ಸಾಂದರ್ಭಿಕ ಚಿತ್ರ 
ವಿದೇಶ

ಕೋವಿಡ್ ಸೋಂಕು ಇಳಿಕೆ: ಭಾರತ, ಇಂಗ್ಲೆಂಡ್, ಪೋರ್ಚುಗಲ್ ನಿಂದ ಬರುವ ಪ್ರಯಾಣಿಕರ ಮೇಲೆ ಜರ್ಮನಿ ಹೇರಿದ್ದ ನಿಷೇಧ ಹಿಂದಕ್ಕೆ

ಕೋವಿಡ್-19 ರ ಡೆಲ್ಟಾ ರೂಪಾಂತರ ಅಪ್ಪಳಿಸಿರುವ ಇಂಗ್ಲೆಂಡ್, ಭಾರತ ಹಾಗೂ ಇತರೆ ಮೂರು ದೇಶಗಳ ಪ್ರಯಾಣಿಕರ ಮೇಲೆ ಹೇರಲಾಗಿದ್ದ ಪ್ರಯಾಣಿಕ ನಿಷೇಧವನ್ನು ಜರ್ಮನಿ ತೆಗೆದು ಹಾಕಿದೆ.

ಬರ್ಲಿನ್: ಕೋವಿಡ್-19 ರ ಡೆಲ್ಟಾ ರೂಪಾಂತರ ಅಪ್ಪಳಿಸಿರುವ ಇಂಗ್ಲೆಂಡ್, ಭಾರತ ಹಾಗೂ ಇತರೆ ಮೂರು ದೇಶಗಳ ಪ್ರಯಾಣಿಕರ ಮೇಲೆ ಹೇರಲಾಗಿದ್ದ ಪ್ರಯಾಣಿಕ ನಿಷೇಧವನ್ನು ಜರ್ಮನಿ ತೆಗೆದು ಹಾಕಿದೆ.

ಪ್ರಸ್ತುತ ವೈರಸ್ ರೂಪಾಂತರದ ದೇಶಗಳೆಂದು ಪಟ್ಟಿ ಮಾಡಲಾಗಿರುವ ಭಾರತ, ನೇಪಾಳ, ರಷ್ಯಾ, ಪೋರ್ಚುಗಲ್ ಹಾಗೂ ಇಂಗ್ಲೆಂಡ್ ಅನ್ನು ಬುಧವಾರದಿಂದ "ಹೆಚ್ಚಿನ ಸಂಭವನೀಯ ಪ್ರದೇಶಗಳು" ಎಂದು ಮರು ವರ್ಗೀಕರಿಸಲಾಗುವುದು ಎಂದು ಜರ್ಮನಿಯ ರಾಬರ್ಟ್ ಕೋಚ್ ಇನ್ಸ್ಟಿಟ್ಯೂಟ್ (ಆರ್ ಕೆಐ)  ತಿಳಿಸಿದೆ. 

ಹನ್ನೊಂದು ದೇಶಗಳು ಇದೀಗ ಜರ್ಮನಿಯ “ವೈರಸ್ ರೂಪಾಂತರ ಪ್ರದೇಶ” ಪಟ್ಟಿಯಲ್ಲಿ ಉಳಿದಿದ್ದು, ಬೋಟ್ಸ್ವಾನ, ಬ್ರೆಜಿಲ್, ಎಸ್ವಾಟಿನಿ, ಲೆಸೊಥೊ, ಮಲಾವಿ, ಮೊಜಾಂಬಿಕ್, ನಮೀಬಿಯಾ, ಜಾಂಬಿಯಾ, ಜಿಂಬಾಬ್ವೆ, ದಕ್ಷಿಣ ಆಫ್ರಿಕಾ ಮತ್ತು ಉರುಗ್ವೆ ದೇಶಗಳು ಈ ಪಟ್ಟಿಯಲ್ಲಿವೆ.

