ಪಂಜಶೀರ್-ತಾಲಿಬಾನ್ ಸಂಘರ್ಷ 
ವಿದೇಶ

ಅಫ್ಘಾನಿಸ್ತಾನ ಘರ್ಷಣೆ: ರೆಸಿಸ್ಟೆನ್ಸ್ ಫೋರ್ಸ್ ವಕ್ತಾರನ ಸಾವು, ಪಂಜಶೀರ್ ತೊರೆದರೆ ತಾಲಿಬಾನ್ ಜತೆ ಮಾತುಕತೆ ಎಂದ ಅಹ್ಮದ್ ಮಸೂದ್

ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಮತ್ತು ರೆಸಿಸ್ಟೆನ್ಸ್ ಫೋರ್ಸ್ ಪಡೆಗಳ ನಡುವಿನ ಘರ್ಷಣೆ ಮುಂದುವರೆದಿದ್ದು, ಇತ್ತ ತಾಲಿಬಾನ್ ಪಡೆಗಳ ದಾಳಿಯಲ್ಲಿ ರೆಸಿಸ್ಟೆನ್ಸ್ ಫೋರ್ಸ್ ವಕ್ತಾರರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಕಾಬೂಲ್: ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಮತ್ತು ರೆಸಿಸ್ಟೆನ್ಸ್ ಫೋರ್ಸ್ ಪಡೆಗಳ ನಡುವಿನ ಘರ್ಷಣೆ ಮುಂದುವರೆದಿದ್ದು, ಇತ್ತ ತಾಲಿಬಾನ್ ಪಡೆಗಳ ದಾಳಿಯಲ್ಲಿ ರೆಸಿಸ್ಟೆನ್ಸ್ ಫೋರ್ಸ್ ವಕ್ತಾರರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಪಂಜ್ ಶಿರ್ ಪ್ರತಿರೋಧ ನ್ಯಾಷನಲ್ ರೆಸಿಸ್ಟೆನ್ಸ್ ಫ್ರಂಟ್ ವಕ್ತಾರ ಫಾಹೀಮ್ ದಷ್ಟಿ ಭಾನುವಾರ ತಾಲಿಬಾನ್ ಜೊತೆಗಿನ ಘರ್ಷಣೆಯಲ್ಲಿ ನಿಧನರಾಗಿದ್ದಾರೆ ಎಂದು ಪ್ರತಿರೋಧ ಪಡೆಗಳ ಮೂಲಗಳು ತಿಳಿಸಿವೆ. 

ಪ್ರತಿರೋಧ ವಕ್ತಾರರ ಸಾವನ್ನು ಅಫಘಾನ್ ಸುದ್ದಿ ಸಂಸ್ಥೆ ಖಾಮಾ ಪ್ರೆಸ್ ಇಂದು ವರದಿ ಮಾಡಿದ್ದು, "ಪಂಜಶೀರ್ ಪ್ರತಿರೋಧದ ವಕ್ತಾರ ಫಾಹೀಮ್ ದುಷ್ಟಿಯು ತಾಲಿಬಾನ್ ಜೊತೆಗಿನ ಯುದ್ಧದಲ್ಲಿ ಗಳಲ್ಲಿ ನಿಧನರಾದರು" ಎಂದು ಹೇಳಲಾಗಿದೆ.

“ದಬ್ಬಾಳಿಕೆ ಮತ್ತು ಆಕ್ರಮಣಶೀಲತೆಯ ವಿರುದ್ಧದ ಪವಿತ್ರ ಪ್ರತಿರೋಧದಲ್ಲಿ ಇಬ್ಬರು ಸಹಚರರನ್ನು ಕಳೆದುಕೊಳ್ಳಲಾಗಿದೆ. ಫಾಹಿಮ್ ದಷ್ಟಿ, ಎನ್ ಆರ್ ಎಫ್ ವಕ್ತಾರ ಮತ್ತು ಜನರಲ್ ಅಬ್ದುಲ್ ವೂಡೋಡ್ ಜಾರಾ ಹುತಾತ್ಮರಾದರು. ಅವರ ಸ್ಮರಣೆ ಶಾಶ್ವತವಾಗಿರಲಿ!" ಎಂದು ನ್ಯಾಷನಲ್ ರೆಸಿಸ್ಟೆನ್ಸ್ ಫ್ರಂಟ್ ಟ್ವೀಟ್ ತಿಳಿಸಿದೆ. 

ಪಂಜಶೀರ್ ತೊರೆದರೆ ತಾಲಿಬಾನ್ ಜತೆ ಮಾತುಕತೆ: ಅಹ್ಮದ್ ಮಸೂದ್
ಅತ್ತ ನ್ಯಾಷನಲ್ ರೆಸಿಸ್ಟೆನ್ಸ್ ಫ್ರಂಟ್ ವಕ್ತಾರ ಫಾಹೀಮ್ ದಷ್ಟಿ ಸಾವಿನ ಬೆನ್ನಲ್ಲೇ ಪಂಜಶೀರ್ ತೊರೆದರೆ ತಾಲಿಬಾನ್ ಜತೆ ಮಾತುಕತೆಗೆ ಸಿದ್ಧ ಎಂದು ಪ್ರತಿರೋಧ ಪಡೆಗಳ ನಾಯಕ ಅಹ್ಮದ್ ಮಸೂದ್ ಹೇಳಿದ್ದಾರೆ.

ತಾಲಿಬಾನ್ ಸಂಘಟನೆಯು ಪಂಜಶೀರ್ ಪ್ರಾಂತ್ಯವನ್ನು ತೊರೆದರೆ ಹೋರಾಟವನ್ನು ನಿಲ್ಲಿಸಲು ಮತ್ತು ಮಾತುಕತೆ ಆರಂಭಿಸಲು ಸಿದ್ಧ.  ಪಂಜಶೀರ್ ಮತ್ತು ಅಂದರಬ್ ನಲ್ಲಿ ತಾಲಿಬಾನ್ ತಮ್ಮ ದಾಳಿ ಮತ್ತು ಸೇನಾ ಕಾರ್ಯಾಚರಣೆಗಳನ್ನು ನಿಲ್ಲಿಸಿದರೆ ಶಾಶ್ವತ ಶಾಂತಿಯನ್ನು ಸಾಧಿಸಲು ಯುದ್ಧವನ್ನು ತಕ್ಷಣವೇ ನಿಲ್ಲಿಸಲು ರಾಷ್ಟ್ರೀಯ ಪ್ರತಿರೋಧ ಪಡೆಗಳು ಸಿದ್ಧವಾಗಿವೆ, ಮತ್ತು ತಜ್ಞರು ಹಾಗೂ ಸುಧಾರಕರೊಂದಿಗೆ ಬೃಹತ್ ಸಭೆ ನಡೆಸಲು, ಮಾತುಕತೆಗಳನ್ನು ಮುಂದುವರಿಸಲು ಆಶಿಸುತ್ತೇವೆ," ಎಂದು ಭಾನುವಾರ ಮಸೂದ್ ಫೇಸ್‌ಬುಕ್‌ನಲ್ಲಿ ಪ್ರಕಟಿಸಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?