ಅರ್ಜೆಂಟೀನಾದ ಮರಿಯಾನಾ ವರೆಲಾ ಮತ್ತು ಪೋರ್ಟೊ ರಿಕೊದ ಫ್ಯಾಬಿಯೋಲಾ ವ್ಯಾಲೆಂಟಿನ್ 
ವಿದೇಶ

ಮಿಸ್ ಪೋರ್ಟೊ ರಿಕೊ, ಮಿಸ್ ಅರ್ಜೆಂಟೀನಾ ಸಲಿಂಗ ವಿವಾಹ; ಮಧುರವಾದ ವಿಡಿಯೋ ಮೂಲಕ ಘೋಷಣೆ

ಮಾಜಿ ಸುಂದರಿಯರಾದ ಅರ್ಜೆಂಟೀನಾದ ಮರಿಯಾನಾ ವರೆಲಾ ಮತ್ತು ಪೋರ್ಟೊ ರಿಕೊದ ಫ್ಯಾಬಿಯೋಲಾ ವ್ಯಾಲೆಂಟಿನ್ ರಹಸ್ಯವಾಗಿ ಮದುವೆಯಾಗಿರುವುದಾಗಿ ಘೋಷಿಸಿಕೊಂಡಿದ್ದಾರೆ.

ಹವಾನಾ: ಮಾಜಿ ಸುಂದರಿಯರಾದ ಅರ್ಜೆಂಟೀನಾದ ಮರಿಯಾನಾ ವರೆಲಾ ಮತ್ತು ಪೋರ್ಟೊ ರಿಕೊದ ಫ್ಯಾಬಿಯೋಲಾ ವ್ಯಾಲೆಂಟಿನ್ ರಹಸ್ಯವಾಗಿ ಮದುವೆಯಾಗಿರುವುದಾಗಿ ಘೋಷಿಸಿಕೊಂಡಿದ್ದಾರೆ.

ಇವರಿಬ್ಬರೂ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಇದನ್ನು ಬಹಿರಂಗಪಡಿಸುತ್ತಿದ್ದಂತೆಯೇ ಲ್ಯಾಟಿನ್ ಅಮೆರಿಕದಾದ್ಯಂತ ಎಲ್ ಜಿಬಿಟಿಕ್ಯೂ (ಸಲಿಂಗಿ ಕಾಮಿಗಳು) ಸಮುದಾಯ ಆಚರಣೆ ಮಾಡಿದ್ದಾರೆ. ಈ ವಲಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಸಲಿಂಗಿ ಕಾಮಿಗಳು ತಮ್ಮ ಹಕ್ಕು ಪಡೆಯುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದ್ದಾರೆ.  

ನಮ್ಮ ಸಂಬಂಧವನ್ನು ಖಾಸಗಿಯಾಗಿ ಇರಿಸಿಕೊಳ್ಳಲು ನಿರ್ಧರಿಸಿದ ನಂತರ ಇದೇ ಅಕ್ಟೋಬರ್ 28 ರಂದು ನಾವು ಮದುವೆಯಾಗಿರುವುದಾಗಿ  ವ್ಯಾಲೆಂಟಿನ್ ಮತ್ತು ವಲೇರಾ ಫೋಸ್ಟ್ ಮಾಡಿದ್ದಾರೆ. ವಿಡಿಯೋದಲ್ಲಿ ಬಾರ್, ಬೀಚ್ ನಲ್ಲಿ 
ಇವರಿಬ್ಬರೂ ಮಾಡಿರುವ ರಜೆಯ ಮಜಾ ಮತ್ತಿತರ ದೃಶ್ಯಗಳಿವೆ.

ಗೋಲ್ಡ್ ಮತ್ತು ಸಿಲ್ವರ್ ಬಣ್ಣದ ಬಲೂನಿನಲ್ಲಿ ಮದುವೆಯಾಗು? ಎಂದು ಕೇಳುವುದು ನಂತರ ಇಬ್ಬರು ಒಟ್ಟಾಗುವ ಚಿತ್ರವೂ ಇದೆ.  ಪೋರ್ಟೊ ರಿಕೊದ ಸ್ಯಾನ್ ಜುವಾನ್‌ನಲ್ಲಿರುವ ನ್ಯಾಯಾಲಯದ ಹೊರಗೆ ವ್ಯಾಲೆಂಟಿನ್ ಮತ್ತು ವ್ಯಾಲೆರಾ ಶ್ವೇತವರ್ಣದ ಉಡುಪಿನಲ್ಲಿ ಚುಂಬಿಸುವ ದೃಶ್ಯದೊಂದಿಗೆ ವೀಡಿಯೊ ಕೊನೆಗೊಳ್ಳುತ್ತದೆ.

2015 ರಲ್ಲಿ ಪೋರ್ಟೊ ರಿಕೊದಲ್ಲಿ ಸಲಿಂಗ ವಿವಾಹವು ಕಾನೂನುಬದ್ಧವಾಯಿತು. 2020 ರಲ್ಲಿ ಹೆಚ್ಚುವರಿಯಾಗಿ ಸಲಿಂಗಿ ಕಾಮಿಗಳ ರಕ್ಷಣೆ ಜೊತೆಗೆ ಹೊಸ ಕಾನೂನು ಜಾರಿಗೆ ಬಂದಿತು. 

ಎಲ್ಲಾ ಪ್ರೀತಿಗೆ ಧನ್ಯವಾದಗಳು! ನಾವು ತುಂಬಾ  ಸಂತೋಷದಿಂದ ಇದ್ದೇವೆ ಎಂದು ವಲೇರಾ ಬರೆದಿದ್ದಾರೆ. ಇವರಿಬ್ಬರೂ 2020 ರಲ್ಲಿ ಥೈಲ್ಯಾಂಡ್‌ನಲ್ಲಿ ನಡೆದ ಮಿಸ್ ಗ್ರ್ಯಾಂಡ್ ಇಂಟರ್‌ನ್ಯಾಷನಲ್ ಸ್ಪರ್ಧೆಯಲ್ಲಿ ಭೇಟಿಯಾದರು, ಅಲ್ಲಿ ಅವರು ತಮ್ಮ ದೇಶಗಳನ್ನು ಪ್ರತಿನಿಧಿಸಿದರು. ಅಂದಿನಿಂದ ಅವರು ಸಾಮಾಜಿಕ ಮಾಧ್ಯಮದಲ್ಲಿ ಒಟ್ಟಿಗೆ ಪೋಸ್ಟ್ ಮಾಡುವುದನ್ನು ಮುಂದುವರೆಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ಅಧ್ಯಕ್ಷೆ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್