ವಿದೇಶ

ಓಮಿಕ್ರಾನ್ ಭೀತಿ ಹಿನ್ನೆಲೆಯಲ್ಲಿ ವಿಮಾನ ಹಾರಾಟ ನಿರ್ಬಂಧಿಸಿದ 18 ದೇಶಗಳ ವಿರುದ್ಧ ದಕ್ಷಿಣ ಆಫ್ರಿಕಾ ಆಕ್ರೋಶ 

Harshavardhan M

ಜೊಹಾನ್ಸ್ ಬರ್ಗ್: ದಕ್ಷಿಣ ಆಫ್ರಿಕಾದಲ್ಲಿ ಹೊಸ ಕೊರೊನಾ ತಳಿ ಓಮಿಕ್ರಾನ್ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ದೇಶಕ್ಕೆ ವಿಮಾನ ಹಾರಾಟಕ್ಕೆ 18 ರಾಷ್ಟ್ರಗಳು ನಿರ್ಬಂಧ ಹೇರಿರುವುದನ್ನು ದ. ಆಫ್ರಿಕಾ ಖಂಡಿಸಿದೆ.

ಈ ಬಗೆಯ ಪ್ರತಿಕ್ರಿಯೆಯಿಂದ ಇತರೆ ದೇಶಗಳೊಡನೆ ಪಾರದರ್ಶಕತೆ ಕಾಪಾಡಿಕೊಳ್ಳುವುದು ಕಷ್ಟವಾಗುತ್ತದೆ ಎಂದು ಅಲ್ಲಿನ ಆರೋಗ್ಯ ಇಲಾಖೆ ಅಭಿಪ್ರಾಯಪಟ್ಟಿದೆ. ವೈರಾಣು ಕುರಿತ ಕ್ರಿಟಿಕಲ್ ಮಾಹಿತಿಯನ್ನು ಹಂಚಿಕೊಳ್ಳಬೇಕೆಂದರೆ ಅಂತಾರಾಷ್ಟ್ರೀಯ ಸಮುದಾಯದ ಸಹಕಾರ ಅತ್ಯಗತ್ಯ ಎಂದು ಅಧಿಕಾರಿಗಳು ಹೇಳಿದ್ದಾರೆ.  

18 ದೇಶಗಳು ದ.ಆಫ್ರಿಕಾಗೆ ವಿಧಿಸಿರುವ ವಿಮಾನ ಹಾರಾಟ ನಿರ್ಬಂಧ ಬಾಲಿಶವಾದುದು ಎಂದು ಹೇಳಿರುವ ಆರೋಗ್ಯ ಅಧಿಕಾರಿಗಳು ಓಮಿಕ್ರಾನ್ ವೈರಾಣು ದ.ಆಫ್ರಿಕಾದಲ್ಲಿ ಹುಟ್ಟಿದ್ದಲ್ಲ ಪತ್ತೆಯಾಗಿದ್ದು ಎನ್ನುವುದನ್ನು ನೆನಪಿಸಿದ್ದಾರೆ. ಇತರೆ ದೇಶಗಳು ಒಮಿಕ್ರಾನ್ ತಳಿಯನ್ನು ಪತ್ತೆ ಹಚ್ಚುವುದರಲ್ಲಿ ವಿಫಲವಾಗಿದ್ದಿರಬಹುದು ಎಂದು ಅವರು ಹೇಳಿದ್ದಾರೆ.

SCROLL FOR NEXT