ಅನಿಲ ಟ್ಯಾಂಕರ್ ಸ್ಪೋಟ 
ವಿದೇಶ

ಮೆಕ್ಸಿಕೊದಲ್ಲಿ ಅಡುಗೆ ಅನಿಲ ಟ್ಯಾಂಕರ್ ಸ್ಪೋಟ, ಕನಿಷ್ಠ 14 ಮಂದಿ ಸಾವು

ಪಶ್ಚಿಮ ಮೆಕ್ಸಿಕೊದಲ್ಲಿ ಅಡುಗೆ ಅನಿಲ ಟ್ಯಾಂಕರ್ ಸ್ಪೋಟಗೊಂಡ ಪರಿಣಾಮ ಕನಿಷ್ಠ 14 ಮಂದಿ ಸಾವನ್ನಪ್ಪಿದ್ದಾರೆ.

ಮೆಕ್ಸಿಕೊ: ಪಶ್ಚಿಮ ಮೆಕ್ಸಿಕೊದಲ್ಲಿ ಅಡುಗೆ ಅನಿಲ ಟ್ಯಾಂಕರ್ ಸ್ಪೋಟಗೊಂಡ ಪರಿಣಾಮ ಕನಿಷ್ಠ 14 ಮಂದಿ ಸಾವನ್ನಪ್ಪಿದ್ದಾರೆ.

ಪಶ್ಚಿಮ ಮೆಕ್ಸಿಕೊದ ಹೆದ್ದಾರಿಯಲ್ಲಿ ಸೋಮವಾರ ಎರಡು ಟ್ಯಾಂಕರ್‌ ಅಡುಗೆ ಅನಿಲ ಹೊತ್ತೊಯ್ಯುತ್ತಿದ್ದ ಟ್ರಕ್‌ ನಿಯಂತ್ರಣ ತಪ್ಪಿ ಪಲ್ಪಿ ಹೊಡೆದು ಸ್ಪೋಟಗೊಂಡ ಪರಿಣಾಮ 14 ಜನರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಟ್ರಕ್‌ ಚಾಲಕ ಸೇರಿದಂತೆ ವಾಹನದಲ್ಲಿದ್ದ ಇತರೆ 13 ಮಂದಿ ಮೃತಪಟ್ಟಿದ್ದು, ಸ್ಫೋಟದ ರಭಸಕ್ಕೆ ಮೃತದೇಹಗಳು ಛಿದ್ರವಾದ ಕಾರಣ, ಗುರುತಿಸಲು ಸಾಧ್ಯವಾಗುತ್ತಿಲ್ಲ. ಮೂರು ವಾಹನಗಳು ಸುಟ್ಟು ಕರಗಲಾಗಿವೆ ಎಂದು ಪ್ರಾಸಿಕ್ಯೂಟರ್‌ ಕಚೇರಿ ತಿಳಿಸಿದೆ.

ಮೂಲಗಳ ಪ್ರಕಾರ ಅಡುಗೆ ಅನಿಲದ ಸಿಲಿಂಡರ್ ಗಳ ಹೊತ್ತಿದ್ದ ಟ್ರಕ್ ಎದುರಿಗಿನ ವಾಹನಕ್ಕೆ ಮುಖಾಮುಖಿ ಡಿಕ್ಕಿಯಾಗಿದ್ದು, ಢಿಕ್ಕಿಯಾದ ಕೂಡಲೇ ಟ್ರಕ್ ಪಲ್ಟಿ ಹೊಡೆದಿದೆ. ಅಂತೆಯೇ ಕ್ಷಣ ಮಾತ್ರದಲ್ಲಿ ಸಿಲಿಂಡರ್ ಸ್ಫೋಟವಾಗಿದೆ. ಸ್ಫೋಟದ ರಭಸಕ್ಕೆ ಸುಮಾರು 2  ಹೆಕ್ಟೇರ್  ಪ್ರದೇಶದಲ್ಲಿನ ವಸ್ತುಗಳು ಚೆಲ್ಲಾಪಿಲ್ಲಿಯಾಗಿದ್ದು, ಸಮೀಪದ ಮೂರು ವಾಹನಗಳು ಕೂಡ ಸುಟ್ಟು  ಕರಕಲಾಗಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

37 ವರ್ಷ ನಿಷೇಧದ ಬಳಿಕ ಮತ್ತೆ ಕಾಲೇಜು, ವಿವಿಗಳಲ್ಲಿ ವಿದ್ಯಾರ್ಥಿ ಸಂಘದ ಚುನಾವಣೆ; ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ

ಡಿಕೆಶಿ ಸರ್ಕಾರಕ್ಕೆ ನಾಳೆ 100 ದಿನದ ಸಂಭ್ರಮ: ಬಡವರಿಗೆ ಬಂಪರ್ ಗಿಫ್ಟ್! 15 ಲಕ್ಷ ಉಚಿತ ಸೈಟ್ ಹಂಚಿಕೆಗೆ ಸಂಪುಟ ಅಸ್ತು!

3,260 ನಕಲಿ ಪಕ್ಷಗಳ ಮೂಲಕ 10,000 ಕೋಟಿ ಕಪ್ಪುಹಣ ಅಕ್ರಮ ವರ್ಗಾವಣೆ; ಬಿಜೆಪಿಯ 'ಸಿ' ಟೀಮ್: ಕಾಂಗ್ರೆಸ್ ಆರೋಪ!

KPSC ನೇಮಕಾತಿ ಹಗರಣ: ಐಎಎಸ್ ಅಧಿಕಾರಿ ಗ್ಯಾನೇಂದ್ರ ಕುಮಾರ್, ಕನ್ನಾಳೆ ಜೈಲು ಪಾಲು; 14 ದಿನ ನ್ಯಾಯಾಂಗ ಬಂಧನ

ಚೀನಾ ನಿರ್ಮಿಸಿದ್ದ ಟ್ಯಾಂಕರ್ ಬಾಂಗ್ಲಾದಲ್ಲಿ ಪರೀಕ್ಷೆ: ಸೇನಾ ವ್ಯಾಯಾಮದ ವೇಳೆ ಸ್ಫೋಟಗೊಂಡು ಇಬ್ಬರು ಸೈನಿಕರು ಸಾವು, Video