ವಿದೇಶ

ನನ್ನ ತಂದೆ ಮತ್ತು ಮೋದಿಯವರ ನಡುವಣ ಸಂಬಂಧ ಅಪೂರ್ವ: ಜೂನಿಯರ್ ಟ್ರಂಪ್

Sumana Upadhyaya

ನ್ಯೂಯಾರ್ಕ್: ನನ್ನ ತಂದೆ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿಯವರ ನಡುವಿನ ಸಂಬಂಧ ಅದ್ವಿತೀಯವಾದದ್ದು. ಅವರಿಬ್ಬರ ನಡುವಿನ ಬಾಂಧವ್ಯವನ್ನು ನೋಡಲು ನಿಜಕ್ಕೂ ಖುಷಿಯಾಗುತ್ತದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪುತ್ರ ಜೂನಿಯರ್ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ನ್ಯೂಯಾರ್ಕ್ ನಲ್ಲಿ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಅವರು, ನನ್ನ ತಂದೆ ಮತ್ತು ಮೋದಿಯವರ ನಡುವಿನ ಬಾಂಧವ್ಯ ಅತ್ಯಂತ ಗಟ್ಟಿಯಾಗಿದ್ದು ಅದನ್ನು ನೋಡಲು ನಿಜಕ್ಕೂ ನನಗೆ ಖುಷಿಯಾಗುತ್ತಿದೆ. ಇದರಿಂದ ಭವಿಷ್ಯದಲ್ಲಿ ಎರಡೂ ದೇಶಗಳಿಗೆ ಸಹಾಯವಾಗಲಿದೆ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದ್ದಾರೆ.

ಮುಂದಿನ ತಿಂಗಳು ನವೆಂಬರ್ 3ರಂದು ಅಮೆರಿಕ ಅಧ್ಯಕ್ಷೀಯ ಚುನಾವಣೆ ನಡೆಯುತ್ತಿದ್ದು, ಈ ಸಂದರ್ಭದಲ್ಲಿ ಅಮೆರಿಕದಲ್ಲಿರುವ ಅನಿವಾಸಿ ಭಾರತೀಯರ ಮತಗಳು ಮುಖ್ಯವಾಗುತ್ತದೆ. ಇದೇ ಹೊತ್ತಿನಲ್ಲಿ ಜೂನಿಯರ್ ಟ್ರಂಪ್ ಹೇಳಿಕೆ ನೀಡಿರುವುದು ಸುದ್ದಿಯಾಗಿದೆ.

SCROLL FOR NEXT