ವಿದೇಶ

ಕ್ಸಿ ಜಿನ್‌ಪಿಂಗ್, ಆರಿಫ್ ಅಲ್ವಿ ನಡುವಿನ ಮಾತುಕತೆಯಲ್ಲಿ ಕಾಶ್ಮೀರ ವಿಷಯ ಪ್ರಸ್ತಾಪ

Nagaraja AB

ಬೀಜಿಂಗ್: ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮತ್ತು ಪಾಕಿಸ್ತಾನ ಅಧ್ಯಕ್ಷ ಆರಿಫ್ ಅಲ್ವಿ ನಡುವೆ ಮಂಗಳವಾರ ನಡೆದ ಮಾತುಕತೆ ವೇಳೆಯಲ್ಲಿ ಕಾಶ್ಮೀರ ವಿಷಯ ಪ್ರಸ್ತಾಪವಾಗಿದೆ. ಈ ಸಂದರ್ಭ ಕಾಶ್ಮೀರ ಭಾಗದಲ್ಲಿನ  ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಹೆಚ್ಚು ಗಮನ ಹರಿಸಿರುವುದಾಗಿ ಚೀನಾ ಒತ್ತಿ ಹೇಳಿದೆ. 

ಜಮ್ಮು- ಕಾಶ್ಮೀರದ ಪರಿಸ್ಥಿತಿ ಬಗ್ಗೆ ಉಭಯ ದೇಶಗಳು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿವೆ. ಪ್ರಸ್ತುತದಲ್ಲಿನ ತುರ್ತು ವಿಷಯಗಳು, ಸ್ಥಾನಮಾನ, ಕಳವಳ ಸೇರಿದಂತೆ ಪ್ರಸ್ತುತದಲ್ಲಿನ ಬೆಳವಣಿಗೆಗಳ ಬಗ್ಗೆ ಪಾಕಿಸ್ತಾನ ಚೈನಾದೊಂದಿಗೆ ಹಂಚಿಕೊಂಡಿದೆ ಎಂದು ಚೈನಾ ವಿದೇಶಾಂಗ ಸಚಿವಾಲಯದ ವೆಬ್ ಸೈಟ್ ನಲ್ಲಿ ಜಂಟಿ ಹೇಳಿಕೆಯನ್ನು ಪೋಸ್ಟ್ ಮಾಡಲಾಗಿದೆ 

ಪ್ರಸ್ತುತ ಪರಿಸ್ಥಿತಿ ಬಗ್ಗೆ ಹೆಚ್ಚು ಗಮನ ಹರಿಸುತ್ತಿರುವುದಾಗಿ ಹೇಳಿರುವ ಚೀನಾ,  ಭದ್ರತಾ ಮಂಡಳಿ ನಿರ್ಣಯಗಳು ಮತ್ತು ಶಾಂತಿಯುತವಾಗಿ ಕಾಶ್ಮೀರ ವಿಷಯವನ್ನು ಪರಿಹರಿಸಿಕೊಳ್ಳುವಂತೆ ಚೀನಾ ಪುನರುಚ್ಚರಿಸಿದೆ. ಯಾವುದೇ ಏಕಪಕ್ಷೀಯತೆಯನ್ನು ವಿರೋಧಿಸುವುದಾಗಿ ಚೀನಾ ಹೇಳಿರುವುದಾಗಿ ತಿಳಿಸಲಾಗಿದೆ. 

 ಭಯೋತ್ಪಾದನೆಯ ವಿರುದ್ಧ ಹೋರಾಡುವ ತಮ್ಮ ಬದ್ಧತೆಯನ್ನು ಚೀನಾ ಮತ್ತು ಪಾಕಿಸ್ತಾನ ಜಂಟಿ ಹೇಳಿಕೆಯಲ್ಲಿ ಪುನರುಚ್ಚರಿಸಿವೆ. ಭಯೋತ್ಪಾದನೆಗೆ ಹಣಕಾಸು ಪೂರೈಕೆ ವಿರುದ್ಧ ಪಾಕಿಸ್ತಾನ ಕೈಗೊಂಡ ಕ್ರಮಗಳು ಹಾಗೂ ಹಣಕಾಸು ಕ್ರಿಯಾ ಕಾರ್ಯಪಡೆಯ ಕ್ರಿಯಾ ಯೋಜನೆ, ಚೀನಾ- ಪಾಕಿಸ್ತಾನ ಆರ್ಥಿಕ ಕಾರಿಡಾರ್ ಮತ್ತಿತರ ವಿಚಾರಗಳ ಕುರಿತಂತೆ ಉಭಯ ದೇಶಗಳ ನಾಯಕರು ಚರ್ಚೆ ನಡೆಸಿದ್ದಾರೆ ಎಂದು ಹೇಳಲಾಗಿದೆ.

SCROLL FOR NEXT