ನವದೆಹಲಿ: ಕಾಶ್ಮೀರ ಭಾರತದ ಅವಿಭಾಜ್ಯ ಅಂಗ, ಈ ವಿಷಯದಲ್ಲಿ ಪಾಕಿಸ್ತಾನವನ್ನು ಬೆಂಬಲಿಸಲು ಸಾಧ್ಯವಿಲ್ಲ ಎಂದು ತಾಲಿಬಾನ್ ಅಚ್ಚರಿಯ ಹೇಳಿಕೆ ನೀಡಿದೆ.
ಭಾರತ ಹಾಗೂ ಇಸ್ಲಾಮಿಕ್ ಎಮಿರೈಟ್ ನ ನಡುವೆ ಸ್ನೇಹ ಸಾಧ್ಯವೇ ಇಲ್ಲ ಎಂಬ ನಕಲಿ ಟ್ವೀಟ್ ಗೆ ತಾಲಿಬಾನ್ ನ ವಕ್ತಾರ ಸುಹೈಲ್ ನ್ನು ಹೊಣೆಗಾರನನ್ನಾಗಿ ಮಾಡಿದ್ದ ಹಿನ್ನೆಲೆಯಲ್ಲಿ ತಾಲೀಬಾನ್ ಈ ಸ್ಪಷ್ಟನೆ ನೀಡಿದೆ.
ಭಾರತದ ಕುರಿತಾಗಿ ಹಂಚಲ್ಪಡುತ್ತಿರುವ ಕೆಲವು ಹೇಳಿಕೆಗಳೂ ಅಫ್ಘಾನಿಸ್ತಾನದ ಇಸ್ಲಾಮಿಕ್ ಎಮಿರೈಟ್ ಗೂ ಸಂಬಂಧವಿಲ್ಲ. ನೆರೆ ರಾಷ್ಟ್ರಗಳ ಆಂತರಿಕ ವಿಷಯವಾಗಿ ಹಸ್ತಕ್ಷೇಪ ಮಾಡಬಾರದೆಂಬುದು ಇಸ್ಲಾಮಿಕ್ ಎಮಿರೈಟ್ ನ ಸ್ಪಷ್ಟ ನೀತಿಯಾಗಿದೆ ಎಂದು ಸುಹೈಲ್ ಶಾಹೀನ್ ಟ್ವೀಟ್ ಮೂಲಕ ಸ್ಪಷ್ಟಪಡಿಸಿದ್ದಾರೆ.
ಇದಕ್ಕೂ ಮುನ್ನ ಮಾತನಾಡಿದ್ದ ಶಾಹೀನ್, ಭಾರತ ಅಫ್ಘಾನಿಸ್ತಾನದಲ್ಲಿ ಶಾಂತಿ ನೆಲೆಸುವ ವಿಷಯವಾಗಿ ಮಹತ್ವದ ಪಾತ್ರ ವಹಿಸಬಲ್ಲದು ಎಂದು ಹೇಳಿದ್ದರು. ಕಾಶ್ಮೀರದಲ್ಲಿ ಆರ್ಟಿಕಲ್ 370 ರದ್ದುಗೊಂಡಾಗಲೂ ತಾಲಿಬಾನ್ ಸಂಘಟನೆ ಕಾಶ್ಮೀರಕ್ಕೂ ಆಫ್ಘಾನ್ ವಿಷಯಕ್ಕೂ ನಂಟು ಕಲ್ಪಿಸುವುದನ್ನು ತಿರಸ್ಕರಿಸಿತ್ತು.