ವಿದೇಶ

ಯುಎಸ್ ಮೂಲದ ಮೂವರು ಅರ್ಥಶಾಸ್ತ್ರಜ್ಞರಿಗೆ ನೊಬೆಲ್ ಪುರಸ್ಕಾರ

Nagaraja AB

ಸ್ಟಾಕ್‌ಹೋಮ್‌:  ಆರ್ಥಿಕ ವಿಜ್ಞಾನದಲ್ಲಿ ಈ ವರ್ಷದ ನೊಬೆಲ್ ಪ್ರಶಸ್ತಿಯನ್ನು ಬ್ಯಾಂಕ್‌ಗಳು ಮತ್ತು ಆರ್ಥಿಕ ಬಿಕ್ಕಟ್ಟುಗಳ ಸಂಶೋಧನೆ ಸಂಬಂಧ ಯುಎಸ್ ಮೂಲದ ಮೂವರು ಅರ್ಥಶಾಸ್ತ್ರಜ್ಞರನ್ನು ಆಯ್ಕೆ ಮಾಡಲಾಗಿದೆ.

ಯು.ಎಸ್. ಫೆಡರಲ್ ರಿಸರ್ವ್ ಮಾಜಿ ಮುಖ್ಯಸ್ಥ ಬೆನ್ ಎಸ್. ಬರ್ನಾಂಕೆ ಮತ್ತು ಅಮೆರಿಕ ಮೂಲದ ಇಬ್ಬರು ಅರ್ಥಶಾಸ್ತ್ರಜ್ಞರಾದ  ಡೌಗ್ಲಾಸ್ ಡಬ್ಲ್ಯೂ. ಡೈಮಂಡ್ ಮತ್ತು ಫಿಲಿಪ್ ಎಚ್. ಡಿಬ್ವಿಗ್ ಅವರಿಗೆ ಪ್ರಶಸ್ತಿಯನ್ನು ಸೋಮವಾರ  ನೊಬೆಲ್ ಪ್ಯಾನೆಲ್ ಪ್ರಕಟಿಸಿದೆ.

ನೊಬೆಲ್ ಪ್ರಶಸ್ತಿಗಳು 10 ಮಿಲಿಯನ್ ಸ್ವೀಡಿಶ್ ಕ್ರೋನರ್ (ಸುಮಾರು $900,000) ನಗದು ಪ್ರಶಸ್ತಿಯನ್ನು ಹೊಂದಿರುತ್ತವೆ ಮತ್ತು ಡಿಸೆಂಬರ್ 10 ರಂದು ಹಸ್ತಾಂತರಿಸಲಾಗುವುದು.

ಇತರ ನೊಬೆಲ್ ಪ್ರಶಸ್ತಿಗಳಂತೆ ಅರ್ಥಶಾಸ್ತ್ರಜ್ಞರಿಗೆ ಅಲ್ಫೈಡ್ ನೊಬೆಲ್ 1895ರಲ್ಲಿ ಪ್ರಶಸ್ತಿ ಸ್ಥಾಪಿಸಿರಲಿಲ್ಲ ಆದರೆ, ಅವರ ನೆನಪಿನಲ್ಲಿ ಸ್ವಿಡೀಸ್ ಸೆಂಟ್ರಲ್ ಬ್ಯಾಂಕ್ ಈ ಪ್ರಶಸ್ತಿಯನ್ನು ನೀಡುತ್ತಿದೆ. 1969ರಲ್ಲಿ ಮೊದಲ ವಿಜೇತರನ್ನು ಪ್ರಕಟಿಸಲಾಯಿತು. 

SCROLL FOR NEXT