ಸಂಗ್ರಹ ಚಿತ್ರ 
ವಿದೇಶ

ಕೋವಿಡ್-19: ಭಾರತದ ವಿಕಲಚೇತನರಿಗೆ ಇಂಡೋ-ಅಮೆರಿಕನ್ ಎನ್ ಜಿಒ ದಿಂದ 1 ಲಕ್ಷ ಡಾಲರ್ ನಿಧಿ ಸಂಗ್ರಹ

ಕೋವಿಡ್-19 ಸಾಂಕ್ರಾಮಿಕದಲ್ಲಿ ಭಾರತದ ವಿಕಲಚೇತನರಿಗೆ ನೆರವಾಗುವ ನಿಟ್ಟಿನಲ್ಲಿ ಇಂಡೋ-ಅಮೆರಿಕನ್ ಎನ್ ಜಿಒವೊಂದು ಬರೊಬ್ಬರಿ 1 ಲಕ್ಷ ಡಾಲರ್ ನಿಧಿ ಸಂಗ್ರಹಿಸಿದೆ.

ವಾಷಿಂಗ್ಟನ್‌: ಕೋವಿಡ್-19 ಸಾಂಕ್ರಾಮಿಕದಲ್ಲಿ ಭಾರತದ ವಿಕಲಚೇತನರಿಗೆ ನೆರವಾಗುವ ನಿಟ್ಟಿನಲ್ಲಿ ಇಂಡೋ-ಅಮೆರಿಕನ್ ಎನ್ ಜಿಒವೊಂದು ಬರೊಬ್ಬರಿ 1 ಲಕ್ಷ ಡಾಲರ್ ನಿಧಿ ಸಂಗ್ರಹಿಸಿದೆ.

ಲಾಸ್ ಏಂಜಲೀಸ್ ಮೂಲದ ಭಾರತ-ಅಮೆರಿಕ ಎನ್ ಜಿಒ ‘ವಾಯ್ಸ್ ಆಫ್‌ ಸ್ಪೆಷಲಿ ಏಬಲ್ಡ್‌ ಪೀಪಲ್‌’(ವಿಒಎಸ್‌ಎಪಿ) ಸ್ವಯಂ ಸೇವಾ ಸಂಘಟನೆಯು ಕೋವಿಡ್‌ ಸಾಂಕ್ರಾಮಿಕದಿಂದ ಸಂಕಷ್ಟಕ್ಕೊಳಗಾಗಿರುವ ಅಂಗವಿಕಲರಿಗೆ ನೆರವಾಗಲು ಸುಮಾರು 72.54 ಲಕ್ಷ (1 ಲಕ್ಷ ಡಾಲರ್‌) ಸಂಗ್ರಹಿಸಿದೆ. 

ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಸಂಘಟನೆಯು, 'ಕೋವಿಡ್-19 ಸಾಂಕ್ರಾಮಿಕದ ಸಂದರ್ಭದಲ್ಲಿ ಅಂಗವಿಕಲರಿಗೆ ದಿನಸಿ, ಪಿಪಿಇ ಕಿಟ್‌ ಸೇರಿದಂತೆ ಇತರೆ ವಸ್ತುಗಳನ್ನು ಒದಗಿಸಲು 1 ಲಕ್ಷ ಡಾಲರ್‌ ಸಂಗ್ರಹಿಸಲಾಗಿದೆ. ಕೋವಿಡ್‌ನಿಂದಾಗಿ ಹಿರಿಯ ನಾಗರಿಕರು, ಅಂಗವಿಕಲರು ಬಹಳ ತೊಂದರೆ  ಅನುಭವಿಸುತ್ತಿದ್ದಾರೆ. ಹೀಗಾಗಿ ತಮ್ಮ ಸಂಘಟನೆಯು 1 ಲಕ್ಷ ಡಾಲರ್‌ ಸಂಗ್ರಹಿಸಲಾಗಿದ್ದು, ಭಾರತದಲ್ಲಿ ಈವರೆಗೆ 4,500ಕ್ಕೂ ಹೆಚ್ಚು ದಿನಸಿ ಮತ್ತು ಪಿಪಿಇ ಕಿಟ್‌ಗಳನ್ನು ವಿತರಿಸಲಾಗಿದ್ದು, 10,000 ಅಂಗವಿಕಲರನ್ನು ತಲುಪುವ ಗುರಿಯನ್ನು ಹೊಂದಿದ್ದೇವೆ ಎಂದು ಹೇಳಿದೆ.

