ವಿದೇಶ

ಹಿಜಾಬ್ ಇಲ್ಲದೆ ವಿದೇಶದಲ್ಲಿ ಸ್ಪರ್ಧಿಸಿದ ಚೆಸ್ ಆಟಗಾರ್ತಿ; ದೇಶಕ್ಕೆ ಬರಬೇಡ ಎಂದು ಇರಾನ್ ಎಚ್ಚರಿಕೆ

Srinivasamurthy VN

ಟೆಹ್ರಾನ್: ಹಿಜಾಬ್ ಇಲ್ಲದೆ ವಿದೇಶದಲ್ಲಿ ಚೆಸ್ ಟೂರ್ನಿಯಲ್ಲಿ ಸ್ಪರ್ಧಿಸಿದ್ದ ಇರಾನ್ ಆಟಗಾರ್ತಿಗೆ ದೇಶಕ್ಕೆ ಮರಳದಂತೆ ಎಚ್ಚರಿಕೆ ನೀಡಲಾಗಿದೆ.

ಕಜಕಿಸ್ತಾನದ ಅಲ್ಮಾಟಿಯಲ್ಲಿ ಕಳೆದ ವಾರ ನಡೆದ FIDE ವರ್ಲ್ಡ್ ರಾಪಿಡ್ ಮತ್ತು ಬ್ಲಿಟ್ಜ್ ಚೆಸ್ ಚಾಂಪಿಯನ್‌ಶಿಪ್‌ನಲ್ಲಿ ಹಿಜಾಬ್ ಇಲ್ಲದೆ ಸ್ಪರ್ಧಿಸಿದ ನಂತರ ಇರಾನ್ ಚೆಸ್ ಆಟಗಾರ್ತಿ ಸಾರಾ ಖಡೆಮ್ ಅವರಿಗೆ 'ಇರಾನ್‌ಗೆ ಹಿಂತಿರುಗಬೇಡ' ಎಂದು ಎಚ್ಚರಿಕೆ ನೀಡಲಾಗಿದೆ ಎಂದು ದಿ ಸಿಡ್ನಿ ಮಾರ್ನಿಂಗ್ ಹೆರಾಲ್ಡ್ (SMH) ವರದಿ ಮಾಡಿದೆ.

ಇರಾನ್‌ನ ಕಟ್ಟುನಿಟ್ಟಾದ ಡ್ರೆಸ್ ಕೋಡ್‌ಗಳ ಅಡಿಯಲ್ಲಿ ಹೆಡ್ ಸ್ಕಾರ್ಫ್ ಕಡ್ಡಾಯವಾಗಿರುವ ಹಿಜಾಬ್ ಇಲ್ಲದೆ ಸ್ಪರ್ಧಿಸಿದ ಹಿನ್ನಲೆಯಲ್ಲಿ  ಇರಾನ್‌ಗೆ ಚೆಸ್ ಆಟಗಾರ್ತಿ ಸಾರಾ ಖಡೆಮ್ ಅವರಿಗೆ ಬೆದರಿಕೆ ಹಾಕಲಾಗಿದೆ. ಇದೀಗ ಇರಾನ್ ಮೂಲಭೂತವಾದಿಗಳ ಎಚ್ಚರಿಕೆಯಿಂದಾಗಿ  25 ವರ್ಷದಚೆಸ್ ಆಟಗಾರ್ತಿ ಮಂಗಳವಾರ ಸ್ಪೇನ್‌ಗೆ ತೆರಳಿದ್ದಾರೆ.

ಘಟನೆ ಬಳಿಕ ಆಟಗಾರ್ತಿ  ಹಲವಾರು ದೂರುವಾಣಿ ಕರೆಗಳು ಬಂದಿದ್ದು, ದೇಶಕ್ಕೆ ಹಿಂದುರುಗದಂತೆ ಎಚ್ಚರಿಕೆ ನೀಡಿವೆ. ಅದರಲ್ಲಿ ಕೆಲವರು ಪಂದ್ಯಾವಳಿಯ ನಂತರ ಜೀವ ಬೆದರಿಕೆ ಹಾಕಿದ್ದಾರೆ. ಮಾತ್ರವಲ್ಲದೇ ಇರಾನ್‌ನಲ್ಲಿರುವ ಖಾಡೆಂ ಅವರ ಸಂಬಂಧಿಕರು ಮತ್ತು ಪೋಷಕರಿಗೆ ಬೆದರಿಕೆಗಳು ಬಂದಿವೆ ಎನ್ನಲಾಗಿದೆ. ಆದಾಗ್ಯೂ, ಇರಾನ್‌ನ ವಿದೇಶಾಂಗ ಸಚಿವಾಲಯವು ಪ್ರಕರಣದ ಕುರಿತು ಈ ವರೆಗೂ ಪ್ರತಿಕ್ರಿಯೆ ನೀಡಿಲ್ಲ.
 

SCROLL FOR NEXT