ವಿದೇಶ

ಇಸ್ಲಾಂ ಮೂಲಭೂತವಾದ ಜಗತ್ತಿನ ಅತಿ ದೊಡ್ಡ ವಿಪತ್ತು: ಬ್ರಿಟನ್ ಮಾಜಿ ಪ್ರಧಾನಿ ಎಚ್ಚರಿಕೆ

Harshavardhan M

ಲಂಡನ್: ಇಸ್ಲಾಂ ಮೂಲಭೂತವಾದ ಮತ್ತು ತಮ್ಮ ಕಾರ್ಯಸಾಧನೆಗೆ ಹಿಂಸೆಯನ್ನು ಬಳಸಿಕೊಳ್ಳುವ ಅವರ ಮಾರ್ಗ ಎರಡೂ ಜಗತ್ತು ಎದುರಿಸುತ್ತಿರುವ ಅಪಾಯಗಳಲ್ಲೇ ಅತಿ ದೊಡ್ದ ಅಪಾಯ ಎಂದು ಬ್ರಿಟನ್ ಮಾಜಿ ಪ್ರಧಾನಿ ಟೋನಿ ಬ್ಲೇರ್ ತಿಳಿಸಿದ್ದಾರೆ. 

ಅಮೆರಿಕ ಅವಳಿ ಕಟ್ಟಡದ ಮೇಲೆ ನಡೆದ ದಾಳಿಯ 20ನೇ ವರ್ಷಾಚರಣೆ ಸಂದರ್ಭ ಅವರು ಮಾತನಾಡುತ್ತಿದ್ದರು. ಅಫ್ಘಾನಿಸ್ತಾನದಲ್ಲಿ ನಡೆಯುತ್ತಿರುವ ಸದ್ಯದ ಬೆಳವಣಿಗೆಗಳನ್ನು ಜಗತ್ತು ಬಹಳ ಎಚ್ಚರಿಕೆಯಿಂದ ಗಮನ ಇರಿಸಬೇಕಾಗಿದೆ ಎಂದು ಅವರು ತಿಳಿಸಿದ್ದಾರೆ. 

ಜಾಗತಿಕ ಮಟ್ಟದಲ್ಲಿ ಇಸ್ಲಾಂ ಮೂಲಭೂತವಾದ ಹರಡುವಲ್ಲಿ ತಾಲಿಬಾನ್ ಪ್ರಮುಖ ಪಾತ್ರವಹಿಸಲಿರುವ ಬಗ್ಗೆ ಅವರು ಆತಂಕ ವ್ಯಕ್ತಪಡಿಸಿದ್ದಾರೆ. ಇಸ್ಲಾಂ ಮೂಲಭೂತವಾದಿಗಳಾದ ತಾಲಿಬಾನಿಗಳನ್ನು ಶಸ್ತ್ರಾಸ್ತ್ರ, ಸೇನೆ ಬಳಸಿ ಮಟ್ಟ ಹಾಕಬಹುದು. ಆದರೆ ಇಸ್ಲಾಂ ಮೂಲಭೂತವಾದದ ವಿಚಾರಧಾರೆಯನ್ನು ಮಟ್ಟ ಹಾಕುವುದು ಹೇಗೆ ಎನ್ನುವುದು ನಮ್ಮ ಮುಂದಿರುವ ಸವಾಲು.

2001ರಲ್ಲಿ ಅಮೆರಿಕ ಅವಳಿ ಕಟ್ಟಡ ಮೇಲೆ ನಡೆದ ದಾಳಿಗೆ ಪ್ರತೀಕಾರವಾಗಿ ಅಮೆರಿಕ ಮತ್ತು ನ್ಯಾಟೊ ಪಡೆಗಳು ಅಫ್ಘಾನಿಸ್ತಾನದಲ್ಲಿ ಸೇನಾ ಕಾರ್ಯಾಚರಣೆಯಲ್ಲಿ ಬ್ರಿಟನ್ ಕೂಡಾ ನೆರವಾಗಿತ್ತು. ಆಗ ಬ್ರಿಟನ್ ಪ್ರಧಾನಿಯಾಗಿದ್ದವರು ಇದೇ ಟೋನಿ ಬ್ಲೇರ್. ಅಲ್ ಖೈದಾ ವಿರುದ್ಧದ ಕಾರ್ಯಾಚರಣೆಯಲ್ಲಿ ಅವರು ಅಮೆರಿಕಕ್ಕೆ ಸಾಥ್ ನೀಡಿದ್ದರು.

SCROLL FOR NEXT