ವಿದೇಶ

ಬೋಸ್ಟನ್ ವಿಮಾನ ನಿಲ್ದಾಣದಲ್ಲಿ ಬಸ್ ಡಿಕ್ಕಿಯಾಗಿ ಭಾರತೀಯ ಮೂಲದ ವ್ಯಕ್ತಿ ಸಾವು

Vishwanath S

ನ್ಯೂಯಾರ್ಕ್: ಬೋಸ್ಟನ್‌ನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಸ್ ಡಿಕ್ಕಿ ಹೊಡೆದು 47 ವರ್ಷದ ಭಾರತೀಯ-ಅಮೆರಿಕನ್ ಡೇಟಾ ವಿಶ್ಲೇಷಕ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಆಂಧ್ರಪ್ರದೇಶ ಮೂಲದ 47 ವರ್ಷದ ವಿಶ್ವಚಂದ್ ಕೊಲ್ಲಾ ಇಲ್ಲಿನ ಟಕೆಡಾ ಫಾರ್ಮಾಸ್ಯುಟಿಕಲ್ ಕಂಪನಿ ಉದ್ಯೋಗಿಯಾಗಿದ್ದಾರೆ. ಮಾಧ್ಯಮದ ವರದಿಯ ಪ್ರಕಾರ, ವಿಶ್ವಚಂದ್ ಕೊಲ್ಲಾ ಅವರು ತಮ್ಮ  ಸ್ನೇಹಿತನನ್ನು ಕರೆದುಕೊಂಡು ಹೋಗಲು ಬಂದಿದ್ದಾಗ ಅಪಘಾತ ಸಂಭವಿಸಿದೆ.

ಮಾರ್ಚ್ 28ರಂದು ಕೊಲ್ಲಾ ಅವರು ತಮ್ಮ ಸ್ನೇಹಿತ ಸಂಗೀತಗಾರರನ್ನು ಕರೆದೊಯ್ಯಲು ಬೋಸ್ಟನ್‌ನ ಲೋಗನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದಾಗ ಈ ಘಟನೆ ಸಂಭವಿಸಿದೆ ಎಂದು ಯುಎಸ್ ಮಾಧ್ಯಮ ವರದಿ ಮಾಡಿದೆ.

ಸಾಯಂಕಾಲ 5 ಗಂಟೆ ಸುಮಾರಿಗೆ ಬಿ ಟರ್ಮಿನಲ್‌ನ ಕೆಳಮಟ್ಟದಲ್ಲಿರುವ ಸ್ನೇಹಿತನನ್ನು ಕರೆದುಕೊಂಡು ಹೋಗಲು ಕೊಲ್ಲಾ ಹೋಗಿದ್ದ ಎಂದು ಮ್ಯಾಸಚೂಸೆಟ್ಸ್ ಸ್ಟೇಟ್ ಪೊಲೀಸರು ತಿಳಿಸಿದ್ದಾರೆ.  ಅಲ್ಲಿದ್ದ ದಾದಿಯೊಬ್ಬರು ಕೊಲ್ಲಾಗೆ ಸಹಾಯ ಮಾಡಲು ಧಾವಿಸಿದರು ಆದರೆ ಅವರು ಸ್ಥಳದಲ್ಲೇ ಸಾವನ್ನಪ್ಪಿದರು ಎಂದು ವರದಿಯಾಗಿದೆ.

ಕೊಲ್ಲಾ ಟಕೆಡಾ ಕಂಪನಿಯ ಜಾಗತಿಕ ಆಂಕೊಲಾಜಿ ವಿಭಾಗದಲ್ಲಿ ಕೆಲಸ ಮಾಡಿದರು. ಟಕೆಡಾ ಇಂಡಸ್ಟ್ರೀಸ್  ಇಮೇಲ್‌ನಲ್ಲಿ ಘಟನೆಯ ಬಗ್ಗೆ ವಿಷಾದ ವ್ಯಕ್ತಪಡಿಸಿದೆ.

ಏತನ್ಮಧ್ಯೆ, ಕೊಲ್ಲಾ ಅವರ ಸಂಬಂಧಿಕರು ಅವರ ಕುಟುಂಬಕ್ಕೆ ಸಹಾಯ ಮಾಡಲು US $ 750,000 ಸಂಗ್ರಹಿಸುವ ಗುರಿಯೊಂದಿಗೆ 'ಗೋ ಫಂಡ್ ಮಿ' ಪುಟವನ್ನು ಸ್ಥಾಪಿಸಿದ್ದು ಇದುವರೆಗೆ US $ 406,151 ಸಂಗ್ರಹಿಸಿದ್ದಾರೆ.

ಈ ಪುಟದಲ್ಲಿ ನೀಡಿರುವ ಮಾಹಿತಿ ಪ್ರಕಾರ ಕೊಲ್ಲಾ ಅವರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.

SCROLL FOR NEXT