ಅಮೆರಿಕದ ಅಧ್ಯಕ್ಷ ಜೋ ಬೈಡೆನ್ 
ವಿದೇಶ

ರಾಷ್ಟ್ರೀಯ ಮೂಲಸೌಕರ್ಯ ಸಲಹಾ ಕೌನ್ಸಿಲ್ ಗೆ ಇಬ್ಬರು ಭಾರತೀಯ ಅಮೇರಿಕನ್ನರ ನೇಮಕ

ಅಮೇರಿಕದ ಅಧ್ಯಕ್ಷ ಜೋ ಬೈಡನ್ ತಮ್ಮ ರಾಷ್ಟ್ರೀಯ ಮೂಲಸೌಕರ್ಯ ಸಲಹಾ ಕೌನ್ಸಿಲ್ ಗೆ ಇಬ್ಬರು ಭಾರತೀಯ ಅಮೇರಿಕನ್ನರನ್ನು ನೇಮಕ ಮಾಡುವ ಇಂಗಿತ

ನ್ಯೂಯಾರ್ಕ್: ಅಮೇರಿಕದ ಅಧ್ಯಕ್ಷ ಜೋ ಬೈಡನ್ ತಮ್ಮ ರಾಷ್ಟ್ರೀಯ ಮೂಲಸೌಕರ್ಯ ಸಲಹಾ ಕೌನ್ಸಿಲ್ ಗೆ ಇಬ್ಬರು ಭಾರತೀಯ ಅಮೇರಿಕನ್ನರನ್ನು ನೇಮಕ ಮಾಡುವ ಇಂಗಿತ. ಮನು ಆಸ್ತಾನ ಹಾಗೂ ಮಧು ಬೆರಿವಾಲ್ ಅವರನ್ನು ಬೈಡನ್ ಉನ್ನತ ಹುದ್ದೆಗೆ ನೇಮಕ ಮಾಡುವ ಇಂಗಿತ ವ್ಯಕ್ತಪಡಿಸಿದ್ದಾರೆ.
 
ಅಮೆರಿಕ ಅಧ್ಯಕ್ಷರ ರಾಷ್ಟ್ರೀಯ ಮೂಲಸೌಕರ್ಯ ಸಲಹಾ ಪರಿಷತ್, ದೇಶದ ಪ್ರಮುಖ ಮೂಲಸೌಕರ್ಯ ಕ್ಷೇತ್ರಗಳಲ್ಲಿ ಭದ್ರತೆ ಮತ್ತು ಸ್ಥಿತಿಸ್ಥಾಪಕತ್ವವನ್ನು ಸುಧಾರಿಸುವುದಕ್ಕಾಗಿ ದೈಹಿಕ ಮತ್ತು ಸೈಬರ್ ಅಪಾಯಗಳನ್ನು ಕಡಿಮೆ ಮಾಡುವ ಬಗ್ಗೆ ಶ್ವೇತ ಭವನಕ್ಕೆ ಸಲಹೆ ನೀಡಲಿದೆ.

ಎನ್ಐಎಸಿ ಗೆ ಘೋಷಣೆಯಾಗಿರುವ 26 ಮಂದಿ, ಬ್ಯಾಂಕಿಂಗ್, ವಿದ್ಯುತ್, ಜಲ, ಅಣೆಕಟ್ಟು, ರಕ್ಷಣೆ, ಸಂವಹನ, ಮಾಹಿತಿ ತಂತ್ರಜ್ಞಾನ, ಆರೋಗ್ಯ ಸೇವೆಗಳು, ಆಹಾರ, ಕೃಷಿ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿರುವ, ಅಗಾಧ ಅನುಭವ ಹೊಂದಿರುವ ಹಿರಿಯ ಅಧಿಕಾರಿಗಳಾಗಿದ್ದಾರೆ. ಆಸ್ತಾನ ಉತ್ತರ ಅಮೇರಿಕಾದಲ್ಲಿ ಅತಿ ದೊಡ್ಡ ಪವರ್ ಗ್ರಿಡ್ ನ ಸಿಇಒ, ಅಧ್ಯಕ್ಷರಾಗಿದ್ದು, ಇದು ವಿಶ್ವದಲ್ಲೇ ಅತಿ ದೊಡ್ಡ ವಿದ್ಯುತ್ ಮಾರುಕಟ್ಟೆಯಾಗಿದೆ.

ಆಸ್ತಾನ ಅವರ ನಾಯಕತ್ವದಲ್ಲಿ ಪಿಜೆಎಂ ಗ್ರಿಡ್ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದು ವಿಶ್ವಾಸಾರ್ಹ ವಿದ್ಯುತ್ ಸೇವೆಯನ್ನು ಒದಗಿಸಿದೆ ಎಂದು ಶ್ವೇತ ಭವನ ಹೇಳಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT