ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ವಿದೇಶ

ಉಗ್ರರಿಗೆ ಬಗ್ಗದ ಹೋರಾಟಗಾರರು: ಪಂಜಶಿರ್ ನಲ್ಲಿ 600ಕ್ಕೂ ಹೆಚ್ಚು ತಾಲಿಬಾನಿಗಳ ಹತ್ಯೆ!

ಅಫ್ಘಾನಿಸ್ತಾನದಲ್ಲಿ ಬಾಕಿ ಎಲ್ಲಾ ಪ್ರದೇಶಗಳು ತಾಲಿಬಾನಿಗಳ ವಶವಾಗಿದ್ದರೂ ಈಶಾನ್ಯ ಪ್ರಾಂತ್ಯ ಪಂಜಶಿರ್​​ ಮಾತ್ರ ದಕ್ಕುತ್ತಿಲ್ಲ. ಪಂಜಶಿರ್​​ನ್ನು ವಶಪಡಿಸಿಕೊಂಡಿದ್ದಾಗಿ ತಾಲಿಬಾನಿಗಳು ಒಂದೆಡೆ ಹೇಳುತ್ತಿದೆ ಆದರೂ, ಸ್ಥಳೀಯ ಪ್ರತಿರೋಧಕ ಪಡೆ ನ್ಯಾಷನಲ್​ ರೆಸಿಸ್ಟೆನ್ಸ್​ ಫ್ರಂಟ್ ಆಫ್​ ಅಫ್ಘಾನಿಸ್ತಾನದ ಸಿಬ್ಬಂದಿ ಅದನ್ನು ಒಪ್ಪುತ್ತಿಲ್ಲ.

ಸಂಗ್ರಹ ಚಿತ್ರ
Srinivasa Murthy VN
Updated On : 5 Sept 2021, 11:41 am

ಕಾಬೂಲ್: ಅಫ್ಘಾನಿಸ್ತಾನದಲ್ಲಿ ಬಾಕಿ ಎಲ್ಲಾ ಪ್ರದೇಶಗಳು ತಾಲಿಬಾನಿಗಳ ವಶವಾಗಿದ್ದರೂ ಈಶಾನ್ಯ ಪ್ರಾಂತ್ಯ ಪಂಜಶಿರ್​​ ಮಾತ್ರ ದಕ್ಕುತ್ತಿಲ್ಲ. ಪಂಜಶಿರ್​​ನ್ನು ವಶಪಡಿಸಿಕೊಂಡಿದ್ದಾಗಿ ತಾಲಿಬಾನಿಗಳು ಒಂದೆಡೆ ಹೇಳುತ್ತಿದೆ ಆದರೂ, ಸ್ಥಳೀಯ ಪ್ರತಿರೋಧಕ ಪಡೆ ನ್ಯಾಷನಲ್​ ರೆಸಿಸ್ಟೆನ್ಸ್​ ಫ್ರಂಟ್ ಆಫ್​ ಅಫ್ಘಾನಿಸ್ತಾನದ ಸಿಬ್ಬಂದಿ ಅದನ್ನು ಒಪ್ಪುತ್ತಿಲ್ಲ.

ತಾವೂ ಉಗ್ರರನ್ನು ಸಂಪೂರ್ಣವಾಗಿ ಹಿಮ್ಮೆಟ್ಟಿಸಿದ್ದೇವೆ. ಪಂಜಶಿರ್ ನಮ್ಮ ಬಳಿಯೇ ಇದೆ ಎಂದು ಹೇಳುತ್ತಿದ್ದಾರೆ. ನಾವು ಪಂಜಶಿರ್​ ಪ್ರಾಂತ್ಯದ ರಾಜಧಾನಿ ಬಜಾರಕ್​​ಗೆ ತಲುಪಿದ್ದೇವೆ. ಅಲ್ಲಿನ ಪ್ರಾಂತೀಯ ಗವರ್ನರ್​ ಕಚೇರಿಯನ್ನು ವಶಪಡಿಸಿಕೊಂಡಿದ್ದೇವೆ ಎಂದು ತಾಲಿಬಾನಿಗಳು ಹೇಳಿದ್ದರು. ಆದರೆ, ಸ್ಥಳೀಯ ಹೋರಾಟಗಾರರು ಇದನ್ನು ಸುಳ್ಳು ಎಂದಿದ್ದಾರೆ. ಪಂಜಶಿರ್​ ಮತ್ತು ಕಪಿಸಾ ಪ್ರಾಂತ್ಯಗಳ ಗಡಿಯಿಂದಲೇ ತಾಲಿಬಾನಿಗಳನ್ನು ಹಿಮ್ಮೆಟ್ಟಿಸಲಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ತಾಲಿಬಾನಿಗಳಿಂದ ಗಾಳಿಯಲ್ಲಿ ಗುಂಡು: ಮಕ್ಕಳು ಸೇರಿ ಕನಿಷ್ಠ 17 ಮಂದಿ ಸಾವು

Advertisement

Advertisement

ಅಫ್ಘಾನ್​ ನ್ಯಾಷನಲ್​​ ರೆಸಿಸ್ಟೆನ್ಸ್​ ಪಡೆಯ ವಕ್ತಾರ ಫಾಹಿಮ್​ ದಷ್ಟಿ ಟ್ವೀಟ್​ ಮಾಡಿ, ನಾವು ಪಂಜಶಿರ್​​ನ ವಿವಿಧ ಜಿಲ್ಲೆಗಳಲ್ಲಿ ಮುಂಜಾನೆಯಿಂದಲೂ ತಾಲಿಬಾನಿ ಉಗ್ರರ ವಿರುದ್ಧ ದಾಳಿ ನಡೆಸಿ, 600ಕ್ಕೂ ಹೆಚ್ಚು ಮಂದಿಯನ್ನು ಕೊಂದಿದ್ದೇವೆ. 1000ಕ್ಕೂ ಹೆಚ್ಚು ಭಯೋತ್ಪಾದಕರು ನಮ್ಮ ಸೆರೆಯಾಗಿದ್ದಾರೆ. ಇವರಲ್ಲಿ ಒಂದಷ್ಟು ಜನರು ಶರಣಾಗಿದ್ದರು ಎಂದು ಹೇಳಿದ್ದಾರೆ.

ಪಂಜಶಿರ್ ಉಳಿದ ಪ್ರಾಂತ್ಯಗಳಂತೆ ಅಲ್ಲ, ಇಲ್ಲಿ ಗಣಿಗಾರಿಕೆ ವ್ಯಾಪಕ ಆಗಿರುವುದರಿಂದ ತಾಲಿಬಾನ್​ ಉಗ್ರರಿಗೆ ಇಲ್ಲಿ ಹೋರಾಡಲು ಕಷ್ಟವಾಗುತ್ತಿದೆ. ಬೇರೆ ಜಿಲ್ಲೆಗಳಿಂದ ಇಲ್ಲಿಗೆ ಬರಲೂ ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಅಫ್ಘಾನಿಸ್ತಾನದಿಂದ ಸ್ಥಳಾಂತರಗೊಂಡ 25,000 ಮಂದಿಗೆ ಸೇನಾನೆಲೆಗಳಲ್ಲಿ ಪುಟ್ಟ ನಗರಗಳನ್ನು ನಿರ್ಮಿಸುತ್ತಿರುವ ಅಮೆರಿಕ

ಆ್ಯಂಟಿ ತಾಲಿಬಾನ್​ ಪ್ರತಿರೋಧಕ ಪಡೆಯ ಕಮಾಂಡರ್​ ಅಹ್ಮದ್​ ಮಸೂದ್​ ತಾಲಿಬಾನಿಗಳ ವಿರುದ್ಧ ಹೋರಾಟದಲ್ಲಿ ಗಟ್ಟಿಯಾಗಿ ಕಾಲೂರಿ ನಿಂತಿದ್ದಾರೆ. ಈ ಪಂಜಶಿರ್​ ವ್ಯಾಲಿಯನ್ನು ತಾಲಿಬಾನಿಗಳು ಆಕ್ರಮಿಸಿಕೊಳ್ಳಲು ಬಿಡುವುದಿಲ್ಲ. ನನ್ನ ಪ್ರಾಂತ್ಯವನ್ನು ಕಾಪಾಡಿಕೊಳ್ಳುತ್ತೇನೆ ಎಂದು ಪ್ರತಿಜ್ಞೆ ಮಾಡಿದ್ದಾರೆ.  

ದೇವರು, ನ್ಯಾಯ ಮತ್ತು ಸ್ವಾತಂತ್ರ್ಯದ ಮೇಲೆ ನಂಬಿಕೆಯಿಟ್ಟು ಹೋರಾಟ ಮುಂದುವರಿಸುವುದಾಗಿ ಹೇಳಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ಶನಿವಾರ ವರದಿ ಮಾಡಿವೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement