ಕಿಮ್ ಯೋಂಗ್ ಜು 
ವಿದೇಶ

ಉತ್ತರ ಕೊರಿಯಾದ ಸಂಸ್ಥಾಪಕ ಕಿಮ್ ಇಲ್ ಸುಂಗ್ ಸಹೋದರ ಕಿಮ್ ಯೋಂಗ್ ಜು ನಿಧನ

ಉತ್ತರ ಕೊರಿಯಾದ ಸಂಸ್ಥಾಪಕ ಕಿಮ್ ಇಲ್ ಸುಂಗ್ ಅವರ ಕಿರಿಯ ಸಹೋದರ ಕಿಮ್ ಯೋಂಗ್ ಜು ನಿಧನರಾಗಿದ್ದಾರೆ.

ಸಿಯೋಲ್: ಉತ್ತರ ಕೊರಿಯಾದ ಸಂಸ್ಥಾಪಕ ಕಿಮ್ ಇಲ್ ಸುಂಗ್ ಅವರ ಕಿರಿಯ ಸಹೋದರ ಕಿಮ್ ಯೋಂಗ್ ಜು ನಿಧನರಾಗಿದ್ದಾರೆ.

ಕಿಮ್ ಇಲ್ ಸುಂಗ್ ಅವರ ಮೊಮ್ಮಗ ಉತ್ತರ ಕೊರಿಯಾದ ಅಧ್ಯಕ್ಷ ಕಿಮ್ ಜಾಂಗ್ ಉನ್ ತಮ್ಮ ಕಿರಿಯ ತಾತನ ಸಾವಿನ ಬಗ್ಗೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಸಂತಾಪ ಸೂಚಿಸುವ ಮಾಲೆಯನ್ನು ಕಳುಹಿಸಿದ್ದಾರೆ ಎಂದು ಅಧಿಕೃತ ಕೊರಿಯನ್ ಕೇಂದ್ರ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಕಿಮ್ ಯೋಂಗ್ ಜು(ಕಾರ್ಮಿಕರ) ಪಕ್ಷದ ಮಾರ್ಗಗಳು ಮತ್ತು ನೀತಿಗಳನ್ನು ಕಾರ್ಯಗತಗೊಳಿಸಲು ಶ್ರದ್ಧೆಯಿಂದ ಶ್ರಮಿಸಿದ್ದರು. ಸಮಾಜವಾದಿ ನಿರ್ಮಾಣವನ್ನು ವೇಗಗೊಳಿಸಲು ಮತ್ತು ಕೊರಿಯನ್-ಶೈಲಿಯ ರಾಜ್ಯ ಸಾಮಾಜಿಕ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ಕೊಡುಗೆ ನೀಡಿದ್ದರು. ಪಕ್ಷ ಮತ್ತು ರಾಜ್ಯದ ಪ್ರಮುಖ ಹುದ್ದೆಗಳಲ್ಲಿ ಹಲವು ವರ್ಷಗಳಿಂದ ಕೆಲಸ ಮಾಡಿದರು ಎಂದು ಕೆಸಿಎನ್ಎ ಹೇಳಿದೆ.

ಕಿಮ್ ಯೋಂಗ್ ಜು ಯಾವಾಗ ಮೃತಪಟ್ಟರು ಎಂಬ ನಿಖರ ಮಾಹಿತಿ ಇಲ್ಲ. ಸಿಯೋಲ್‌ನ ಏಕೀಕರಣ ಸಚಿವಾಲಯದ ಪ್ರಕಾರ, ಜು 1920ರಲ್ಲಿ ಜನಿಸಿದರು ಅಂದರೆ ಅವರ ಮರಣದ ಸಮಯದಲ್ಲಿ ಅವರು 100 ಅಥವಾ 101 ವರ್ಷ ವಯಸ್ಸಿನವರಾಗಿದ್ದರು.

1948ರಲ್ಲಿ ಕಿಮ್ ಇಲ್ ಸುಂಗ್ ದೇಶವನ್ನು ಸ್ಥಾಪಿಸಿದಾಗಿನಿಂದ ಕಿಮ್ ಕುಟುಂಬದ ಮೂರು ತಲೆಮಾರುಗಳು ಉತ್ತರ ಕೊರಿಯಾವನ್ನು ಆಳಿದೆ. ಕಿಮ್ ಇಲ್ ಸುಂಗ್ 1994ರಲ್ಲಿ ನಿಧನರಾದಾಗ, ಅವರ ಹಿರಿಯ ಮಗ ಕಿಮ್ ಜೊಂಗ್ ಇಲ್ ಅವರು ಅಧಿಕಾರ ವಹಿಸಿಕೊಂಡಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

ಸಂಭಾಲ್ ದೇವಸ್ಥಾನದಿಂದ ಸಾಯಿಬಾಬಾ ವಿಗ್ರಹಕ್ಕೆ ಗೇಟ್ ಪಾಸ್! ಗಂಗಾ ನದಿಯಲ್ಲಿ ವಿಸರ್ಜನೆ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

SCROLL FOR NEXT