ಈ ಬದಲಾವಣೆಯು ಜರ್ಮನ್ ನಿವಾಸಿಗಳು ಅಥವಾ ನಾಗರಿಕರಲ್ಲದ ಪ್ರಯಾಣಿಕರಿಗೆ ಪ್ರವೇಶದ ನಿಷೇಧವನ್ನು ಸರಾಗಗೊಳಿಸುತ್ತದೆ, ಬದಲಾಗಿ ಯಾರಾದರೂ ಸಂಪರ್ಕತಡೆಯನ್ನು ಹಾಗೂ ಪರೀಕ್ಷಾ ನಿಯಮಗಳನ್ನು ಪಾಲಿಸುವವರೆಗೂ ಪ್ರವೇಶಿಸಲು ಸಾಧ್ಯವಾಗುತ್ತದೆ ಎಂದು ಹೇಳಲಾಗಿದೆ.

ಬ್ರಿಟನ್ ಮೇ 23 ರಿಂದ ಅಗ್ರ ಕೊರೊನಾವೈರಸ್ ಅಪಾಯದ ವಿಭಾಗದಲ್ಲಿದೆ, ಮತ್ತು ಕಳೆದ ಮಂಗಳವಾರ ಯುರೋಪಿಯನ್ ಒಕ್ಕೂಟದಲ್ಲಿ ಜರ್ಮನಿಯ ಪಾಲುದಾರರ ರಾಷ್ಟ್ರಗಳಲ್ಲಿ ಒಂದಾದ ರಷ್ಯಾ ಮತ್ತು ಪೋರ್ಚುಗಲ್ ಅನ್ನೂ ಕೂಡ ಪಟ್ಟಿಗೆ ಸೇರಿಸಿತ್ತು. ವಿಮಾನಯಾನ ಸೇವೆಗಳು ಸೇರಿದಂತೆ ಇತರೆ  ನಿರ್ಬಂಧಗಳನ್ನು ಈ ದೇಶಗಳ ಮೇಲೆ ಹೇರಲಾಗಿತ್ತು. ಅಂತೆಯೇ ಈ ಪಟ್ಟಿಯಲ್ಲಿರುವ ದೇಶಗಳಿಂದ ಜರ್ಮನಿಗೆ ಆಗಮಿಸುವವರು ಕಡ್ಡಾಯ 14 ದಿನಗಳ ಕ್ವಾರಂಟೈನ್ ಪೂರ್ಣಗೊಳಿಸಬೇಕಿತ್ತು. 

ಇದೀಗ ಈ ನಿಯಮಗಳನ್ನು ಸಡಿಲಗೊಳಿಸಲಾಗಿದ್ದು, "ಹೆಚ್ಚಿನ ಸಂಭವನೀಯ ಪ್ರದೇಶಗಳಿಂದ" ಬರುವ ಜನರು, ಅವರು ಸಂಪೂರ್ಣವಾಗಿ ಲಸಿಕೆ ಹಾಕಿದ್ದರೆ ಅಥವಾ ಕೋವಿಡ್-19 ನಿಂದ ಚೇತರಿಸಿಕೊಂಡಿರುವುದನ್ನು ಸಾಬೀತುಪಡಿಸಿದರೆ ಅವರಿಗೆ ಸಂಪರ್ಕತಡೆ ನಿರ್ಬಂಧದಿಂದ ವಿನಾಯಿತಿ ನೀಡಲಾಗುತ್ತದೆ.  ಇತರರು ಐದು ದಿನಗಳ ಸಂಪರ್ಕತಡೆ ನಂತರ ನೆಗೆಟಿವ್ ವರದಿ ನೀಡಬೇಕಾಗುತ್ತದೆ. ಅಲ್ಲದೆ ಈ ದೇಶಗಳಿಂದ ಸಾರಿಗೆಯನ್ನು ಇನ್ನು ಮುಂದೆ ನಿರ್ಬಂಧಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಅಲ್ಲದೆ ಜರ್ಮನಿಯಲ್ಲಿ ಡೆಲ್ಟಾ ರೂಪಾಂತರದಿಂದ ಸೋಂಕುಗಳ ಪ್ರಮಾಣವನ್ನು ಆಧರಿಸಿ ಈ ಪಟ್ಟಿಗಳನ್ನು  ಪರಿಶೀಲಿಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ. 

