ವಿದೇಶ

ಹೊಸ ಸರ್ಕಾರ ರಚನೆಗೆ ತಾಂತ್ರಿಕ ಅಡಚಣೆ; ಚೀನಾ- ಪಾಕಿಸ್ತಾನ ಆರ್ಥಿಕ ಕಾರಿಡಾರ್ ಯೋಜನೆ ಸೇರಲು ತಾಲಿಬಾನ್ ಇಂಗಿತ

Harshavardhan M

ಕಾಬೂಲ್: ಹೊಸ ಸರ್ಕಾರ ರಚನೆ ಘೋಷಣೆಯನ್ನು ಮುಂದೂಡತ್ತಲೇ ಬಂದಿರುವ ತಾಲಿಬಾನ್, ಹೊಸ ಸರ್ಕಾರ ರಚನೆಗೆ ಸಿದ್ಧತೆ ಮುಗಿದಿದ್ದು, ಕೆಲ ತಾಂತ್ರಿಕ ಸಮಸ್ಯೆ ಬಾಕಿ ಉಳಿದಿದೆ ಎಂದು ಹೇಳಿದೆ. 

ಇದೇ ವೇಳೆ ಯಾವುದೇ ಕ್ಷಣದಲ್ಲಿ ಬೇಕಾದರೂ ಸರ್ಕಾರ ರಚನೆ ಘೋಷಣೆ ಹೊರಬೀಳಬಹುದು ಎಂದು ತಾಲಿಬಾನ್ ವಕ್ತಾರರು ತಿಳಿಸಿದ್ದಾರೆ. ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಬಿಗಿಮುಷ್ಟಿಗೆ ಸಿಲುಕದ ಏಕೈಕ ಪ್ರಾಂತ್ಯ ಎಂಬ ಕೀರ್ತಿಗೆ ಪಾತ್ರವಗಿರುವ ಪಂಜ್ ಶಿರ್ ಬಗ್ಗೆ ಗೊಂದಲಮಯ ಹೇಳಿಕೆಗಳನ್ನು ಎರಡೂ ಪಕ್ಷಗಳು ನೀಡಿವೆ.

ತಾಲಿಬಾನ್ ವಿರುದ್ಧ ಎನ್ ಆರ್ ಎಫ್ ಪಡೆಗಳು ನೆಲೆಗೊಂಡಿದ್ದ ಪಂಜ್ ಶಿರ್ ಪ್ರಾಂತ್ಯವನ್ನು ವಶಪಡಿಸಿಕೊಂಡಿದ್ದು, ಈಗ ಇಡೀ ದೇಶ ತನ್ನ ವಶದಲ್ಲಿದೆ ಎಂದು ತಾಲಿಬಾನ್ ಈ ಹಿಂದೆ ಹೇಳಿಕೆ ನೀಡಿತ್ತು. 

ಈ ಹೇಳಿಕೆಯನ್ನು ಪಂಜ್ ಶಿರ್ ನಲ್ಲಿನ ಎನ್ ಆರ್ ಎಫ್ ಪಡೆಯ ನಾಯಕರು ನಿರಾಕರಿಸಿದ್ದರು. ತಾಲಿಬಾನ್ ಪಂಜ್ ಶಿರ್ ಗೆ ಹೋಗುವ ರಸ್ತೆಯನ್ನು ಮಾತ್ರವೇ ವಶಪಡಿಸಿಕೊಂಡಿದ್ದು, ಪ್ರಾಂತ್ಯವನ್ನಲ್ಲ ಎಂದು ತಿಳಿಸಿದೆ.  

ಇದೇ ವೇಳೆ ತಾಲಿಬಾನ್ ಚೀನಾ- ಪಾಕಿಸ್ತಾನ ಆರ್ಥಿಕ ವಲಯ ಯೋಜನೆಗೆ ತಾನೂ ಕೈಜೋಡಿಸುವ ಇಂಗಿತವನ್ನು ವ್ಯಕ್ತಪಡಿಸಿದೆ. ಈ ಹಿಂದೆ ಜಗತ್ತಿನಲ್ಲಿ ಆರ್ಥಿಕವಾಗಿ ಸದೃಢವಾಗಿರುವ ಚೀನಾ ಜೊತೆ ಉತ್ತಮ ಸಂಬಂಧ ಹೊಂದಲು ಇಚ್ಛಿಸುವುದಾಗಿ ತಾಲಿಬಾನಿ ನಾಯಕರು ಹೇಳಿದ್ದರು. ಇದೀಗ ಪಾಕ್, ಚೀನಾ ಮತ್ತು ಅಫ್ಘಾನಿಸ್ತಾನ ನಡುವಿನ ಬಾಂಧವ್ಯ ಬಲವಾಗುತ್ತಿರುವ ಸೂಚನೆ ಇನ್ನಷ್ಟು ದಟ್ಟವಾಗಿದೆ.  

SCROLL FOR NEXT