ವಿದೇಶ

ಕೊರೋನಾ ಸಾವಿನ ಸಂಖ್ಯೆಯಲ್ಲಿ ಚೀನಾವನ್ನೂ ಹಿಂದಿಕ್ಕಿದ ಸ್ಪೇನ್! ಮಾರಕ ರೋಗಕ್ಕೆ 3,434 ಮಂದಿ ಬಲಿ

Raghavendra Adiga

ಮ್ಯಾಡ್ರಿಡ್: ಯುರೋಪ್ ರಾಷ್ಟ್ರ ಸ್ಪೇನ್ ನಲ್ಲಿ ಕೊರೋನಾ ಸಾವಿನ ಪ್ರಕರಣ ಮಿತಿಮೀರಿದ್ದು ಕೊರೋನಾ ಜನ್ಮದಾತ ರಾಷ್ಟ್ರ ಚೀನಾವನ್ನು ಮೀರಿಸಿದೆ. ಸ್ಪೇನ್ ನಲ್ಲಿ ಇದುವರೆಗೆ 3,434 ಮಂದಿ ಮಾರಕ ಕೊರೋನಾಗೆ ಬಲಿಯಾಗಿದ್ದಾರೆ. ಕಳೆದ ಇಪ್ಪತ್ತನಾಲ್ಕು ತಾಸಿನಲ್ಲಿ ಒಟ್ಟಾರೆ 738 ಮಂದಿ ಸಾವಿಗೀಡಾಗಿದ್ದಾರೆ.

ಕೊರೋನಾವೈರಸ್ ಸಾಂಕ್ರಾಮಿಕ ರೋಗವನ್ನು ನಿವಾರಣೆ ಮಾಡುವ ಉದ್ದೇಶದಿಂದ ಸ್ಪೇನ್ ಕಳೆದ 11 ದಿನಗಳಿಂದ ಲಾಕ್ ಡೌನ್ ಆಗಿದೆ. ಸಧ್ಯ ಆ ರಾಷ್ಟ್ರದಲ್ಲಿ47,610 ಜನರಿಗೆ ಸೋಂಕು ತಗುಲಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ಅಧಿಕಾರಿಗಳು ಪರೀಕ್ಷೆಯನ್ನು ಚುರುಕುಗೊಳಿಸುತ್ತಿದ್ದಂತೆ, ಪ್ರಕರಣಗಳ ಸಂಖ್ಯೆಯು ಶೇಕಡಾ 20 ರಷ್ಟು ಹೆಚ್ಚಳವಾಗಿದೆ.ಇದೇ ಅವಧಿಯಲ್ಲಿ ಸಾವಿನ ಸಂಖ್ಯೆಯಲ್ಲಿ ಕೂಡ  27 ಶೇಕಡಾ ಏರಿಕೆಯಾಗಿದೆ.

ಏಪ್ರಿಲ್ 14 ರವರೆಗೆ ರಾಷ್ಟ್ರೀಯ ಲಾಕ್‌ಡೌನ್ ಹೊರತಾಗಿಯೂ, ಸಾವಿನ ಪ್ರಮಾಣ ಮತ್ತು ಸೋಂಕಿತರ ಸಂಖ್ಯೆಎರಡೂ ಹೆಚ್ಚುತ್ತಲೇ ಇವೆ.ಈ ವಾರ ಇನ್ನಷ್ಟು ಕೆಟ್ಟದಾಗಿರಲಿದೆ ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

"ನಾವು ಅಗ್ರಸ್ಥಾನದತ್ತ ಸಾಗುತ್ತಿದ್ದೇವೆ." ಎಂದು ಸಚಿವಾಲಯದ ತುರ್ತು ಸಂಯೋಜಕರಾದ ಫರ್ನಾಂಡೊ ಸೈಮನ್ ಅಂಕಿಅಂಶಗಳನ್ನು ಪ್ರಕಟಿಸಿ ಹೇಳಿದ್ದಾರೆ.

ಲಾಕ್‌ಡೌನ್ ಅಪೇಕ್ಷಿತ ಪರಿಣಾಮವನ್ನು ಬೀರುತ್ತದೆಯೆ ಎಂದು ಶೀಘ್ರದಲ್ಲೇ ಸ್ಪಷ್ಟವಾಗುತ್ತದೆ ಎಂದು ಆರೋಗ್ಯ ಅಧಿಕಾರಿಗಳು ಹೇಳಿದ್ದು ಮ್ಯಾಡ್ರಿಡ್ ಪ್ರದೇಶದಲ್ಲಿ 14,597 ಸೋಂಕು ಪ್ರಕರಣಗಳು ದಾಖಲಾಗಿದೆ.  1,825 ಸಾವುಗಳು ಸಂಭವಿಸಿದ್ದು ಇದು ಒಟ್ಟಾರೆ ರಾಷ್ಟ್ರದಲ್ಲಾದ ಸಾವಿನ ಶೇ.53 ಪ್ರಮಾಣವಾಗಿದೆ.

SCROLL FOR NEXT