ವಿದೇಶ

ಪ್ರಧಾನಿ ಮೋದಿ ಇದ್ದಲ್ಲಿಗೇ ಬಂದು ಭುಜ ತಟ್ಟಿ, ಕೈ ಕುಲುಕಿ ಮಾತನಾಡಿಸಿದ ಅಮೆರಿಕ ಅಧ್ಯಕ್ಷ ಬೈಡನ್: ವಿಡಿಯೋ ವೈರಲ್ 

Srinivas Rao BV

ಮುನೀಚ್‌: ಜರ್ಮನಿಯಲ್ಲಿ ನಡೆಯುತ್ತಿರುವ ಜಿ-7 ಶೃಂಗಸಭೆಯಲ್ಲಿ ಭಾಗವಹಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಮೆರಿಕ ಅಧ್ಯಕ್ಷ ಜೋ ಬೈಡನ್ ಹುಡುಕಿಕೊಂಡು ಬಂದು ಕೈ ಕುಲುಕಿರುವ ವಿಡಿಯೋ ಈಗ ಎಲ್ಲೆಡೆ ಭಾರಿ ವೈರಲ್ ಆಗತೊಡಗಿದೆ. 
 
ಪ್ರಧಾನಿ ಮೋದಿ ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಅವರೊಂದಿಗೆ ಮಾತನಾಡುತ್ತಿದ್ದ ವೇಳೆ ವೇದಿಕೆಗೆ ಆಗಮಿಸಿದ ಜೋ ಬೈಡನ್ ಪ್ರಧಾನಿ ಮೋದಿ ಇದ್ದಲ್ಲಿಗೇ ಬಂದು ಭುಜ ತಟ್ಟಿ ಕೈ ಕುಲುಕಿ ಮಾತನಾಡಿಸಿದರು. ತಕ್ಷಣವೇ ಸ್ಪಂದಿಸಿದ ಪ್ರಧಾನಿ ಮೋದಿಯೂ ಅತ್ಯಂತ ಆತ್ಮೀಯವಾಗಿ ಅಮೆರಿಕ ಅಧ್ಯಕ್ಷರೊಂದಿಗೆ ಮಾತನಾಡಿದರು. 

ಜಾಗತಿಕ ಮಟ್ಟದಲ್ಲಿ ಭಾರತದ ಪ್ರಧಾನಿಯೊಬ್ಬರನ್ನು ಅಮೆರಿಕ ಅಧ್ಯಕ್ಷರು ಶಿಷ್ಟಾಚಾರ ಬದಿಗಿರಿಸಿ ಅವರಿದ್ದಲ್ಲಿಯೇ ಬಂದು ಮಾತನಾಡಿಸಿರುವ ಅಪರೂಪದ ಘಟನೆ ಇದಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. 

ಪ್ರಧಾನಿ ಮೋದಿ ದಿನಾಂತ್ಯದ ವೇಳೆಗೆ ವಿದೇಶಿ ನಾಯಕರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ. ಜೂ.26 ರಂದು ಜರ್ಮನಿಗೆ ತೆರಳಿದ ಪ್ರಧಾನಿಗೆ ಅಲ್ಲಿ ಅತ್ಯಂತ ವೈಭವದ ಸ್ವಾಗತ ದೊರೆಯಿತು. ಜಿ-7 ಶೃಂಗಸಭೆಯ ಬಳಿಕ ಪ್ರಧಾನಿ ಮೋದಿ ಯುಎಇ ಪ್ರವಾಸ ಕೈಗೊಂಡಿದ್ದಾರೆ.

SCROLL FOR NEXT