ವಿದೇಶ

ಐಸಿಸ್ ಮಹಿಳಾ ಬೆಟಾಲಿಯನ್ ನೇತೃತ್ವ ವಹಿಸಿದ್ದ ಅಮೆರಿಕ ಮಹಿಳೆಗೆ 20 ವರ್ಷ ಜೈಲು ಶಿಕ್ಷೆ 

Lingaraj Badiger

ಅಲೆಕ್ಸಾಂಡ್ರಿಯಾ: ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡು ಸಿರಿಯಾದಲ್ಲಿ ಇಸ್ಲಾಮಿಕ್ ಸ್ಟೇಟ್‌(ಐಸಿಸ್) ಉಗ್ರ ಸಂಘಟನೆ ಸೇರಿ ಮಹಿಳಾ ಬೆಟಾಲಿಯನ್ ನೇತೃತ್ವ ವಹಿಸಿಕೊಂಡಿದ್ದ ಭಯೋತ್ಪಾದಕಿಗೆ ಅಮೆರಿಕ ನ್ಯಾಯಾಲಯ ಮಂಗಳವಾರ 20 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ.

ಅಮೆರಿಕದ ಕಾನ್ಸಾಸ್‌ನ ಫಾರ್ಮ್‌ನಲ್ಲಿ ಬೆಳೆದ 42 ವರ್ಷದ ಆಲಿಸನ್ ಫ್ಲೂಕ್-ಎಕ್ರೆನ್ ಗೆ ಖತೀಬಾ ನುಸೈಬಾ ಎಂಬ ಬೆಟಾಲಿಯನ್​ನ ನೇತೃತ್ವ ವಹಿಸಿದ್ದರು. ವರ್ಜೀನಿಯಾದ ಅಲೆಕ್ಸಾಂಡ್ರಿಯಾದಲ್ಲಿನ ಫೆಡರಲ್ ನ್ಯಾಯಾಲಯ ಈ ಭಯೋತ್ಪಾದಕಿಗೆ ಗರಿಷ್ಠ ಶಿಕ್ಷೆ ನೀಡಿದೆ.

ಈ ಮಹಿಳೆ ತನ್ನ ಬಟಾಲಿಯನ್​ನಲ್ಲಿದ್ದ ಸುಮಾರು 100 ಮಹಿಳೆಯರು ಮತ್ತು 10 ವರ್ಷ ವಯಸ್ಸಿನ ಬಾಲಕಿಯರಿಗೆ ಸ್ವಯಂಚಾಲಿತ ಶಸ್ತ್ರಾಸ್ತ್ರಗಳನ್ನು ಹೇಗೆ ಬಳಸುವುದು ಮತ್ತು ಗ್ರೆನೇಡ್‌, ಆತ್ಮಹತ್ಯಾ ಬೆಲ್ಟ್‌ಗಳನ್ನು ಹೇಗೆ ಸ್ಫೋಟಿಸಬೇಕೆಂಬ ಕುರಿತು ತರಬೇತಿ ನೀಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾಳೆ.

"ನೀವು ಭಯೋತ್ಪಾದಕ ಸಂಘಟನೆಗೆ ವಸ್ತು ಬೆಂಬಲವನ್ನು ನೀಡುತ್ತಿರುವಿರಿ ಎಂಬುದರಲ್ಲಿ ಯಾವುದೇ ಪ್ರಶ್ನೆಯಿಲ್ಲ" ಎಂದು ನ್ಯಾಯಾಧೀಶರು ಹೇಳಿದರು.

ಫ್ಲೂಕ್-ಎಕ್ರೆನ್ ಎಂಟು ವರ್ಷಗಳಿಗೂ ಹೆಚ್ಚು ಕಾಲ ಲಿಬಿಯಾ, ಇರಾಕ್ ಮತ್ತು ಸಿರಿಯಾದ ಯುದ್ಧ ಪೀಡಿತ ಪ್ರದೇಶಗಳಲ್ಲಿ ಭಯೋತ್ಪಾದನೆ ಅಮಲಿನಲ್ಲಿ" ತೊಡಗಿದ್ದರು. ಇಸ್ಲಾಮಿಕ್ ಸ್ಟೇಟ್‌ ಪರವಾಗಿ ದಾಳಿಗಳನ್ನು ನಡೆಸಲು ಇತರ ಮಹಿಳೆಯರು ಮತ್ತು ಯುವತಿಯರಿಗೆ ತರಬೇತಿ ನೀಡುತ್ತಿದ್ದರು ಎಂದು ಯುಎಸ್ ಅಟಾರ್ನಿ ರಾಜ್ ಪರೇಖ್ ಹೇಳಿದ್ದಾರೆ.

SCROLL FOR NEXT