ವಿದೇಶ

ಲಾಕ್ ಡೌನ್ ವೇಳೆ ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ, ಭೂಕಬಳಿಕೆ, ಶ್ರೀಮಂತರ ಕೊಲೆ, ಅತ್ಯಾಚಾರ!

Vishwanath S

ಗುವಾಹಟಿ: ಮಹಾಮಾರಿ ಕೊರೋನಾ ಲಾಕ್‌ಡೌನ್ ಸಮಯದಲ್ಲಿ ಬಾಂಗ್ಲಾದೇಶದಲ್ಲಿ ಹಿಂದೂಗಳ ಕಿರುಕುಳ ಹೆಚ್ಚಾಗಿದೆ ಎಂದು ವಿಶ್ವ ಹಿಂದೂ ಒಕ್ಕೂಟ ಆರೋಪಿಸಿದೆ.

ಕಳೆದ ತಿಂಗಳಲ್ಲಿ ಅಂಗಡಿಗಳ ಲೂಟಿ, ಉದ್ಯಮಿ ಕೊಲೆ, ಭೂಕಬಳಿಕೆ, ದೇವಾಲಯಗಳ ನೆಲಸಮ ಮತ್ತು ವಿಗ್ರಹಗಳ ಧ್ವಂಸ, ದೇಶ ತೊರೆಯುವಂತೆ ಹಿಂದೂ ಕುಟುಂಬಗಳಿಗೆ ಒತ್ತಾಯ. ಇನ್ನು ಮಹಿಳೆಯರು, ಹೆಣ್ಣು ಮಕ್ಕಳನ್ನು ಅಪಹರಿಸಿ ಅತ್ಯಾಚರಿಸುತ್ತಿದ್ದಾರೆ ಎಂದು ಫೆಡರೇಶನ್ ಗಂಭೀರ ಆರೋಪ ಮಾಡಿದೆ. 

ಏಪ್ರಿಲ್ ನಲ್ಲಿ ಹಿಂದೂಗಳ 12 ಅಂಗಡಿಗಳನ್ನು ಕೊಳ್ಳೆ ಹೊಡೆದಿದ್ದಾರೆ. ಇಬ್ಬರು ಉದ್ಯಮಿಗಳ ಬರ್ಬರ ಹತ್ಯೆ, 307 ಏಕರೆಯಷ್ಟು ಹಿಂದೂಗಳ ಭೂಮಿಯನ್ನು ಸ್ಥಳೀಯ ರೌಡಿಗಳಿಂದ ಕಬ್ಜ. ಎರಡು ದೇವಾಲಯಗಳ ನೆಲಸಮ, ವಿಗ್ರಹಗಳ ಧ್ವಂಸ, 21 ಹಿಂದೂ ಕುಟಂಬಗಳನ್ನು ಬಲವಂತವಾಗಿ ದೇಶದಿಂದ ಹೊರದಬ್ಬಲಾಗಿದೆ ಮತ್ತು 14 ಕುಟುಂಬಸ್ಥರು ದೇಶವನ್ನು ತೊರೆದಿದ್ದಾರೆ ಎಂದು ಫೆಡರೇಶನ್ ಆರೋಪಿಸಿದೆ. 

ಏಪ್ರಿಲ್ ನಲ್ಲಿ ನಾಲ್ಕು ಹಿಂದೂ ಹುಡುಗಿಯರನ್ನು ಅಪಹರಿಸಲಾಗಿದ್ದು ಇತರ ಆರು ಹಿಂದೂ ಹುಡುಗಿಯರು ಮತ್ತು ಮಹಿಳೆಯರ ಮೇಲೆ ಅತ್ಯಾಚಾರ ಮಾಡಲಾಗಿದೆ. ಹತ್ತು ಮಂದಿಯನ್ನು ಅತ್ಯಾಚಾರಕ್ಕೆ ಯತ್ನಿಸಲಾಗಿದ್ದು ಮೂವರು ಹಿಂದೂ ಹುಡುಗಿಯರನ್ನು ಇಸ್ಲಾಂಗೆ ಮತಾಂತರಗೊಳಿಸಲಾಗಿದೆ ಎಂದು ಹೇಳಿದೆ. 

ಬಾಂಗ್ಲಾದೇಶದಲ್ಲಿ ದಿನದಿಂದ ದಿನಕ್ಕೆ ಮಾನವ ಹಕ್ಕುಗಳ ಪರಿಸ್ಥಿತಿ ಹದಗೆಡುತ್ತಿದೆ ಆದರೆ ದುರದೃಷ್ಟವಶಾತ್ ಇನ್ನೂ ಯಾರನ್ನೂ ಬಂಧಿಸಲಾಗಿಲ್ಲ ಎಂದು ಫೆಡರೇಶನ್ ವಿಷಾದ ವ್ಯಕ್ತಪಡಿಸಿದೆ. 

SCROLL FOR NEXT