ಅಮೆರಿಕಾದಲ್ಲಿ ಕೊರೋನಾ ವೈರಸ್ ಗೆ ಒಂದೇ ದಿನ 2,333 ಮಂದಿ ಸಾವು
ಅಮೆರಿಕಾದಲ್ಲಿ ಕೊರೋನಾ ರಣಕೇಕೆ ಹಾಕುತ್ತಿದ್ದು, ಮಹಾಮಾರಿ ವೈರಸ್ ಒಂದೇ ದಿನ ಬರೋಬ್ಬರಿ 2,333 ಮಂದಿಯನ್ನು ಬಲಿಪಡೆದುಕೊಂಡಿದೆ.
ವಾಷಿಂಗ್ಟನ್: ಅಮೆರಿಕಾದಲ್ಲಿ ಕೊರೋನಾ ರಣಕೇಕೆ ಹಾಕುತ್ತಿದ್ದು, ಮಹಾಮಾರಿ ವೈರಸ್ ಒಂದೇ ದಿನ ಬರೋಬ್ಬರಿ 2,333 ಮಂದಿಯನ್ನು ಬಲಿಪಡೆದುಕೊಂಡಿದೆ.
ಈವರೆಗೂ ಅಮೆರಿಕಾದಲ್ಲಿ ಹೆಮ್ಮಾರಿಗೆ 71,022 ಮಂದಿ ಬಲಿಯಾಗಿದ್ದು ಸೋಮವಾರವಷ್ಟೇ ಅಮೆರಿಕಾದಲ್ಲಿ 1,015 ಮಂದಿ ಬಲಿಯಾಗಿದ್ದರು. ಇದು ಅಮೆರಿಕಾದಲ್ಲಿ ದಾಖಲಾದ ಒಂದು ದಿನದ ಕನಿಷ್ಟ ಸೋಂಕಿತರ ಪ್ರಮಾಣವೆಂದೇ ಹೇಳಲಾಗಿತ್ತು.
ಅಮೆರಿಕಾ ರಾಷ್ಟ್ರದಲ್ಲಿ ವೈರಸ್ ನಿಯಂತ್ರಮಕ್ಕೆ ಬರುವ ಬೆಳವಣಿಗೆಗಳು ಕಂಡು ಬರುತ್ತಿದೆ ಎಂಬ ಭರವಸೆಗಳು ಜನರಲ್ಲಿ ಮೂಡುತ್ತಿರುವ ನಡುವಲ್ಲೇ ಇದೀಗ ಮತ್ತೆ ಅಮೆರಿಕಾದಲ್ಲಿ ಮಹಾಮಾರಿ 2,333 ಮಂದಿಯನ್ನು ಬಲಿ ಪಡೆದುಕೊಂಡಿದೆ. ಇದರಿಂದಾಗಿ ಅಲ್ಲಿನ ಜನತೆಯಲ್ಲಿ ವೈರಸ್ ಕುರಿತ ಆತಂಕ ಮತ್ತಷ್ಟು ಹೆಚ್ಚಾಗಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.