ಇಮ್ರಾನ್ ಖಾನ್ 
ವಿದೇಶ

ಇಮ್ರಾನ್ ಖಾನ್ ಮೂರು ಉಡುಗೊರೆ ವಾಚ್‌ಗಳನ್ನು ಅಕ್ರಮವಾಗಿ ಮಾರಾಟ ಮಾಡಿ 36 ಮಿಲಿಯನ್ ಗಳಿಸಿದ್ದಾರೆ: ವರದಿ

ಪಾಕಿಸ್ತಾನದ ಪದಚ್ಯುತ ಪ್ರಧಾನಿ ಇಮ್ರಾನ್ ಖಾನ್ ಅವರು ವಿದೇಶಿ ಗಣ್ಯರು ಉಡುಗೊರೆಯಾಗಿ ನೀಡಿದ ಮೂರು ವಾಚ್‌ಗಳನ್ನು ಸ್ಥಳೀಯ ವಾಚ್ ಡೀಲರ್‌ಗೆ ಅಕ್ರಮವಾಗಿ ಮಾರಾಟ ಮಾಡುವ ಮೂಲಕ 36 ಮಿಲಿಯನ್ ರೂಪಾಯಿ ಗಳಿಸಿದ್ದಾರೆ ಎಂದು ಮಾಧ್ಯಮ ವರದಿ ಮಾಡಿದೆ.

ಇಸ್ಲಾಮಾಬಾದ್: ಪಾಕಿಸ್ತಾನದ ಪದಚ್ಯುತ ಪ್ರಧಾನಿ ಇಮ್ರಾನ್ ಖಾನ್ ಅವರು ವಿದೇಶಿ ಗಣ್ಯರು ಉಡುಗೊರೆಯಾಗಿ ನೀಡಿದ ಮೂರು ವಾಚ್‌ಗಳನ್ನು ಸ್ಥಳೀಯ ವಾಚ್ ಡೀಲರ್‌ಗೆ ಅಕ್ರಮವಾಗಿ ಮಾರಾಟ ಮಾಡುವ ಮೂಲಕ 36 ಮಿಲಿಯನ್ ರೂಪಾಯಿ ಗಳಿಸಿದ್ದಾರೆ ಎಂದು ಮಾಧ್ಯಮ ವರದಿ ಮಾಡಿದೆ.

ಜಿಯೋ ನ್ಯೂಸ್‌ ನ ವಿವರಗಳ ಪ್ರಕಾರ, ಇಮ್ರಾನ್ ಖಾನ್ ಪ್ರಧಾನ ಮಂತ್ರಿಯಾಗಿದ್ದ ಅವಧಿಯಲ್ಲಿ ಒಟ್ಟಾರೆಯಾಗಿ 154 ಮಿಲಿಯನ್‌ಗಿಂತಲೂ ಹೆಚ್ಚು ಮೌಲ್ಯದ ಈ ಆಭರಣ-ವರ್ಗದ ಕೈಗಡಿಯಾರಗಳಿಂದ ಲಕ್ಷ ರೂಪಾಯಿಗಳನ್ನು ಗಳಿಸಿದರು. 

ಅತ್ಯಂತ ದುಬಾರಿ ವಾಚ್ 101 ಮಿಲಿಯನ್ ಮೌಲ್ಯದಾಗಿದೆ. ಪಾಕಿಸ್ತಾನದ ಕಾನೂನಿನ ಪ್ರಕಾರ, ವಿದೇಶಿ ಗಣ್ಯರಿಂದ ಪಡೆದ ಯಾವುದೇ ಉಡುಗೊರೆಯನ್ನು ರಾಜ್ಯ ಠೇವಣಿ ಅಥವಾ ತೋಷಖಾನಾದಲ್ಲಿ ಇಡಬೇಕು. ತೋಷಖಾನಾದಿಂದ ಉಡುಗೊರೆಯಾಗಿ ನೀಡಲಾದ ಆಭರಣಗಳನ್ನು ಮೊದಲಿಗೆ ಮಾರಾಟ ಮಾಡಿ ಅದರಿಂದ ಬಂದ ಹಣದಲ್ಲಿ 20 ಪ್ರತಿಶತವನ್ನು ಮಾತ್ರವನ್ನು ಖಜಾನೆಗೆ ಠೇವಣಿ ಮಾಡಿದ್ದಾರೆ ಎಂದು ದಾಖಲೆಗಳು ಮತ್ತು ಮಾರಾಟದ ರಸೀದಿಗಳನ್ನು ಉಲ್ಲೇಖಿಸಿ ಜಿಯೋ ನ್ಯೂಸ್ ವರದಿ ಮಾಡಿದೆ. 

ಇವರು ಯಾವುದೇ ಉಡುಗೊರೆಗಳನ್ನು ಎಂದಿಗೂ ತೋಷಖಾನಾದಲ್ಲಿ ಠೇವಣಿ ಮಾಡಲಾಗಿಲ್ಲ. ಯಾವುದೇ ಸರ್ಕಾರಿ ಅಧಿಕಾರಿ ಸ್ವೀಕರಿಸಿದ ಉಡುಗೊರೆಯನ್ನು ತಕ್ಷಣವೇ ವರದಿ ಮಾಡಿಲ್ಲ,  ಉಡುಗೊರೆಯನ್ನು ಠೇವಣಿ ಮಾಡಿದ ನಂತರ ಮಾತ್ರ, ಸ್ವೀಕರಿಸುವವರು ಅದನ್ನು ತನ್ನ ಬಳಿ ಇರಿಸಿಕೊಳ್ಳಲು ಬಯಸಿದರೆ ನಿರ್ದಿಷ್ಟ ಮೊತ್ತವನ್ನು ಪಾವತಿಸಬೇಕಾಗುತ್ತದೆ.

ಸೌಹಾರ್ದ ಗಲ್ಫ್ ರಾಷ್ಟ್ರಗಳ ಗಣ್ಯರು ಉಡುಗೊರೆಯಾಗಿ ನೀಡಿದ ಈ ಮೂರು ದುಬಾರಿ ವಾಚ್‌ಗಳ ಮಾರಾಟದಿಂದ ಖಾನ್ ಅವರು 36 ಮಿಲಿಯನ್ ಗಳಿಸಿದ್ದಾರೆ ಎಂದು ತೋಷಖಾನಾ ದಾಖಲೆಗಳು ತೋರಿಸುತ್ತವೆ ವರದಿಯಲ್ಲಿ ಹೇಳಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

IPL 2026 Eliminator: ವಿಶ್ವದಾಖಲೆಯ ಹೊಸ್ತಿಲಲ್ಲಿ ಎಡವಿದ Vaibhav Suryavanshi, ಮತ್ತೊಂದು ರೆಕಾರ್ಡ್ ಜಸ್ಟ್ ಮಿಸ್!

ಬೆಂಗಳೂರು: ಮಾಜಿ ಪ್ರೇಯಸಿ ಕರೆದಳೆಂದು ಮನೆಗೆ ಹೋದ ಪ್ರಿಯಕರ ದುರಂತ ಸಾವು: ಅಷ್ಟಕ್ಕೂ ಆಗಿದ್ದೇನು?

SCROLL FOR NEXT