ವಿದೇಶ

ಸ್ವದೇಶಕ್ಕೆ ತೆರಳುವಂತೆ ಭಾರತೀಯ ಮೂಲದ ಅಮೆರಿಕಾ ಸಂಸದೆ ಪ್ರಮೀಳಾ ಜಯಪಾಲ್ ಗೆ ಅಪರಿಚಿತನಿಂದ ಬೆದರಿಕೆ!

Shilpa D

ವಾಷಿಂಗ್ಟನ್: ಭಾರತ ಮೂಲದ ಅಮೆರಿಕದ ಸಂಸದೆ ಪ್ರಮೀಳಾ ಜಯಪಾಲ್‌ ಅವರಿಗೆ ಸ್ವದೇಶಕ್ಕೆ ವಾಪಸ್‌ ಹೋಗುವಂತೆ ನಿಂದಿಸಿ ವ್ಯಕ್ತಿಯೊಬ್ಬ ಬೆದರಿಕೆ ಒಡ್ಡಿದ್ದಾನೆ.

ಸಂಸದೆ ಪ್ರಮೀಳಾ ಜಯಪಾಲ್ ಅವರನ್ನು ನಿಂದಿಸಿ ಐದು ಆಡಿಯೋ ಸಂದೇಶಗಳನ್ನು ಗುರುವಾರ ಕಳುಹಿಸಲಾಗಿದೆ. ಎಲ್ಲ ಸಂದೇಶಗಳಲ್ಲೂ ಅವಾಚ್ಯ ಪದಗಳು ತುಂಬಿರುವುದರಿಂದ ಅವುಗಳನ್ನು ತಡೆಹಿಡಿಯಲಾಗಿದೆ. ಈ ಪೈಕಿ ಒಂದು ಸಂದೇಶದಲ್ಲಿ ಚೆನ್ನೈ ಮೂಲದ ಸಂಸದೆಯನ್ನು ಭಾರತಕ್ಕೆ ವಾಪಸ್‌ ಹೋಗುವಂತೆ ಬೆದರಿಕೆ ಒಡ್ಡಲಾಗಿದೆ.

55 ವರ್ಷದ ಜಯಪಾಲ್ ಅವರು ಅಮರಿಕಾದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನಲ್ಲಿ ಸಿಯಾಟಲ್ ಅನ್ನು ಪ್ರತಿನಿಧಿಸುವ ಮೊದಲ ಭಾರತೀಯ-ಅಮೆರಿಕನ್ ಕಾಂಗ್ರೆಸ್ ಮಹಿಳೆಯಾಗಿದ್ದಾರೆ.

ಜುಲೈ ತಿಂಗಳಲ್ಲಿ ಪ್ರಮಿಳಾ ಅವರ ಸಿಯಾಟೆಲ್ ನಿವಾಸದ ಎದುರು ವ್ಯಕ್ತಿಯೊಬ್ಬ ಪಿಸ್ತೂಲ್‌ ಹಿಡಿದು ನಿಂತಿದ್ದ. ‘ಭಾರತಕ್ಕೆ ಹೊರಟು ಹೋಗಿ’ ಎಂದು ಕೂಗಾಡಿದ್ದ. ಕೊನೆಗೆ ಆತನನ್ನು ಬಂಧಿಸಲಾಗಿತ್ತು.

ಇದು ಅಮೆರಿಕದಲ್ಲಿ ಭಾರತೀಯ ಮೂಲದವರ ವಿರುದ್ಧ ನಡೆದ ಇತ್ತೀಚಿನ ದ್ವೇಷಪೂರಿತ ಘಟನೆಯಾಗಿದೆ. ಸೆಪ್ಟೆಂಬರ್‌ 1ರಂದು ಕ್ಯಾಲಿಫೋರ್ನಿಯಾದಲ್ಲಿ ಭಾರತೀಯ ಮೂಲದ ವ್ಯಕ್ತಿಯೊಬ್ಬನನ್ನು ಅಲ್ಲಿನ ಸ್ಥಳೀಯ ವ್ಯಕ್ತಿಯೊಬ್ಬ ಕೊಳಕು ಹಿಂದೂ, ಜಿಗುಪ್ಸೆ ತರಿಸುವ ನಾಯಿ ಎಂದೆಲ್ಲ ನಿಂದಿಸಿದ್ದ.

ಸಾಮಾನ್ಯವಾಗಿ, ರಾಜಕೀಯ ವ್ಯಕ್ತಿಗಳು ತಮ್ಮ ದುರ್ಬಲತೆಯನ್ನು ತೋರಿಸುವುದಿಲ್ಲ. ಹಿಂಸೆಯನ್ನು ನಮ್ಮ ಹೊಸ ಹವ್ಯಾಸವಾಗಿ ಸ್ವೀಕರಿಸಲು ಸಾಧ್ಯವಿಲ್ಲದ ಕಾರಣ ನಾನು ಇಲ್ಲಿ ಹಾಗೆ ಮಾಡಲು ನಿರ್ಧರಿಸಿದೆ.  ಹಿಂಸಾಚಾರಕ್ಕೆ ಪ್ರೇರೇಪಿಸುವ ವರ್ಣಭೇದ ನೀತಿ ಮತ್ತು ಲಿಂಗಭೇದಭಾವವನ್ನು ನಾವು ಸಹ ಒಪ್ಪಿಕೊಳ್ಳಲು ಸಾಧ್ಯವಿಲ್ಲ" ಎಂದು ಜಯಪಾಲ್ ಹೇಳಿದ್ದಾರೆ.

SCROLL FOR NEXT