ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ವಿದೇಶ

ವಿಶ್ವದೆಲ್ಲೆಡೆ ಕೊರೋನಾ ರುದ್ರತಾಂಡವ: ಸಾವಿನ ಸಂಖ್ಯೆ 10,000ಕ್ಕೆ ಏರಿಕೆ, ಚೀನಾ ಮೀರಿಸಿದ ಇಟಲಿ, ಒಂದೇ ದಿನ 427 ಮಂದಿ ಸಾವು

ವಿಶ್ವದಾದ್ಯಂತ ಕೊರೋನಾ ವೈರಸ್ ತನ್ನ ರುದ್ರತಾಂಡವವನ್ನು ಮುಂದುವರೆಸುತ್ತಿದ್ದು, ಮಹಾಮಾರಿ ವೈರಸ್'ಗೆ ಜಗತ್ತಿನಾದ್ಯಂದ 10,000 ಮಂದಿ ಬಲಿಯಾಗಿದ್ದಾರೆ. ಇದರಂತೆ ಸೋಂಕಿತರ ಸಂಖ್ಯೆ 244,421 ಕ್ಕೆ ಏರಿಕೆಯಾಗಿದೆ.

ಸಂಗ್ರಹ ಚಿತ್ರ
Manjula VN
Updated On : 20 Mar 2020, 1:55 pm

ಪ್ಯಾರಿಸ್: ವಿಶ್ವದಾದ್ಯಂತ ಕೊರೋನಾ ವೈರಸ್ ತನ್ನ ರುದ್ರತಾಂಡವವನ್ನು ಮುಂದುವರೆಸುತ್ತಿದ್ದು, ಮಹಾಮಾರಿ ವೈರಸ್'ಗೆ ಜಗತ್ತಿನಾದ್ಯಂದ 10,000 ಮಂದಿ ಬಲಿಯಾಗಿದ್ದಾರೆ. ಇದರಂತೆ ಸೋಂಕಿತರ ಸಂಖ್ಯೆ 244,421 ಕ್ಕೆ ಏರಿಕೆಯಾಗಿದೆ. 

ವಿಶ್ವದ 145 ದೇಶಗಳಲ್ಲಿ ಕೊರೋನಾ ವೈರಸ್ ಕಾಣಿಸಿಕೊಂಡಿದ್ದು, ಈವರೆಗೂ 244,421 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ ಎಂದು ವರದಿಗಳು ತಿಳಿಸಿವೆ. 

ಕೊರೋನಾ ಪೀಡಿತ ರಾಷ್ಟ್ರವೆಂದು ಕರೆಯಲಾಗುತ್ತಿದ್ದ ಚೀನಾದಲ್ಲಿ ಇದೀಗ ವೈರಸ್ ಆಶ್ಚರ್ಯಕರ ರೀತಿಯಲ್ಲಿ ನಿಯಂತ್ರಣಕ್ಕೆ ಬಂದಿದ್ದು, ಇದೀಗ ಆ ಸ್ಥಾನಕ್ಕೆ ಇಟಲಿ ಸಾಗತೊಡಗಿದೆ. 

Advertisement

Advertisement

ಇಟಲಿಯಲ್ಲಿ ಗುರುವಾರ ಒಂದೇ ದಿನ ವೈರಸ್'ಗೆ 427 ಮಂದಿ ಬಲಿಯಾಗಿದ್ದು, ಮೃತರ ಸಂಖ್ಯೆ 3,245ಕ್ಕೆ ಏರಿಕೆಯಾಗಿದೆ. ಸೋಂಕಿತರ ಸಂಖ್ಯೆ 41,000ಕ್ಕೂ ಹೆಚ್ಚು ಕಂಡುಬಂದಿದೆ. 

ಇಟಲಿಯಲ್ಲಿ ಈ ವರೆಗೂ 41,000 ಮಂದಿಯಲ್ಲಿ ಸೋಂಕು ಕಂಡು ಬಂದಿದ್ದರೆ, ಜರ್ಮನಿ, ಇರಾನ್ ಮತ್ತು ಸ್ಪೇನ್ ರಾಷ್ಟ್ರಗಳಲ್ಲಿ 15,000 ಮಂದಿಯಲ್ಲಿ ಪತ್ತೆಯಾಗಿದೆ. ಇನ್ನು ಅಮೆರಿಗಾದಲ್ಲಿ 13,000 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, 200 ಮಂದಿ ಬಲಿಯಾಗಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments