ವಿದೇಶ

ಕಿಮ್‍ ಜಾಂಗ್‍ ಉನ್‍ ಬೇಷರತ್‍ ಭೇಟಿಗೆ ಸಿದ್ಧ: ಜಪಾನ್‌ನ ಹೊಸ ಪ್ರಧಾನಿ ಸುಗಾ

Manjula VN

ವಿಶ್ವಸಂಸ್ಥೆ: ಯಾವುದೇ ಷರತ್ತುಗಳಿಲ್ಲದೆ ಉತ್ತರ ಕೊರಿಯಾದ ಅಧಿನಾಯಕ ಕಿಮ್ ಜಾಂಗ್ ಉನ್ ಅವರನ್ನು ಭೇಟಿಯಾಗಲು ಸಿದ್ಧ ಎಂದು ಜಪಾನ್‌ನ ಹೊಸ ಪ್ರಧಾನಿ ಯೋಶಿಹಿಡೆ ಸುಗಾ ವಿಶ್ವಸಂಸ್ಥೆಯ ಸಾಮಾನ್ಯ ಅಧಿವೇಶನದಲ್ಲಿ ಮಾಡಿದ ಭಾಷಣದಲ್ಲಿ ಎಂದು ಹೇಳಿದ್ದಾರೆ.

‘ಜಪಾನ್‌ನ ಹೊಸ ಪ್ರಧಾನಿಯಾಗಿ, ಯಾವುದೇ ಷರತ್ತುಗಳಿಲ್ಲದೆ ಉತ್ತರಕೊರಿಯಾ ಅಧ್ಯಕ್ಷ ಕಿಮ್ ಜೊಂಗ್ ಉನ್ ಅವರನ್ನು ಭೇಟಿಯಾಗಲು ಸಿದ್ಧನಿದ್ದೇನೆ." ಎಂದು ಸುಗಾ ಶುಕ್ರವಾರ ಹೇಳಿದ್ದಾರೆ.

‘ಜಪಾನ್ ಮತ್ತು ಉತ್ತರ ಕೊರಿಯಾ ನಡುವಿನ ರಚನಾತ್ಮಕ ಸಂಬಂಧವು ಎರಡೂ ಕಡೆಯ ಹಿತಾಸಕ್ತಿಗಳನ್ನು ಪೂರೈಸುವುದಲ್ಲದೆ ಪ್ರಾದೇಶಿಕ ಶಾಂತಿ ಮತ್ತು ಸ್ಥಿರತೆಗೆ ಹೆಚ್ಚಿನ ಕೊಡುಗೆ ನೀಡುತ್ತದೆ" ಎಂದು ಸುಗಾ ಹೇಳಿದ್ದಾರೆ.

SCROLL FOR NEXT