ಭಾರತದ ಕಾರ್ಯನಿರ್ವಾಹಕ ಪಾಲುದಾರರ ಬಿ‍ಪಿಎ ನೆರವಿನೊಂದಿಗೆ ಕರ್ನಾಟಕದ ಬೆಳಗಾವಿ, ಮಧ್ಯಪ್ರದೇಶದ ನಾಗ್ಡಾ ಮತ್ತು ಗುಜರಾತ್‌ನ ಹಲವು ಜಿಲ್ಲೆಗಳಿಗೆ ಪರಿಹಾರ ಸಾಮಗ್ರಿಗಳನ್ನು ಕಳುಹಿಸಲಾಗಿದೆ. ಹೈದರಾಬಾದ್‌ ಮತ್ತು ಪುಣೆಗೂ ಇದನ್ನು ವಿಸ್ತರಿಸಲಾಗುವುದು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಈ ಬಗ್ಗೆ ಮಾಹಿತಿ ನೀಡಿದ ಸಂಘಟನೆಯ ಸದಸ್ಯರಾದ ಪ್ರಣವ್ ದೇಸಾಯಿ ಅವರು, VOSAP ಯುನೈಟೆಡ್ ನೇಷನ್ಸ್ ಎಕನಾಮಿಕ್ ಅಂಡ್ ಸೋಶಿಯಲ್ ಕೌನ್ಸಿ (ECOSOC) ನೊಂದಿಗೆ ವಿಶೇಷ ಸಮಾಲೋಚನೆ ನಡೆಸಿದ್ದು, ತಮ್ಮ ಸಂಘಟನೆಯ ಬಹುತೇಕ ಸದಸ್ಯರು ಮತ್ತು ದಾನಿಗಳು  ಭಾರತೀಯರಾಗಿದ್ದು, ಎಲ್ಲರೂ ಆಯಾ ನಗರಗಳು ಮತ್ತು ಸಮುದಾಯಗಳಲ್ಲಿನ ದಿವ್ಯಾಂಗರಿಗೆ ನೆರವು ನೀಡುತ್ತಿದ್ದಾರೆ. ಹೀಗೆ ಪಡೆದ ದೇಣಿಗೆಯ ಆಮ್ಲಜನಕ ಸಾಂದ್ರತೆಗಳು ಮತ್ತು ಹಣದಲ್ಲಿ ಶೇ.10 ಪ್ರತಿಶತದಷ್ಟನ್ನು ವಿಕಲ ಚೇತನರಿಗೆ ಸಹಾಯ ಮಾಡಲು ಹಂಚಿಕೆ ಮಾಡಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮುಂಬೈ: ಖ್ಯಾತ ಹಿರಿಯ ಗಾಯಕಿ ಆಶಾ ಭೋಸ್ಲೆ ನಿಧನ, ಗಣ್ಯರ ಕಂಬನಿ

US-Iran Peace Talks: ಇಸ್ಲಾಮಾಬಾದ್‌ನಲ್ಲಿ 21 ಗಂಟೆ ಮಾತುಕತೆಯಾದ್ರು, ಯುಎಸ್- ಇರಾನ್ ಶಾಂತಿ ಒಪ್ಪಂದ ವಿಫಲ! ಕಾರಣಗಳೇನು?

'ಇರಾನ್ ನಮಗೆ ಬೆದರಿಕೆಯೊಡ್ಡಿತ್ತು, ಆದರೆ ಈಗ ಬದುಕುಳಿಯಲು ಹೋರಾಡುತ್ತಿದೆ': ಶಾಂತಿ ಮಾತುಕತೆ ವಿಫಲದ ಬಳಿಕ ಇಸ್ರೇಲ್!

"Bad News": ಅಮೆರಿಕದ ಷರತ್ತುಗಳನ್ನು ಇರಾನ್ ಒಪ್ಪುತ್ತಿಲ್ಲ- ಜೆಡಿ ವ್ಯಾನ್ಸ್!

ಕೊಡಗು: 100 ಎಕರೆ ಅರಣ್ಯ ವಲಯದಲ್ಲಿ ಬೌದ್ಧಧರ್ಮ ಜೊತೆಗೆ ಪರಿಸರ ಸಂರಕ್ಷಣೆ ಮಾಡುತ್ತಿರುವ 'ಕರ್ಮ ಕರ್ಗ್ಯು ಮಠ!

SCROLL FOR NEXT