ರಾಣಿ 2ನೇ ಎಲಿಜಬೆತ್ ಅಂತ್ಯಕ್ರಿಯೆ 
ವಿದೇಶ

ರಾಣಿ 2ನೇ ಎಲಿಜಬೆತ್ ಗೆ ಬ್ರಿಟನ್ ಜನತೆಯ ಅಂತಿಮ ವಿದಾಯ; ಸಕಲ ಗೌರವಗಳೊಂದಿಗೆ ನೆರವೇರಿದ ಅಂತ್ಯಕ್ರಿಯೆ 

ರಾಜಮನೆತನ, ರಾಣಿಯರು, ಜಾಗತಿಕ ಮಟ್ಟದ ನಾಯಕರ ಅಂತಿಮ ನಮನಗಳೊಂದಿಗೆ ಬ್ರಿಟನ್ ನ ದೀರ್ಘಾವಧಿ ಆಳಿದ ರಾಣಿ 2 ನೇ ಎಲಿಜಬೆತ್ ಅವರ ಅಂತ್ಯಕ್ರಿಯೆ ಸೆ.19 ರಂದು ಸಕಲ ಗೌರವಗಳೊಂದಿಗೆ ನಡೆಯಿತು. 

ಲಂಡನ್: ರಾಜಮನೆತನ, ರಾಣಿಯರು, ಜಾಗತಿಕ ಮಟ್ಟದ ನಾಯಕರ ಅಂತಿಮ ನಮನಗಳೊಂದಿಗೆ ಬ್ರಿಟನ್ ನ ದೀರ್ಘಾವಧಿ ಆಳಿದ ರಾಣಿ 2 ನೇ ಎಲಿಜಬೆತ್ ಅವರ ಅಂತ್ಯಕ್ರಿಯೆ ಸೆ.19 ರಂದು ಸಕಲ ಗೌರವಗಳೊಂದಿಗೆ ನಡೆಯಿತು. 
 
ವೆಸ್ಟ್ ಮಿನಿಸ್ಟರ್ ಅಬ್ಬೇಯಲ್ಲಿ ಅಂತ್ಯಕ್ರಿಯೆಗೂ ಮುನ್ನ, ಅಗಲಿದ ರಾಣಿಗೆ ಗೌರವಾರ್ಥ ಇಡೀ ಬ್ರಿಟನ್ ಎರಡು ನಿಮಿಷಗಳ ಕಾಲ ಮೌನಾಚರಣೆ ಮಾಡಿತು. ಬ್ರಿಟನ್ ರಾಣಿಯ ಅಂತ್ಯಕ್ರಿಯೆಯನ್ನು ಸ್ಕ್ರೀನ್ ಗಳಲ್ಲಿ ಪ್ರಸಾರ ಮಾಡಲಾಗಿತ್ತು. ಜಾಗತಿಕ ಮಟ್ಟದಲ್ಲಿ ಹಲವು ಮಂದಿ ವೀಕ್ಷಿಸಿದರು

ಅಮೆರಿಕ ಅಧ್ಯಕ್ಷ ಜೋ ಬೈಡನ್, ಫ್ರೆಂಚ್ ಅಧ್ಯಕ್ಷ ಇಮ್ಯಾನುವೆಲ್ ಮೆಕ್ರಾನ್, ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಸೇರಿದಂತೆ ಜಾಗತಿಕ ನಾಯಕರು ಮೌನಾಚರಣೆಯಲ್ಲಿ ಪಾಲ್ಗೊಂಡರು. ಬಳಿಕ ರಾಷ್ಟ್ರಗೀತೆ ಯೊಂದಿಗೆ ರಾಣಿಗೆ ಅಂತಿಮ ವಿದಾಯ ಹೇಳಲಾಯಿತು. ವಿಸ್ಟನ್ ಚರ್ಚಿಲ್ 1965 ರಲ್ಲಿ ನಿಧನರಾದ ನಂತರ ಬ್ರಿಟನ್ ನಲ್ಲಿ ನಡೆದ ರಾಜಮನೆತದವರ ಮೊದಲ ಅಂತ್ಯಕ್ರಿಯೆ ಇದಾಗಿದೆ.  

ಕಿಂಗ್ ಜಾರ್ಜ್ VI ಸ್ಮಾರಕ ಚಾಪೆಲ್ ನಲ್ಲಿ ಆಕೆಯ ತಂದೆ ಕಿಂಗ್ ಜಾರ್ಜ್, ತಾಯಿ ರಾಣಿ ಎಲಿಜಬೆತ್  ಮತ್ತು ಆಕೆಯ ಹಿರಿಯ ಸಹೋದರಿ ಸಮಾಧಿ ಬಳಿ 2ನೇ ಎಲಿಜಬೆತ್ ರಾಣಿಯ ಪಾರ್ಥಿವ ಶರೀರವನ್ನು ಸಮಾಧಿ ಮಾಡಲಾಯಿತು. ಸ್ಕಾಟ್ ಲ್ಯಾಂಡ್ ನ ಬಾಲ್ಮೋರಲ್ ಕಾಸ್ಟಲ್ ನಲ್ಲಿ ಸೆಪ್ಟೆಂಬರ್ 8 ರಂದು ರಾಣಿ ಎಲಿಜಬೆತ್ 11 ನಿಧನರಾಗಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT