ವಿದೇಶ

ಟ್ವಿಟ್ಟರ್ ನಿಂದ ಉದ್ಯೋಗಿಗಳ ವಜಾಗೊಳಿಸುವ ಪ್ರಕ್ರಿಯೆ ಇಂದು ಆರಂಭ: ಮಾಧ್ಯಮ ವರದಿ

Sumana Upadhyaya

ನ್ಯೂಯಾರ್ಕ್: ಬಿಲಿಯನೇರ್ ಉದ್ಯಮಿ ಎಲೋನ್ ಮಸ್ಕ್(Elon Musk) ಟ್ವಿಟರ್ ನ್ನು ಸ್ವಾಧೀನಪಡಿಸಿಕೊಂಡ ಒಂದು ವಾರದ ನಂತರ, ಕಂಪನಿಯಲ್ಲಿ ಉದ್ಯೋಗಿಗಳ ಸಾಮೂಹಿಕ ವಜಾಗೊಳಿಸುವಿಕೆ(Mass layoff) ಶುಕ್ರವಾರ ಪ್ರಾರಂಭವಾಗುವ ನಿರೀಕ್ಷೆಯಿದೆ. ಟ್ವಿಟರ್‌(Twitter) ಸಂಸ್ಥೆಯಲ್ಲಿ ಈಗಿರುವ ಸುಮಾರು 7 ಸಾವಿರದ 500 ಮಂದಿ ಕಾರ್ಮಿಕರಲ್ಲಿ ಅರ್ಧದಷ್ಟು ಜನರು ತಮ್ಮ ಉದ್ಯೋಗವನ್ನು ಕಳೆದುಕೊಳ್ಳಲಿದ್ದಾರೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ. 

ಟ್ವಿಟ್ಟರ್ ಸಂಸ್ಥೆಯ ಇಮೇಲ್ ವೊಂದನ್ನು ಉಲ್ಲೇಖಿಸಿರುವ ನ್ಯೂಯಾರ್ಕ್ ಟೈಮ್ಸ್, ಎಲೋನ್ ಮಸ್ಕ್ ಅವರು 44 ಶತಕೋಟಿ ಡಾಲರ್ ಮೊತ್ತದ ಟ್ವಿಟ್ಟರ್ ಸಂಸ್ಥೆಯನ್ನು ಸಂಪೂರ್ಣವಾಗಿ ಸ್ವಾಧೀನಪಡಿಸಿಕೊಂಡ ನಂತರ, ಭಾರತ ಮೂಲದ ಕಾನೂನು ಕಾರ್ಯನಿರ್ವಾಹಕ ಸಿಇಒ ಪರಾಗ್ ಅಗರವಾಲ್ ಅವರನ್ನು ಪದಚ್ಯುತಗೊಳಿಸಿದ ಒಂದು ವಾರದ ನಂತರ ಇಂದು ಉದ್ಯೋಗಿಗಳನ್ನು ವಜಾಗೊಳಿಸಲು ಪ್ರಾರಂಭಿಸುತ್ತಾರೆ ಎಂದು ವರದಿ ಮಾಡಿದೆ. ಎಲೋನ್ ಮಸ್ಕ್ ಅವರು ಟ್ವಿಟ್ಟರ್ ನಲ್ಲಿ ಕಾರ್ಯನಿರ್ವಹಣಾಧಿಕಾರಿಯಾಗಿದ್ದ ವಿಜಯ ಗಡ್ಡೆ, ಮುಖ್ಯ ಹಣಕಾಸು ಅಧಿಕಾರಿ ನೆಡ್ ಸೆಗಲ್ ಮತ್ತು ಜನರಲ್ ಕೌನ್ಸಿಲ್ ಸೀನ್ ಎಡ್ಜೆಟ್ ಅವರನ್ನು ಕೂಡ ವಜಾಗೊಳಿಸಿದ್ದಾರೆ. 

ಕಂಪೆನಿಯಲ್ಲಿ ಉದ್ಯೋಗಿಗಳನ್ನು ವಜಾಗೊಳಿಸುವಿಕೆ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗುವುದು ಎಂದು ಇಮೇಲ್‌ನಲ್ಲಿ ತಿಳಿಸಲಾಗಿತ್ತು. ಅಲ್ಲದೆ ನೌಕರರಿಗೆ ಶುಕ್ರವಾರ ಮನೆಗೆ ಹೋಗುವಂತೆ ಮತ್ತು ಕಚೇರಿಗಳಿಗೆ ಹಿಂತಿರುಗದಂತೆ ಕೆಲಸಗಾರರಿಗೆ ಸೂಚಿಸಲಾಗಿದೆ ಎಂದು ಕೂಡ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.

ಟ್ವಿಟರ್‌ಗೆ ಪ್ರಾಮಾಣಿಕವಾಗಿ ಮೌಲ್ಯಯುತವಾದ ಕೊಡುಗೆಗಳನ್ನು ನೀಡಿದ ಹಲವಾರು ವ್ಯಕ್ತಿಗಳ ಮೇಲೆ ಇದು ಪರಿಣಾಮ ಬೀರುತ್ತದೆ, ಆದರೆ ದುರದೃಷ್ಟವಶಾತ್, ಕಂಪನಿಯ ಯಶಸ್ಸಿಗೆ ಈ ಕ್ರಮವು ಅವಶ್ಯಕವಾಗಿದೆ. 3,738 ಮಂದಿ ನೌಕರರನ್ನು ವಜಾಗೊಳಿಸಬಹುದು ಮತ್ತು ಇನ್ನೂ ಹಲವು ಬದಲಾವಣೆಗಳನ್ನು ಮಾಡಬಹುದು ಎಂದು ವರದಿಯಲ್ಲಿ ಹೇಳಲಾಗಿದೆ.

ಎಷ್ಟು ಮಂದಿ ಉದ್ಯೋಗಿಗಳನ್ನು ವಜಾಗೊಳಿಸಲಾಗುವುದು ಎಂದು  ನಿಖರವಾದ ಸಂಖ್ಯೆ ಇನ್ನೂ ಸ್ಪಷ್ಟವಾಗಿಲ್ಲವಾದರೂ, ಟ್ವಿಟರ್‌ನ ಅರ್ಧದಷ್ಟು ಕೆಲಸಗಾರರು ತಮ್ಮ ಉದ್ಯೋಗವನ್ನು ಕಳೆದುಕೊಳ್ಳಲು ಸಿದ್ಧರಾಗಿದ್ದಾರೆ" ಎಂದು ಅಂದಾಜಿಸಲಾಗಿದೆ.

ಸಾಮಾಜಿಕ ಮಾಧ್ಯಮ ವೇದಿಕೆಯಾದ ಟ್ವಿಟ್ಟರ್ ನಲ್ಲಿ ವ್ಯಕ್ತಿ ಅಥವಾ ಕಂಪನಿಯನ್ನು ದೃಢೀಕರಿಸುವ ಬಳಕೆದಾರರ ಹೆಸರಿನ ಮುಂದೆ ನೀಲಿ ಪರಿಶೀಲನೆ ಟಿಕ್‌ಗೆ ತಿಂಗಳಿಗೆ 8 ಡಾಲರ್ ಶುಲ್ಕ ವಿಧಿಸುವುದು ಸೇರಿದಂತೆ ಹಲವು ಬದಲಾವಣೆಗಳನ್ನು ತರುವ ಯೋಜನೆಗಳನ್ನು ಮಸ್ಕ್ ಘೋಷಿಸಿದ್ದಾರೆ.

SCROLL FOR NEXT