ತಾಲಿಬಾನ್ ಉಗ್ರರು 
ವಿದೇಶ

ಆಫ್ಘಾನಿಸ್ತಾನ ತೊರೆಯಲು ಅಮೆರಿಕ ಸೇರಿದಂತೆ ಇತರೆ ದೇಶಗಳ ನಾಗರೀಕರಿಗೆ ತಾಲಿಬಾನ್ ಅನುಮತಿ

ಈ ಹಿಂದೆ ಆಫ್ಘನ್ ತೊರೆಯಲ್ಲಿ ಅಡ್ಡಿ ಪಡಿಸಿದ್ದ ತಾಲಿಬಾನ್ ಇದೀಗ ಅಮೆರಿಕ ಸೇರಿದಂತೆ ಇತರೆ ದೇಶಗಳ ನಾಗರೀಕರಿಗೆ ತವರಿಗೆ ಮರಳಲು ಅನುಮತಿ ನೀಡಿದೆ.

ಕಾಬೂಲ್: ಈ ಹಿಂದೆ ಆಫ್ಘನ್ ತೊರೆಯಲ್ಲಿ ಅಡ್ಡಿ ಪಡಿಸಿದ್ದ ತಾಲಿಬಾನ್ ಇದೀಗ ಅಮೆರಿಕ ಸೇರಿದಂತೆ ಇತರೆ ದೇಶಗಳ ನಾಗರೀಕರಿಗೆ ತವರಿಗೆ ಮರಳಲು ಅನುಮತಿ ನೀಡಿದೆ.

ಈ ಬಗ್ಗೆ ಟೋಲೋ ಸುದ್ದಿಸಂಸ್ಥೆ ವರದಿ ಮಾಡಿದ್ದು, ಅಫ್ಗಾನಿಸ್ತಾನದಲ್ಲಿ ಉಳಿದಿರುವ ಅಮೆರಿಕದ 200 ನಾಗರಿಕರು ಸೇರಿದಂತೆ ಇತರ ರಾಷ್ಟ್ರಗಳ ನಾಗರಿಕರಿಗೆ ವಿಮಾನಗಳ ಮೂಲಕ ಕಾಬೂಲ್‌ ವಿಮಾನ ನಿಲ್ದಾಣದಿಂದ ನಿರ್ಗಮಿಸಲು ತಾಲಿಬಾನ್ ಅಧಿಕಾರಿಗಳು ಒಪ್ಪಿಗೆ ನೀಡಿದ್ದಾರೆ ಎನ್ನಲಾಗಿದೆ.

ಅಲ್ಲದೆ ಈ ಬಗ್ಗೆ ಸ್ವತಃ ಹೆಸರು ಹೇಳಲಿಚ್ಚಿಸದ ಅಮೆರಿಕದ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದು, ಅಮೆರಿಕದ ವಿಶೇಷ ಪ್ರತಿನಿಧಿ ಅಲ್ಮಯ್‌ ಖಲೀಲ್ಜಾದ್ ಅವರು ವಿದೇಶಿ ಪ್ರಜೆಗಳು ತೆರಳಲು ಅನುಮತಿ ನೀಡುವಂತೆ ತಾಲಿಬಾನ್‌ ಅನ್ನು ಒತ್ತಾಯಿಸಿದ್ದರು ಎಂದು ರಾಯಿಟರ್ಸ್‌ ಸುದ್ದಿ ಸಂಸ್ಥೆಗೆ ತಿಳಿಸಿದರು. ಅಮೆರಿಕ  ಮತ್ತು ಇತರ ರಾಷ್ಟ್ರಗಳ ಪ್ರಜೆಗಳು ಕಾಬೂಲ್‌ನಿಂದ ಗುರುವಾರ ಹೊರಡುವ ನಿರೀಕ್ಷೆ ಇದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಂಚಿ ಪರೀಕ್ಷೆ ವಿವಾದ: ಬ್ಯಾರಿಕೇಡ್ ಮುರಿದು ವಿಧಾನಸೌಧದತ್ತ ನುಗ್ಗಿದ ವಿದ್ಯಾರ್ಥಿಗಳು! ಜಲಫಿರಂಗಿ ಬಳಸಿದ ಪೊಲೀಸರು, Video

'JDS ಪಾದಯಾತ್ರೆಯ ಬಂಡವಾಳ ಬಯಲು ಮಾಡಿದ ವಿಜಯೇಂದ್ರ': ಕಾಂಗ್ರೆಸ್​​ನಿಂದ ವಿಡಿಯೋ ಬಿಡುಗಡೆ!

TNIE Exclusive | Air India ವಿಮಾನದಲ್ಲಿ ಭಾರೀ ತಾಂತ್ರಿಕ ದೋಷ..! Phuket-Delhi ವಿಮಾನ 300 ಅಡಿ ಕುಸಿತಕ್ಕೆ Triple hydraulic systems ವೈಫಲ್ಯ ಕಾರಣ..?

GBA: ಖಾಲಿ ನಿವೇಶನ ಸ್ವಚ್ಛಗೊಳಿಸದ, ಡೆಬ್ರಿಸ್ ತೆರವುಗೊಳಿಸದ ಮಾಲೀಕರೆ ಎಚ್ಚರ! 19 ಸಾವಿರ ರೂಗಳಿಂದ 1.28 ಲಕ್ಷವರೆಗೂ ಬೀಳಲಿದೆ ದಂಡ!

ಸಂಪುಟ ವಿಸ್ತರಣೆ ಬಿಕ್ಕಟ್ಟು ಶಮನಕ್ಕೆ ಸಿಎಂ ಡಿಕೆ.ಶಿವಕುಮಾರ್ ದೆಹಲಿಗೆ ದೌಡು: ಹೈಕಮಾಂಡ್‌ ಜೊತೆ ಮಹತ್ವದ ಚರ್ಚೆ..!