ವಿದೇಶ

ಇಂಡೋನೇಷ್ಯಾದ ಸೆಮೇರು ಪರ್ವತದಲ್ಲಿ ಜ್ವಾಲಾಮುಖಿ ಸ್ಫೋಟ; ಕನಿಷ್ಟ 13 ಮಂದಿ ಸಾವು

Manjula VN

ಲುಮಾಜಾಂಗ್: ಇಂಡೋನೇಷ್ಯಾದ ಸೆಮೇರು ಪರ್ವತದಲ್ಲಿ ಸ್ಫೋಟ ಸಂಂಭವಿಸಿದ್ದು, ಇದುವರೆಗೂ ಕನಿಷ್ಠ 13 ಮಂದಿ ಬಲಿಯಾಗಿದ್ದಾರೆಂದು ತಿಳಿದುಬಂದಿದೆ.

ಜ್ವಾಲಾಮುಖಿ ಸ್ಪೋಟಗೊಳ್ಳುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ವಿಪತ್ತು ನಿರ್ವಹಣಾ ತಂಡ ನೂರಾರು ಮಂದಿಯನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಿದ್ದಾರೆ. ಘಟನೆಯಲ್ಲಿ ಹಲವರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ.

ಜಾವಾ ದ್ವೀಪದ ಅತೀ ಎತ್ತರದ ಪರ್ವತವಾದ ಸೆಮೇರು ಪರ್ವತದಲ್ಲಿ ಜ್ವಾಲಾಮುಖಿ ಸ್ಪೋಟಗೊಂಡಿದೆ. ಇದರಿಂದ ಲಾವಾ ರಸವು ಹತ್ತಿರದಲ್ಲಿದ್ದ ಪೂರ್ವ ಜಾವಾ ಪ್ರಾಂತ್ಯದ ಹಳ್ಳಿಗಳನ್ನು ಆವರಿಸಿದ್ದು ಜನರು ಭಯಭೀತರಾಗಿ ಓಡಿಹೋಗಿದ್ದಾರೆ.

ಜ್ವಾಲಾಮುಖಿ ಸ್ಫೋಟದ ಪರಿಣಾಮ ಜಾವಾ ಪ್ರಾಂತ್ಯದ ಹತ್ತಿರದ ನಗರಗಳಾದ ಲಮಾಂಗ್ ಮತ್ತು ಮಲಂಗ್ ನಡುವಿನ ಸೇತುವೆ ಕುಸಿತಗೊಂಡಿದೆ.

ದುರಂತದಲ್ಲಿ ಸಾವನ್ನಪ್ಪಿದ್ದ 13 ಜನರಲ್ಲಿ ಇಬ್ಬರನ್ನು ಮಾತ್ರ ಗುರುತಿಸಲಾಗಿದೆ ಎಂದು ವಿಪತ್ತು ನಿರ್ವಹಣಾ ತಂಡದ ಅಧಿಕಾರಿ ಅಬ್ದುಲ್ ಮುಹಾರಿ ತಿಳಿಸಿದ್ದಾರೆ.

SCROLL FOR NEXT