ಅಮೆರಿಕಾದ ನ್ಯೂಜೆರ್ಸಿಯಲ್ಲಿ ರೈಲಿಗೆ ಸಿಲುಕಿ ಭಾರತೀಯ ಮೂಲದ ವ್ಯಕ್ತಿ ಸಾವು

ಆಂಧ್ರಪ್ರದೇಶದ ಅನ್ನಮಯ್ಯ ಜಿಲ್ಲೆಯ 39 ವರ್ಷದ ವ್ಯಕ್ತಿಯೊಬ್ಬರು ನ್ಯೂಜೆರ್ಸಿಯಲ್ಲಿ ಇಂಟರ್ ಸಿಟಿ ರೈಲಿಗೆ ಡಿಕ್ಕಿ ಹೊಡೆದು ಸಾವನ್ನಪ್ಪಿದ್ದಾರೆ. 
ಮೃತ ಶ್ರೀಕಾಂತ್ ದಿಗಾಲ
ಮೃತ ಶ್ರೀಕಾಂತ್ ದಿಗಾಲ

ನ್ಯೂಜೆರ್ಸಿ: ಆಂಧ್ರಪ್ರದೇಶದ ಅನ್ನಮಯ್ಯ ಜಿಲ್ಲೆಯ 39 ವರ್ಷದ ವ್ಯಕ್ತಿಯೊಬ್ಬರು ನ್ಯೂಜೆರ್ಸಿಯಲ್ಲಿ ಇಂಟರ್ ಸಿಟಿ ರೈಲಿಗೆ ಡಿಕ್ಕಿ ಹೊಡೆದು ಸಾವನ್ನಪ್ಪಿದ್ದಾರೆ. 

ಈ ಘಟನೆಯಿಂದಾಗಿ ನ್ಯೂಯಾರ್ಕ್ ಮತ್ತು ಫಿಲಡೆಲ್ಫಿಯಾ ನಡುವಿನ ರೈಲು ಸಂಚಾರ ಕೆಲಕಾಲ ಸ್ಥಗಿತಗೊಂಡಿತ್ತು. ಕಳೆದ ವಾರ ಪ್ರಿನ್ಸ್‌ಟನ್ ಜಂಕ್ಷನ್ ನಿಲ್ದಾಣದಲ್ಲಿ ನಡೆದ ಘಟನೆಯಲ್ಲಿ ನ್ಯೂಜೆರ್ಸಿಯ ಪ್ಲೇನ್ಸ್‌ಬೊರೊ ನಿವಾಸಿ ಶ್ರೀಕಾಂತ್ ದಿಗಲಾ ಸಾವನ್ನಪ್ಪಿದ್ದರು.

ಆಮ್ಟ್ರಾಕ್ ವಕ್ತಾರರು ಡೈಲಿ ವಾಯ್ಸ್‌ಗೆ ಮಾಹಿತಿ ನೀಡಿದ್ದು ಶ್ರೀಕಾಂತ್ ದಿಗಲಾ ಅವರು ಬೋಸ್ಟನ್‌ಗೆ ಪ್ರಯಾಣಿಸುತ್ತಿದ್ದಾಗ ರೈಲು ಅವರಿಗೆ ಡಿಕ್ಕಿ ಹೊಡೆದಿತ್ತು. ಈ ಬಗ್ಗೆ ಪ್ಲೇನ್ಸ್‌ಬೊರೊ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಆಮ್ಟ್ರಾಕ್ ಹೇಳಿದರು.

ದಿಗಾಲ ಕುಟುಂಬದ ಶ್ರೀಕಾಂತ್ ಏಕೈಕ ಆಧಾರವಾಗಿದ್ದರು. ಅವರು ಪತ್ನಿ ಮತ್ತು 10 ವರ್ಷದ ಮಗನನ್ನು ಅಗಲಿದ್ದಾರೆ. 

ದಿಗಾಲ ಕುಟುಂಬದ ನೆರವಿಗೆ ದೇಣಿಗೆ ಸಂಗ್ರಹಿಸಲಾಗುತ್ತಿದೆ. 'ದಯವಿಟ್ಟು ಶ್ರೀಕಾಂತ್ ಅವರ ಕುಟುಂಬಕ್ಕೆ ಸಹಾಯ ಮಾಡಿ ಮತ್ತು ಬೆಂಬಲಿಸಿ. ಅವರ ಪೋಷಕರು ಮತ್ತು ಇಡೀ ಕುಟುಂಬಕ್ಕೆ ಏಕೈಕ ಜೀವನಾಧಾರವಾಗಿದ್ದರು. ದಿಗಾಲಾ ಅವರ ಅಂತಿಮ ವಿಧಿಗಳನ್ನು ಪೂರ್ಣಗೊಳಿಸಲು ತೆಲುಗು ಅಸೋಸಿಯೇಷನ್ ​​ಆಫ್ ನಾರ್ತ್ ಅಮೇರಿಕನ್(ತಾನಾ) ಸೇರಿದಂತೆ ಭಾರತೀಯ ಸಮುದಾಯವು ಭಾರತೀಯ ರಾಯಭಾರ ಕಚೇರಿಯನ್ನು ಸಂಪರ್ಕಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com