ವಿದೇಶ

ಕೊರೊನಾ ಪೂರ್ವ ಕಾಲಕ್ಕೆ ಮರಳಿದ ಜಾಗತಿಕ ಮಾಲಿನ್ಯ ಪ್ರಮಾಣ: ಚೀನಾ ಪಾಲು ಹೆಚ್ಚು!

Harshavardhan M

ಗ್ಲಾಸ್ಗೋ: ಕೊರೊನಾ ಸಾಂಕ್ರಾಮಿಕದಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಲಾಕ್ ಡೌನ್ ಹೇರಿಕೆಯಾಗಿದ್ದರಿಂದ ಜಾಗತಿಕವಾಗಿ ಮಾಲಿನ್ಯ ಪ್ರಮಾಣ ಗಣನೀಯವಾಗಿ ತಗ್ಗಿತ್ತು. 

ಇಂಗಾಲಾಮ್ಲ ಸೂಸುವಿಕೆ ಕಡಿಮೆಯಾಗಿತ್ತು. ಆದರೀಗ ಲಾಕ್ ಡೌನ್ ಸಡಿಲವಾಗಿ ಜಗತ್ತು ಸಹಜಸ್ಥಿತಿಗೆ ಮರಳುತ್ತಿರುವುದರ ಪರಿಣಾಮವಾಗಿ ಮಾಲಿನ್ಯ ಪ್ರಮಾಣ ಏರಿಕೆಯಾಗಿದ್ದು, ಕೊರೊನಾ ಪೂರ್ವದ ಸ್ಥಿತಿಗೆ ಮರಳಿದೆ.

ವಿಜ್ನಾನಿಗಳ ತಂಡ ನಡೆಸಿರುವ ಅಧ್ಯಯನದಿಂದ ಈ ಸಂಗತಿ ತಿಳಿದುಬಂದಿದೆ. ಲಾಕ್ ಡೌನ್ ಸಮಯದಲ್ಲಿ ಜಗತ್ತಿನಾದ್ಯಂತ ಹೊರಸೂಸಲ್ಪಟ್ಟ ಇಂಗಾಲಾಮ್ಲ 34.8 ಶತಕೋಟಿ ಮೆಟ್ರಿಕ್ ಟನ್ ನಷ್ಟಿತ್ತು. ಒಂದೇ ವರ್ಷದ ಅಂತರದಲ್ಲಿ ಅದೀಗ 36.4 ಶತಕೋಟಿ ಮೆಟ್ರಿಕ್ ಟನ್ ಗೆ ಏರಿಕೆಯಾಗಿದೆ. ಅಂದರೆ ಇಂಗಾಲಾಮ್ಲ ಪ್ರಮಾಣದಲ್ಲಿ ಶೇ.೪.೯ರಷ್ಟು ಏರಿಕೆ ಕಂಡು ಬಂದಿದೆ.

ಅಚ್ಚರಿಯ ಸಂಗತಿ ಎಂದರೆ ಮಾಲಿನ್ಯ ಪ್ರಮಾಣ ಕೊರೊನಾ ಪೂರ್ವ ಕಾಲಕ್ಕೆ ಏರಿಕೆಯಾಗುವಲ್ಲಿ ಚೀನಾ ಮಹತ್ತರ ಪಾತ್ರ ವಹಿಸಿರುವುದು. 2019ಕ್ಕೆ ಹೋಲಿಸಿದರೆ ಚೀನಾ ಶೇ.7 ಪತಿಶತ ಇಂಗಾಲಾಮ್ಲ ಪ್ರಮಾಣವನ್ನು ಹೆಚ್ಚಿಗೆ ಹೊರಸೂಸಿದೆ. ಭಾರತ 2019ಕ್ಕೆ ಹೋಲಿಸಿದರೆ ಶೇ.3 ರಷ್ಟು ಇಂಗಾಲಾಮ್ಲ ಹೆಚ್ಚಿಗೆ ಹೊರ ಸೂಸಿದೆ. ಅಮೆರಿಕ ಮತ್ತು ಯುರೋಪ್ ದೇಶಗಳು 2019ರಲ್ಲಿ ಇದ್ದುದಕ್ಕಿಂತ ಕಡಿಮೆ ಪ್ರಮಾಣದ ಇಂಗಾಲಾಮ್ಲವನ್ನು 2021ರಲ್ಲಿ ಹೊರಸೂಸಿದೆ.

SCROLL FOR NEXT