ಈ ಹಿಂದೆ ಬ್ರಿಟನ್ ನಿಂದ ಪ್ರಯಾಣದ ಮೇಲಿನ ನಿರ್ಬಂಧಗಳನ್ನು ಶೀಘ್ರದಲ್ಲೇ ಸಡಿಲಿಸಲಾಗುವುದು ಎಂದು ಜರ್ಮನಿ ಚಾನ್ಸಿಲರ್ ಏಂಜೆಲಾ ಮಾರ್ಕೆಲ್ ಶುಕ್ರವಾರ ಬ್ರಿಟನ್ ಭೇಟಿಯ ಸಂದರ್ಭದಲ್ಲಿ ಹೇಳಿದ್ದರು. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಿಮ್ಮ ಭಾಷಣ ನಾಚಿಕೆಯಿಲ್ಲದೆ ಸಮರ್ಥನೆ ಮಾಡಿಕೊಂಡಂತೆ ಇತ್ತು': 1947ರ ಐನ್ ಸ್ಟೈನ್ ನೆಹರೂಗೆ ಬರೆದ ಪತ್ರ ಉಲ್ಲೇಖಿಸಿ Modi ಟೀಕಿಸಿದ ಕಾಂಗ್ರೆಸ್

ಶಿವಮೊಗ್ಗ: 10 ಕಿಲೋ ವ್ಯಾಟ್ FM ಟ್ರಾನ್ಸ್ಮಿಟರ್ ಕೇಂದ್ರ ಉದ್ಘಾಟನೆ! ಆಕಾಶವಾಣಿ, ದೂರದರ್ಶನ ಅಭಿವೃದ್ದಿಗೆ 2,500 ಕೋಟಿ ಹಣ ವೆಚ್ಚ- ಡಾ. ಎಲ್ ಮುರುಗನ್

'ಇಸ್ರೇಲ್‌ ಜೊತೆ ನಮ್ಮ ಸಂಬಂಧ 'ರಕ್ತ ಮತ್ತು ತ್ಯಾಗ'ದಲ್ಲಿ ಬರೆಯಲ್ಪಟ್ಟಿದೆ, ನಾನು ಹುಟ್ಟಿದ ವರ್ಷ ಭಾರತ ಇಸ್ರೇಲ್ ಗೆ ಮಾನ್ಯತೆ ನೀಡಿತು': ಪ್ರಧಾನಿ ಮೋದಿ-Video

ಅಮ್ಮಾ....ಐ ಲವ್ ಯೂ ಸೋ ಮಚ್: ಕುವೈತ್ ನಲ್ಲಿದ್ದ ತಾಯಿಗೆ ಕೊನೆಯ ಸಂದೇಶ ಕಳಿಸಿ ಯೂಟ್ಯೂಬರ್ ಆತ್ಮಹತ್ಯೆ

ಹಗರಣ ರಹಿತ ಹುದ್ದೆ ಭರ್ತಿಗೆ ಕ್ರಮ: ಯುವಕರು ಧೈರ್ಯವಾಗಿರಿ, ನಿಮ್ಮ ಸಮಸ್ಯೆ ಬಗೆಹರಿಸುತ್ತೇವೆ, ಸದ್ಯದಲ್ಲೇ ಸಂದೇಶ ನೀಡುತ್ತೇವೆ; ಡಿ ಕೆ ಶಿವಕುಮಾರ್

SCROLL FOR NEXT