ಮಾರಣಾಂತಿಕ ದಾಳಿ: ಒಂದು ಕಣ್ಣಿನ ದೃಷ್ಟಿ, ಕೈ ಸ್ವಾಧೀನ ಕಳೆದುಕೊಂಡ ಲೇಖಕ ಸಲ್ಮಾನ್ ರಶ್ದಿ
ಇತ್ತೀಚೆಗಷ್ಟೇ ದಾಳಿಗೆ ಒಳಗಾಗಿದ್ದ ಲೇಖಕ ಸಲ್ಮಾನ್ ರಶ್ದಿ ಒಂದು ಕಣ್ಣಿನ ದೃಷ್ಟಿ ಹಾಗೂ ಒಂದು ಕೈ ಸ್ವಾಧೀನ ಕಳೆದುಕೊಂಡಿದ್ದಾರೆ.
ಮ್ಯಾಡ್ರಿಡ್: ಇತ್ತೀಚೆಗಷ್ಟೇ ದಾಳಿಗೆ ಒಳಗಾಗಿದ್ದ ಲೇಖಕ ಸಲ್ಮಾನ್ ರಶ್ದಿ ಒಂದು ಕಣ್ಣಿನ ದೃಷ್ಟಿ ಹಾಗೂ ಒಂದು ಕೈ ಸ್ವಾಧೀನ ಕಳೆದುಕೊಂಡಿದ್ದಾರೆ.
ಅಮೇರಿಕಾದ ನ್ಯೂ ಯಾರ್ಕ್ ಸ್ಟೇಟ್ ನಲ್ಲಿ ಉಪನ್ಯಾಸ ನೀಡುತ್ತಿದ್ದ ವೇಳೆ, ರಶ್ದಿ ವಿರುದ್ಧ ದಾಳಿ ನಡೆದಿತ್ತು. 1980 ರಲ್ಲಿ ಸೆಟಾನಿಕ್ ವರ್ಸಸ್ ಪುಸ್ತಕ ಬರೆದಿದ್ದ ರಶ್ದಿ ಅವರಿಗೆ ಇರಾನ್ ನಿಂದ ಆಗಾಗ್ಗೆ ಬೆದರಿಕೆ ಕರೆಗಳು ಬರುತ್ತಿದ್ದವು. ಆ.12 ರಂದು ಚೌಟಕ್ವಾ ಸಂಸ್ಥೆಯಲ್ಲಿ ಉಪನ್ಯಾಸ ನೀಡುತ್ತಿದ್ದ ರಶ್ದಿ ಅವರ ಮೇಲೆ ವೇದಿಕೆಯಲ್ಲೇ ಮಾರಣಾಂತಿಕ ದಾಳಿ ನಡೆದಿತ್ತು.
ಈಗಿನವರೆಗೂ ರಶ್ದಿ ಅವರಿಗೆ ಉಂಟಾಗಿರುವ ಗಾಯದ ಪ್ರಮಾಣ ಸ್ಪಷ್ಟವಾಗಿಲ್ಲ ಎಂದು ತಿಳಿದುಬಂದಿದೆ. "ರಶ್ದಿ ಅವರಿಗೆ ಆಳವಾದ ಗಾಯಗಳಾಗಿದ್ದು, ತೋಳುಗಳಲ್ಲಿನ ನರಗಳು ಕತ್ತರಿಸಿಹೋಗಿವೆ. ಎದೆಯ ಭಾಗದಲ್ಲೇ 15 ಗಾಯಗಳಾಗಿವೆ ಎಂದು ದಿ ಗಾರ್ಡಿಯನ್ ವರದಿ ಪ್ರಕಟಿಸಿದೆ.
ದಿ ಗಾರ್ಡಿಯನ್ ವರದಿಯಲ್ಲಿ ಏಜೆಂಟ್ ಒಬ್ಬರನ್ನು ಉಲ್ಲೇಖಿಸಲಾಗಿದ್ದು, ರಶ್ದಿ ಆಸ್ಪತ್ರೆಯಲ್ಲಿದ್ದಾರೋ ಇಲ್ಲವೋ ಎಂಬ ಬಗ್ಗೆಯೂ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.