ವಿದೇಶ

ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರಾನ್ ಗೆ ಸಾರ್ವಜನಿಕವಾಗಿ ಕಪಾಳ ಮೋಕ್ಷ; ಇಬ್ಬರ ಬಂಧನ

Srinivasamurthy VN

ಪ್ಯಾರಿಸ್: ಫ್ರಾನ್ಸ್ ಅಧ್ಯಕ್ಷ ಇಮಾನ್ಯುಯೆಲ್ ಮ್ಯಾಕ್ರಾನ್ ಅವರಿಗೆ ಸಾರ್ವಜನಿಕವಾಗಿ ಕಪಾಳ ಮೋಕ್ಷ ಮಾಡಿದ ಆರೋಪದ ಮೇರೆಗೆ ಇಬ್ಬರನ್ನು ಅಧಿಕಾರಿಗಳು ವಶಕ್ಕೆ ಪಡೆದಿರುವ ಘಟನೆ ಮಂಗಳವಾರ ನಡೆದಿದೆ.

ಆಗ್ನೇಯ ಫ್ರಾನ್ಸ್‌ಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ತಮ್ಮನ್ನು ನೋಡು ಸೇರಿದ್ದ ಜನರೊಂದಿಗೆ ಚರ್ಚೆ ನಡೆಸಲು ಮ್ಯಾಕ್ರಾನ್ ಕಾರಿನಿಂದ ಇಳಿದು ಮಾತನಾಡುತ್ತಿದ್ದಾಗ ಅದೇ ಗುಂಪಿನಲ್ಲಿದ್ದ ದುಷ್ಕರ್ಮಿಯೋರ್ವ ಅಚಾನಕ್ ಆಗಿ ನುಗ್ಗಿಬಂದು ಮ್ಯಾಕ್ರಾನ್ ಅವರಿಗೆ ಕಪಾಳ ಮೋಕ್ಷ ಮಾಡಿದ್ದಾನೆ. ಈ ಕೂಡಲೇ  ಎಚ್ಚೆತ್ತ ಭದ್ರತಾ ಸಿಬ್ಬಂದಿ ರಕ್ಷಣೆಗೆ ಧಾವಿಸಿದ್ದು ಮ್ಯಾಕ್ರಾನ್ ಅವರ ರಕ್ಷಣೆ ಮಾಡಿದ್ದಾರೆ. ಅಲ್ಲದೆ ಕಾಪಾಳ ಮೋಕ್ಷ ಮಾಡಲು ಬಂದಿದ್ದ ಇಬ್ಬರು ಶಂಕಿತರನ್ನು ವಶಕ್ಕೆ ಪಡೆದಿದ್ದಾರೆ ಎಂದು ಸಿಎನ್‌ಎನ್ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಆಗ್ನೇಯ ಫ್ರಾನ್ಸ್‌ ನ ಡ್ರೋಮ್ ಪ್ರಾಂತ್ಯಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಬ್ಯಾರಿಕೇಡ್ ಗಳಾಚೆ ನಿಂತು ಕೂಗುತ್ತಿದ್ದ ಜನರನ್ನು ಕಂಡು ಅಧ್ಯಕ್ಷ ಮ್ಯಾಕ್ರಾನ್ ಅವರು ಕಾರನ್ನು ನಿಲ್ಲಿಸಿ ಜನರೊಂದಿಗೆ ಮಾತುಕತೆಗೆ ಮುಂದಾದರು. ಈ ವೇಳೆ ಜನಸ್ತೋಮದಲ್ಲಿದ್ದ ಇಬ್ಬರು ದುಷ್ಕರ್ಮಿಗಳು ಅಧ್ಯಕ್ಷರ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಅಧ್ಯಕ್ಷರತ್ತ ನುಗ್ಗಿಬಂದು ಜನರೊಂದಿಗೆ ಹ್ಯಾಂಡ್ ಶೇಕ್ ನಲ್ಲಿ ತೊಡಗಿದ್ದ ಅಧ್ಯಕ್ಷರಿಗೆ ಕಪಾಳ ಮೋಕ್ಷ ಮಾಡಿದೆ.

ಈ ಕೂಡಲೇ ಭದ್ರತಾ ಸಿಬ್ಬಂದಿಗಳು ಅವರನ್ನು ರಕ್ಷಿಸಿ ಆ ಇಬ್ಬರು ದುಷ್ಕರ್ಮಿಗಳನ್ನು ವಶಕ್ಕೆ ಪಡೆದಿದ್ದಾರೆ. ಬಳಿಕ ಮತ್ತೆ ಅಧ್ಯಕ್ಷರು ಜನಸಮೂಹದೊಂದಿಗೆ ಮತ್ತೆ ಹ್ಯಾಂಡ್‌ಶೇಕ್‌ ವಿನಿಮಯ ಮುಂದುವರೆಸಿದರು ಎಂದು ಫ್ರೆಂಚ್ ಅಧ್ಯಕ್ಷರ ಅಧಿಕೃತ ನಿವಾಸ ಎಲಿಸೀ ಹೇಳಿಕೆಯಲ್ಲಿ ತಿಳಿಸಿದೆ.

SCROLL FOR NEXT