ವಿದೇಶ

ಪಾಕ್: ಅಳಿಯನಿಗೆ ಯಾರೂ ನೀಡದಂತಾ ಗಿಫ್ಟ್ ಕೊಟ್ಟ ಅತ್ತೆ, ವಿಡಿಯೋ ವೈರಲ್!

Vishwanath S

ಇಸ್ಲಾಮಾಬಾದ್: ಅಳಿಯನಿಗೆ ಕಾರು, ಚಿನ್ನಾಭರಣ, ಫ್ಲಾಟ್ ಗಳನ್ನು ಗಿಫ್ಟ್ ನೀಡುವುದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಅತ್ತೆ ಯಾರೂ ನೀಡದಂತಾ ಉಡುಗೊರೆಯನ್ನು ನೀಡಿದ್ದು ನೆಟಿಗರು ನಿಬ್ಬೇರುವಂತೆ ಮಾಡಿದೆ. 

ಪಾಕಿಸ್ತಾನದಲ್ಲಿ ಈ ಘಟನೆ ನಡೆದಿದೆ. ಮದುವೆ ಬಳಿಕ ಅತ್ತೆ ಎಕೆ-47 ರೈಫಲ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಆರತಕ್ಷತೆ ವೇಳೆ ವಧು-ವರ ವೇದಿಕೆ ಮೇಲೆ ಕುಳಿತಿದ್ದರು. ಈ ವೇಳೆ ಸಂಬಂಧಿಕರು ಉಡುಗೊರೆ ನೀಡಿ, ಆಶೀರ್ವದಿಸಿ ತೆರಳುತ್ತಿದ್ದರು. ಈ ವೇಳೆ ವರನ ಅತ್ತೆ ವೇದಿಕೆ ಮೇಲೆ ಬಂದು ಆತನ ಹಣೆಗೆ ಮುತ್ತಿಟ್ಟು ನಂತರ ಎಕೆ-47 ರೈಫಲ್ ನೀಡುತ್ತಾರೆ. ಇದನ್ನು ಆಶ್ಚರ್ಯ ಕಣ್ಣುಗಳನ್ನು ನೋಡಿದ ವರ ನಂತರ ಅದನ್ನು ಖುಷಿಯಿಂದಲೇ ಸ್ವೀಕರಿಸುತ್ತಾರೆ.

SCROLL FOR NEXT