ವಿದೇಶ

ರಷ್ಯಾದ ಮುಂದಿನ ಅಧ್ಯಕ್ಷೀಯ ಚುನಾವಣೆಯಲ್ಲಿ ಪುತಿನ್ ಪಕ್ಷಕ್ಕೆ 450 ರಲ್ಲಿ 324 ಸೀಟು: ಚುನಾವಣಾ ಅಧಿಕಾರಿಗಳ ಭವಿಷ್ಯ

Harshavardhan M

ಮಾಸ್ಕೊ: ರಷ್ಯಾ ಅಡಳಿತಾರೂಢ ಪಕ್ಷ 2024ರಲ್ಲಿ ನಡೆಯಲಿರುವ ರಾಷ್ಟ್ರೀಯ ಸಂಸತ್ ಚುನಾವಣೆಯಲ್ಲಿ 450ರಲ್ಲಿ 324 ಸೀಟುಗಳನ್ನು ಗೆದ್ದುಕೊಳ್ಳಲಿದೆ ಎಂದು ಚುನಾವಣಾಧಿಕಾರಿಗಳು ಭವಿಷ್ಯ ನುಡಿದಿದ್ದಾರೆ. ಈ ಸಂಖ್ಯೆ ಕಳೆದ ಬಾರಿಯ ಚುನಾವಣೆಯಲ್ಲಿ ಗಳಿಸಿದ್ದಕ್ಕಿಂತ ಕಡಿಮೆ. ಆದರು ಸರ್ಕಾರ ರಚಿಸಲು ಆ ಸಂಖ್ಯೆ ಸಾಕಾಗುತ್ತರೆ. 

ಇತ್ತೀಚಿಗಷ್ಟೆ ಕೆಳಮನೆಯಲ್ಲಿ ವಿಶ್ವಾಸಮತ ಸಾಬೀತು ಪಡಿಸಿ ಪುತಿನ್ ರ ಪಕ್ಷ ಮತ್ತೆ ಜಯಶಾಲಿಯಾಗಿ ಹೊಮ್ಮಿತ್ತು. 2024ರಲ್ಲಿ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಅವರ ಅವಧಿ ಕೊನೆಗೊಳ್ಳುತ್ತದೆ. 

ಆ ಸಮಯಕ್ಕೆ ಪುತಿನ್ 12 ವರ್ಷಗಳ ಕಾಲ ರಷ್ಯಾ ಆಳಿದಂತಾಗುತ್ತದೆ. ಒಂದು ವೇಳೆ ಪುತಿನ್ ಮತ್ತೆ ಅಧ್ಯಕ್ಷ ಪದವಿ ಮೇಲೆ ಕಣ್ಣಿಟ್ಟರೆ, ಆತ ಮರು ಚುನಾವಣೆಗೆ ಸಿದ್ಧವಾಗಬಹುದು ಇಲ್ಲವೇ ಅಧಿಕಾರದಲ್ಲಿರಲು ಮತ್ತೇನಾದರೂ ತಂತ್ರ ಹೂಡಬಹುದು ಎಂಡು ಪರಿಣತರು ಅಭಿಪ್ರಾಯಪಟ್ಟಿದ್ದಾರೆ.

ಭಾನುವಾರ ಕೊನೆಗೊಂಡ ಕೆಳಮನೆ ಸಂಸದೀಯ ಚುನಾವಣೆಯಲ್ಲಿ ಪುತಿನ್ ಅಕ್ರಮ ಎಸಗಿದ್ದಾರೆ ಎನ್ನುವ ಆರೋಪ ಕೇಳಿಬಂದಿತ್ತು. ವಿರೋಧ ಪಕ್ಷದ ಮುಖಂಡರನ್ನು ಚುನಾವಣೆಗೂ ಮುನ್ನ ಬಂಧಿಸಲಾಗಿತ್ತು. ಪುತಿನ್ ಅವರ ಪ್ರತೀಕಾರದ ಭಯದಿಂದ ಹಲವು ಮಂದಿ ವಿರೋಧ ಪಕ್ಷ ಮುಖಂಡರು ವಿದೇಶಕ್ಕೆ ಪಲಾಯನ ಮಾಡಿದ್ದರು. 

SCROLL FOR NEXT