿದ್ದು, ಭಾರತ ಹಾಗೂ ಕೀನ್ಯಾ ದೇಶಗಳು ಆಯ್ಕೆಗೆ ಅನುಮೋದನೆ ಪಡೆದಿವೆ ಎನ್ನಲಾಗಿದೆ. 

ಪ್ರತಿ ವರ್ಷ ಎರಡು ವರ್ಷಗಳ ಅವಧಿಗೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಕಾಯಂ ಅಲ್ಲದ ಸದಸ್ಯ ದೇಶಗಳ ಆಯ್ಕೆಗೆ ಚುನಾವಣೆ ನಡೆಯುತ್ತದೆ. 10 ಸದಸ್ಯ ಸ್ಥಾನಗಳನ್ನು ವಿಭಾಗವಾರು ಹಂಚಿಕೆ ಮಾಡಲಾಗಿದೆ. ಮೂರನೇ ಎರಡರಷ್ಟು ಬಹುಮತ ಪಡೆಯುವ ದೇಶಗಳು ಚುನಾವಣೆಯಲ್ಲಿ ಆಯ್ಕೆಯಾಗಲಿವೆ.  ವಿಶ್ವಸಂಸ್ಥೆಯ ಸಂಸ್ಥಾಪಕ ಸದಸ್ಯ ದೇಶಗಳಲ್ಲಿ ಒಂದಾಗಿರುವ ಭಾರತವು ಭದ್ರತಾ ಮಂಡಳಿಯಲ್ಲಿ ಕಾಯಂ ಅಲ್ಲದ ಸದಸ್ಯ ದೇಶವಾಗಿ ಎರಡು ವರ್ಷಗಳ ಅವಧಿಗೆ ಆಯ್ಕೆಯಾಗುತ್ತಿರುವುದು ಮಹತ್ವದ ಬೆಳವಣಿಗೆ ಎಂದು ವಿಶ್ವಸಂಸ್ಥೆಯ ಭಾರತದ ಪ್ರತಿನಿಧಿ ಟಿ.ಎಸ್. ತಿರುಮೂರ್ತಿ ಹೇಳಿದ್ದಾರೆ. 

ಭಾರತ ಈ ಹಿಂದೆ ಹಲವು ಭಾರಿ ಭದ್ರತಾ ಮಂಡಳಿಯ ಕಾಯಂ ಅಲ್ಲದ ಸದಸ್ಯ ದೇಶವಾಗಿ ಆಯ್ಕೆಯಾಗಿತ್ತು. 2011–12ರಲ್ಲಿ ಕೊನೆಯದಾಗಿ ಆಯ್ಕೆಯಾಗಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥ ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

'ಡೆವಿಲ್‌' ಸಿನಿಮಾದ '‘ಇದ್ರೆ ನೆಮ್ಮದಿಯಾಗ್ ಇರ್ಬೇಕ್' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT